ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್ ಬಿಕ್ಕಟ್ಟು; ಮಾಲ್ಡೋವಾದ ಗಡಿ ಭಾರತೀಯ ವಿದ್ಯಾರ್ಥಿಗಳಿಗೆ ತೆರೆದಿದೆ

|
Google Oneindia Kannada News

ನವದೆಹಲಿ, ಮಾರ್ಚ್ 02; ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಣೆ ಮಾಡಲು ನಡೆಯುತ್ತಿರುವ 'ಆಪರೇಷನ್ ಗಂಗಾ' ಕಾರ್ಯಾಚರಣೆ ಮತ್ತಷ್ಟು ಚುರುಕಾಗಿದೆ. ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ರೋಮಾನಿಯಾ ಮತ್ತು ಮಾಲ್ಡೋವಾದ ಭಾರತದ ರಾಯಭಾರಿ ಭೇಟಿಯಾದರು.

'ಆಪರೇಷನ್ ಗಂಗಾ' ನಿರ್ವಹಣೆ ಹೊಣೆಯನ್ನು ನಾಲ್ವರು ಕೇಂದ್ರ ಸಚಿವರಿಗೆ ನೀಡಲಾಗಿದೆ. ಜ್ಯೋತಿರಾದಿತ್ಯ ಸಿಂಧಿಯಾ ರೋಮಾನಿಯಾ ಮತ್ತು ಮಾಲ್ಡೋವಾದ ಕಾರ್ಯಾಚರಣೆ ನೋಡಿಕೊಳ್ಳುತ್ತಿದ್ದಾರೆ. ರೋಮಾನಿಯಾದ ಬುಚಾರೆಸ್ಟ್‌ಗೆ ಸಚಿವರು ತಲುಪಿದರು.

 ಆಪರೇಷನ್‌ ಗಂಗಾ: ಉಕ್ರೇನ್‌ನಿಂದ ಸ್ಥಳಾಂತರಗೊಳ್ಳುವ ಭಾರತೀಯರಿಗೆ ಇಲ್ಲಿದೆ ವಿಮಾನಗಳ ಪಟ್ಟಿ ಆಪರೇಷನ್‌ ಗಂಗಾ: ಉಕ್ರೇನ್‌ನಿಂದ ಸ್ಥಳಾಂತರಗೊಳ್ಳುವ ಭಾರತೀಯರಿಗೆ ಇಲ್ಲಿದೆ ವಿಮಾನಗಳ ಪಟ್ಟಿ

ವಿಮಾನ ನಿಲ್ದಾಣದಲ್ಲಿಯೇ ಅಧಿಕಾರಿಗಳ ಜೊತೆ ರಕ್ಷಣಾ ಕಾರ್ಯಾಚರಣೆ ಬಗ್ಗೆ ಸಚಿವರು ಮಾಹಿತಿ ಪಡೆದರು. ಬಳಿಕ ರೋಮಾನಿಯಾ ಮತ್ತು ಮಾಲ್ಡೋವಾದ ಭಾರತದ ರಾಯಭಾರಿ ರಾಹುಲ್‌ ಶ್ರೀವಾಸ್ತವ್ ಭೇಟಿಯಾಗಿ, ಕಾರ್ಯಾಚರಣೆ ಬಗ್ಗೆ ಚರ್ಚೆ ನಡೆಸಿದರು.

ಆಪರೇಷನ್ ಗಂಗಾ; ಮುಂಬೈಗೆ ಹೊರಟ 7ನೇ ವಿಮಾನ ಆಪರೇಷನ್ ಗಂಗಾ; ಮುಂಬೈಗೆ ಹೊರಟ 7ನೇ ವಿಮಾನ

Jyotiraditya Scindia

ಬಳಿಕ ಟ್ವೀಟ್ ಮಾಡಿರುವ ಸಚಿವರು, "ಮಾಲ್ಡೋವಾದ ಗಡಿಯನ್ನು ಭಾರತದ ವಿದ್ಯಾರ್ಥಿಗಳಿಗೆ ತೆರೆಯಲಾಗಿದೆ. ಇಲ್ಲಿ ಆಹಾರ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ. ಭಾರತಕ್ಕೆ ಸಂಚಾರ ನಡೆಸಲು ವಿಮಾನಕ್ಕಾಗಿ ಮಾತುಕತೆ ನಡೆಯುತ್ತಿದೆ" ಎಂದು ಹೇಳಿದ್ದಾರೆ.

