ಕರ್ನಾಟಕ ಕರಾವಳಿಯಲ್ಲಿ 48 ಗಂಟೆಗಳ ಕಾಲ ಭಾರೀ ಮಳೆ ಸಾಧ್ಯತೆ
Recommended Video

ಕರ್ನಾಟಕ ಕರಾವಳಿಯಲ್ಲಿ 48 ಗಂಟೆಗಳ ಕಾಲ ಭಾರೀ ಮಳೆ ಸಾಧ್ಯತೆ | Oneindia Kannada
ಬೆಂಗಳೂರು, ಜೂನ್ 30: ಕಳೆದ ಹಲವು ದಿನಗಳಿಂದ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ ಮುಂದಿನ 48 ಗಂಟೆಗಳ ಕಾಲವೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದೊಂದೇ ತಿಂಗಳಿನಲ್ಲಿ(ಜೂನ್) ಕರ್ನಾಟಕದ ಕರಾವಳಿ, ಕೊಂಕಣ ಸೀಮೆ, ಗೋವಾ, ಕೇರಳಗಳಲ್ಲಿ ನಿರಂತರ ಮಳೆಯಾಗಿದ್ದು, ಈ ಭಾಗದಲ್ಲಿ ಇದುವರೆಗೆ ಒಟ್ಟು 1000 ಮಿಮೀ ಮಳೆಯಾಗಿದೆ!

ನೈರುತ್ಯ ಮುಂಗು ಅಷ್ಟೇನು ಚುರುಕಾಗದ ಕಾರಣ ದೇಶ ಎಲ್ಲೆಡೆಯೂ ಮಳೆಯಾಗುವ ಸಂಭವ ಕಡಿಮೆ. ಉಳಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಕೊಂಚ ಮಳೆಯಾಗಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದೆ.
ಗುಜರಾತ್, ರಾಜಸ್ತಾನಗಳಲ್ಲೂ ಸಾಕಷ್ಟು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿಗಳು ತಿಳಿಸಿವೆ. ಪಶ್ಚಿಮ ಕರಾವಳಿಯಲ್ಲಿ ಈ ವರ್ಷ ಸಾಧಾರಣ ಮಳೆಯಷ್ಟೇ ಕಂಡುಬರಲಿದೆ. ಉತ್ತರ ಬಾರತದ ಹಲವು ರಾಜ್ಯಗಳಲ್ಲಿ ಇಂದು ಮಳೆಯಾಗುವ ಸಂಭವವಿದೆ.












Click it and Unblock the Notifications