ಚಿತ್ರಗಳು : ಮುಂಗಾರು ಮಳೆ ತಂದ ಸಂತಸ, ಸಂಕಷ್ಟ
ಬೆಂಗಳೂರು, ಜುಲೈ 20 : ಮಳೆ..ಮಳೆ...ಮಳೆ ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಭಾರತದ ಹಲವು ರಾಜ್ಯಗಳಲ್ಲಿ ಮುಂಗಾರು ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ನದಿಗಳು ತುಂಬಿ ಹರಿಯುತ್ತಿವೆ.
ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆ ಹೆಚ್ಚಾಗಿದ್ದು, ಪ್ರಮುಖ ನದಿಗಳು ತುಂಬಿವೆ. ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿವೆ. ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. [ಕರ್ನಾಟಕದಲ್ಲಿ ಹೇಗೆ ಮಳೆಯಾಗುತ್ತಿದೆ ಗೊತ್ತಾ?]
ಮುಂಗಾರು ಮಳೆಯ ಕೆಲವು ಚಿತ್ರಗಳು ಇಲ್ಲಿವೆ. ಇವುಗಳಲ್ಲಿ ಮಳೆಯಿಂದ ಸಂತಸಗೊಂಡ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ ಚಿತ್ರಗಳೂ ಇವೆ. ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ ಜನರ ಚಿತ್ರಗಳು ಇವೆ. ಕೆಲವು ಆಯ್ದ ಪಿಟಿಐ ಚಿತ್ರಗಳು ನಿಮಗಾಗಿ ಇಲ್ಲಿವೆ ನೋಡಿ... [ಪ್ರವಾಹದ ವಿಡಿಯೋ ನೋಡಿ]

ದೇವಾಲಯಕ್ಕೆ ನುಗ್ಗಿದ ನೀರು
ಭಾನುವಾರ ಮಧ್ಯಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉಜ್ಜೈನಿ ದೇವಾಲಯದಲ್ಲಿ ನೀರು ತುಂಬಿಕೊಂಡಿದ್ದು, ಗರ್ಭಗುಡಿಗೆ ನೀರು ನುಗ್ಗಿದೆ. ನೀರನ್ನು ಹೊಸಹಾಕುವ ಕಾರ್ಯದಲ್ಲಿ ಸಿಬ್ಬಂದಿ ತೊಡಗಿದ್ದಾರೆ.

ಜಾರ್ಖಂಡ್‌ನಲ್ಲಿ ಲಾರಿಯ ಸರ್ಕಸ್
ಜಾರ್ಖಂಡ್‌ನಲ್ಲಿಯೂ ಭಾನುವಾರ ಭಾರೀ ಮಳೆ ಸುರಿಸಿದೆ. ಮಳೆಯಿಂದ ಹಾನಿಗೊಳಗಾದ ಸೇತುವೆ ಮೇಲೆ ಹೋದ ಲಾರಿ ಸರ್ಕಸ್ ಮಾಡುತ್ತಿರುವುದು ಕ್ಯಾಮರಾ ಕಣ್ಣಲ್ಲಿ ಕಂಡಿದ್ದು ಹೀಗೆ.

ಮಳೆ ಬಂತು ಇನ್ನು ಬಿಡುವಿಲ್ಲ
ಪಶ್ಚಿಮ ಬಂಗಾಳದಲ್ಲಿಯೂ ಉತ್ತಮ ಮಳೆಯಾಗುತ್ತಿದ್ದು ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಭಾನುವಾರ ರೈತರು ಕೆಲಸ ಮಾಡುವಾಗ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.

ಬೇಗ-ಬೇಗ ಕೆಲ್ಸ ಮಾಡ್ರಪ್ಪ
ಮಧ್ಯಪ್ರದೇಶದಲ್ಲಿ ಮಳೆಯಿಂದ ಹಾನಿಗೊಳಗಾದ ರೈಲ್ವೆ ಹಳಿಯನ್ನು ಸರಿಪಡಿಸುವ ಕೆಲಸದಲ್ಲಿ ಸಿಬ್ಬಂದಿ ತೊಡಗಿಕೊಂಡಿದ್ದಾರೆ. ಸುರಿವ ಮಳೆಯನ್ನು ಲೆಕ್ಕಿಸಿದೆ ಕೆಲಸ ಮುಂದುವರೆಸಿದ್ದಾರೆ.