ವಿಡಿಯೋ; ಉಕ್ರೇನ್ ಪರಿಸ್ಥಿತಿ ಬಿಚ್ಚಿಟ್ಟ ದಾವಣಗೆರೆಯ ಮಹ್ಮದ್ ಹಬೀಬ್ ವಿಡಿಯೋ; ಉಕ್ರೇನ್ ಪರಿಸ್ಥಿತಿ ಬಿಚ್ಚಿಟ್ಟ ದಾವಣಗೆರೆಯ ಮಹ್ಮದ್ ಹಬೀಬ್

ಉಕ್ರೇನ್‌ನಿಂದ ಆಗಮಿಸಿ ಬುಚಾರೆಸ್ಟ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಜೊತೆಯೂ ಸಚಿವರು ಮಾತುಕತೆ ನಡೆಸಿದರು. ಶೀಘ್ರವೇ ಭಾರತಕ್ಕೆ ಮರಳಲು ವಿಮಾನದ ವ್ಯವಸ್ಥೆ ಮಾಡುವುದಾಗಿಯೂ ಸಚಿವರು ಭರವಸೆ ನೀಡಿದರು.

ಫೆಬ್ರವರಿ 24ರಂದು ರಷ್ಯಾ ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿದ ಬಳಿಕ ಭಾರತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು, ನಾಗರಿಕರನ್ನು ರಕ್ಷಣೆ ಮಾಡಲು ಆಪರೇಷನ್ ಗಂಗಾ ಹೆಸರಿನ ಕಾರ್ಯಾಚರಣೆ ಆರಂಭಿಸಿದೆ.

ಯಾವುದೇ ಶುಲ್ಕವನ್ನು ಪಡೆಯದೇ ಭಾರತೀಯರನ್ನು ವಿಶೇಷ ವಿಮಾನದ ಮೂಲಕ ಕರೆತರಲಾಗುತ್ತಿದೆ. 219 ಭಾರತೀಯರು ಮೊದಲ ವಿಮಾನದಲ್ಲಿ ಫೆಬ್ರವರಿ 26ರಂದು ಮುಂಬೈಗೆ ಆಗಮಿಸಿದರು.

ಏರ್ ಇಂಡಿಯಾದ ವಿಶೇಷ ವಿಮಾನ ಆಪರೇಷನ್ ಗಂಗಾದಲ್ಲಿ ಪಾಲ್ಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಸೂಚನೆಯಂತೆ ಭಾರತೀಯ ವಾಯುಪಡೆ ಸಹ ಆಪರೇಷನ್ ಗಂಗಾಕ್ಕೆ ಕೈ ಜೋಡಿಸಿದೆ.

ವಾಯುಪಡೆಯ ಸಿ-17 ವಿಮಾನ ಬುಧವಾರ ಮುಂಜಾನೆ ದೆಹಲಿಯ ಹಿಂಡನ್ ವಾಯುನೆಲೆಯಿಂದ ರೋಮಾನಿಯಾಕ್ಕೆ ತೆರಳಿದೆ. ರುಮಾನಿಯಾ, ಪೋಲೆಂಡ್, ಹಂಗೇರಿ ಸೇರಿದಂತೆ ವಿವಿಧ ಕಡೆ ಇರುವ ಭಾರತೀಯರ ರಕ್ಷಣೆಗೆ 24*7 ಸಹಾಯವಾಣಿ ಸ್ಥಾಪನೆ ಮಾಡಲಾಗಿದೆ.

ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಲು ಆಪರೇಷನ್ ಗಂಗಾ ಹೆಸರಿನಲ್ಲಿ ಟ್ವೀಟರ್ ಅಕೌಂಟ್ ತೆರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಭಾರತೀಯರ ರಕ್ಷಣೆ ಬಗ್ಗೆ ಕಾಳಜಿ ವಹಿಸಿದ್ದು, ಸರಣಿ ಸಭೆಗಳನ್ನು ನಡೆಸುವ ಮೂಲಕ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡುತ್ತಿದ್ದಾರೆ.

ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶ್ರೀಂಘಾಲ ಮಂಗಳವಾರ ಎಲ್ಲಾ ಭಾರತೀಯರು ಉಕ್ರೇನ್‌ನ ರಾಜಧಾನಿ ಕೀವ್ ನಗರ ತೊರೆದಿದ್ದಾರೆ ಎಂದು ಹೇಳಿದ್ದಾರೆ. ಶೇ 60ರಷ್ಟು ಭಾರತೀಯರು ಉಕ್ರೇನ್ ತೊರೆದಿದ್ದಾರೆ. ಸುಮಾರು 20 ಸಾವಿರ ಜನರು ಉಕ್ರೇನ್‌ನಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಭಾರತೀಯರನ್ನು ಕರೆತರಲು ಮುಂದಿನ ಮೂರು ದಿನಗಳಲ್ಲಿ 26 ವಿಮಾನಗಳು ಸಂಚಾರ ನಡೆಸಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬುಚಾರೆಸ್ಟ್‌, ಬುಡಾಪೆಸ್ಟ್ ಮಾತ್ರವಲ್ಲ ಪೋಲೆಂಡ್, ಸ್ಲೊವಾಕಿಯಾ, ಮಾಲ್ಡೋವಾಕ್ಕೂ ಭಾರತ ವಿಮಾನಗಳನ್ನು ಕಳಿಸಲಿದೆ.

ಕರ್ನಾಟಕದ ನವೀನ್ ಬಲಿ; ರಷ್ಯಾ ಮತ್ತು ಉಕ್ರೇನ್ ಸಂಘರ್ಷಕ್ಕೆ ಕರ್ನಾಟಕದ ಹಾವೇರಿ ಮೂಲದ ವೈದ್ಯಕೀಯ ವಿದ್ಯಾರ್ಥಿ ನವೀನ್ ಬಲಿಯಾಗಿದ್ದಾರೆ. ನವೀನ್ ಶೇಖರಪ್ಪ ಗ್ಯಾನಗೌಡರ್ ಉಕ್ರೇನ್‌ನ ಹಾರ್ಕಿವ್‌ನಲ್ಲಿ 4ನೇ ವರ್ಷದ ಎಂಬಿಬಿಎಸ್‌ ಕೋರ್ಸ್‌ ವ್ಯಾಸಂಗ ಮಾಡುತ್ತಿದ್ದರು.

ಬಂಕರ್‌ನಲ್ಲಿದ್ದ ನವೀನ್ ಹಣ ವಿನಿಮಯ, ಆಹಾರ ತರಲು ಮಂಗಳವಾರ ಬೆಳಗ್ಗೆ ಹೊರ ಹೋಗಿದ್ದರು. ಈ ವೇಳೆ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಅವರು ಸಿಲುಕಿ ಮೃತಪಟ್ಟಿದ್ದಾರೆ. ವಿದೇಶಾಂಗ ಸಚಿವಾಲಯ ಸಹ ನವೀನ್ ಸಾವನ್ನು ಖಚಿತಪಡಿಸಿದೆ.

Recommended Video

ಥೂ ಇಂಥಾ ಕೀಳು ಮಟ್ಟಕ್ಕಿಳೀತಾ ರಷ್ಯಾ | Oneindia Kannada

English summary
After meeting with Indian ambassador to Romania, Moldova union minister for civil aviation Jyotiraditya Scindia tweeted that Moldova’s borders opened for incoming Indian students. Proper shelter and food arrangements will be made.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X