ಬನ್ನಿ...ಬನ್ನಿ ಬೇಗ ಹೋಗೋಣ
ಕೇರಳದಲ್ಲಿ ಕಂಡು ಬಂದ ದೃಶ್ಯವಿದು ಮಳೆಯಿಂದ ರಸ್ತೆ ಸಂಪೂರ್ಣವಾಗಿ ಜಲಾವೃತ್ತವಾಗಿದ್ದರೆ ಬೈಕ್ ಸವಾರ ಮನೆಗೆ ಹೋಗಲು ಪರದಾಡುತ್ತಿದ್ದಾನೆ.

ರಸ್ತೆಯ ತುಂಬಾ ನೀರು ತುಂಬಿಕೊಂಡಿದೆ
ಭೋಪಾಲ್‌ನಲ್ಲಿ ಸುರಿದ ಮಳೆಗೆ ರಸ್ತೆಗಳು ಜಲಾವೃತ್ತವಾಗಿವೆ. ಇದರ ನಡುವೆಯೇ ಬೈಕ್ ಸವಾರ ಮುನ್ನುಗ್ಗುತ್ತಿದ್ದಾನೆ.

ಇನ್ನು ತಳ್ಳಿ ಐಸಾ
ಅಗರ್ತಲ ದಲ್ಲಿ ಕಂಡು ಬಂದ ದೃಶ್ಯವಿದು ಮಳೆಯಿಂದಾಗಿ ರಸ್ತೆ ಸಂಪೂರ್ಣವಾಗಿ ನೀರಿನಿಂದ ತುಂಬಿ ಹೋಗಿದ್ದು, ಅದರ ನಡುವೆ ಕಾರನ್ನು ತಳ್ಳುತ್ತಿದ್ದಾರೆ.

ಜಲಂಧರ್‌ನಲ್ಲಿ ಜಲಧಾರೆ
ಜಲಂಧರ್‌ನಲ್ಲಿಯೂ ಮಳೆ ಸುರಿಯುತ್ತಿದ್ದು ರಸ್ತೆಯ ತುಂಬಾ ನೀರು ತುಂಬಿಕೊಂಡಿದೆ. ಇದರ ನಡುವೆಯೇ ಆಟೋ ಚಾಲಕನೊಬ್ಬ ಮುಂದೆ ಹೋಗಲು ಪ್ರಯತ್ನ ನಡೆಸಿದ್ದಾನೆ.

ಅಲಹಾಬಾದ್‌ನಲ್ಲಿ ಮೀನಿನ ಬೇಟೆ
ಅಲಹಾಬಾದ್‌ನಲ್ಲಿ ಸುರಿದ ಮಳೆಯಿಂದಾಗಿ ಗಂಗಾನದಿ ಭರ್ತಿಯಾಗಿದೆ. ತುಂಬಿದ ಗಂಗೆಯ ಒಡಲಿನಲ್ಲಿ ಮೀನಿನ ಬೇಟೆ ನಡೆಯುತ್ತಿದೆ.

ಭದ್ರತಾ ಸಿಬ್ಬಂದಿಗೂ ತಟ್ಟಿದ ಮಳೆ
ನವದೆಹಲಿಯಲ್ಲಿ ಸೋಮವಾರ ಮಳೆ ಸುರಿಯುತ್ತಿದ್ದು ಭದ್ರತಾ ಸಿಬ್ಬಂದಿ ಮಳೆಯ ನಡುವೆಯೇ ತಮ್ಮ ಕೆಲಸಗಳಿಗೆ ತೆರಳುತ್ತಿದ್ದಾರೆ.












Click it and Unblock the Notifications