ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ನೋಟು ಜಾಲ ಮಟ್ಟಹಾಕಿದ ನರೇಂದ್ರ ಮೋದಿ

ಗುಪ್ತಚರ ಇಲಾಖೆಯ ಪ್ರಕಾರ, ಭಾರತದಲ್ಲಿ ಖೋಟಾ ನೋಟು ಚಲಾವಣೆಯಲ್ಲಿರುವುದು ಪಾಕಿಸ್ತಾನದ ಅಧಿಕಾರಿಗಳಿಗೂ ಗೊತ್ತಿದೆ. ಈ ನಕಲಿ ನೋಟುಗಳನ್ನು ಕ್ವೆಟ್ಟಾ, ಲಾಹೋರ್ ಮತ್ತು ಪೇಶಾವರದ ಸರಕಾರಿ ಪ್ರಿಂಟಿಂಗ್ ಪ್ರೆಸ್ ಗಳಲ್ಲಿ ಟಂಕಿಸಲಾಗುತ್ತಿದೆ.

By Prasad
|
Google Oneindia Kannada News

ನವದೆಹಲಿ, ನವೆಂಬರ್ 08 : ಸುಮಾರು 12 ಲಕ್ಷ ಕೋಟಿ ರು.ನಷ್ಟು ನಕಲಿ ಕರೆನ್ಸಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಪಾಕಿಸ್ತಾನ ಭಾರತಕ್ಕೆ ಎಚ್ಚರಿಕೆ ನೀಡಿದ್ದೇ 500 ಮತ್ತು 1000 ರು. ನೋಟುಗಳನ್ನು ಹಿಂತೆಗೆಯಲು ಪ್ರಮುಖ ಕಾರಣವಾಗಿದೆ.

ಹಲವಾರು ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ನಕಲಿ ನೋಟುಗಳನ್ನು ಪಾಕಿಸ್ತಾನ ಭಾರತದಲ್ಲಿ ಹರಿಯಬಿಡುತ್ತಿದೆ ಎಂದು ಭಾರತದ ಗುಪ್ತಚರ ಇಲಾಖೆ ಎಚ್ಚರಿಕೆ ನೀಡುತ್ತಲೇ ಬಂದಿತ್ತು. ಐಎಸ್ಐ ಬೆಂಬಲಿತ ನಕಲಿ ನೋಟುಗಳ ಜಾಲ 500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನೇ ಹರಿಯಬಿಟ್ಟಿತ್ತು.

ಯಾವುದು ಅಸಲಿ, ಯಾವುದು ನಕಲಿ ಎಂಬುದನ್ನು ಗುರುತಿಸಲಾಗದಷ್ಟು ನಿಖರತೆಯಿಂದ ನಕಲಿ ನೋಟುಗಳನ್ನು ಐಎಸ್ಐ ಬೆಂಬಲಿತ ಸಂಘಟನೆಗಳು ಮುದ್ರಿಸಿದ್ದವು. ನೋಟಿನ ಟೆಂಪ್ಲೇಟ್ ಮಾತ್ರವಲ್ಲ, ಭಾರತ ಸರಕಾರ ಪಡೆಯುತ್ತ ಸ್ಥಳದಿಂದಲೇ ಪೇಪರನ್ನು ಪಡೆಯಲು ಪಾಕಿಸ್ತಾನ ಯಶಸ್ವಿಯಾಗಿತ್ತು. [ನೋಟಿಗೆ ಕಡಿವಾಣ : ಎಲ್ಲರೂ ತಿಳಿಯಬೇಕಾಗಿರುವುದೇನು?]

Modi wipes out a Rs 12,00,000 crore fake currency racket

ಭಾರತೀಯ ಗುಪ್ತಚರ ಇಲಾಖೆಯ ಪ್ರಕಾರ, ಭಾರತದಲ್ಲಿ ಖೋಟಾ ನೋಟು ಚಲಾವಣೆಯಲ್ಲಿರುವುದು ಪಾಕಿಸ್ತಾನದ ಅಧಿಕಾರಿಗಳಿಗೂ ಗೊತ್ತಿದೆ. ಏಕೆಂದರೆ, ಈ ನಕಲಿ ನೋಟುಗಳನ್ನು ಪಾಕಿಸ್ತಾನದ ಕ್ವೆಟ್ಟಾ, ಲಾಹೋರ್ ಮತ್ತು ಪೇಶಾವರದ ಸರಕಾರಿ ಪ್ರಿಂಟಿಂಗ್ ಪ್ರೆಸ್ ಗಳಲ್ಲಿಯೇ ಟಂಕಿಸಲಾಗುತ್ತಿದೆ.

ನಕಲಿ ನೋಟುಗಳು ಪ್ರಿಂಟ್ ಆಗುತ್ತಿದ್ದಂತೆ ಅವನ್ನು ಪಕ್ಕದ ದೇಶಗಳಾದ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ನೇಪಾಳಗಳಿಗೆ ಅಕ್ರಮವಾಗಿ ಕಳುಹಿಸಲಾಗುತ್ತದೆ. ಅಲ್ಲಿಂದ ಏಜೆಂಟ್ ಗಳು 2:1 ಅನುಪಾತದಂತೆ ಹಣ ಪಡೆದು ಭಾರತದೊಳಗೆ ನುಸುಳುವಂತೆ ನೋಡಿಕೊಳ್ಳುತ್ತಾರೆ. 1 ರು. ಅಸಲಿ ನೋಟಿಗೆ 2. ರು. ನಕಲಿ ನೋಟು ಬದಲಾವಣೆಯಾಗುತ್ತವೆ. [500 ಹಾಗೂ 1000 ರು ಕರೆನ್ಸಿ ನೋಟು ಚಲಾವಣೆ ಬಂದ್: ಮೋದಿ]

English summary
With Rs 500 and Rs 1,000 notes Narendra Modi wiped out a Rs 12,00,000 crore fake currency racket. The menace that is Pakistan had ensured that nearly Rs 12,00,000 crore worth of fake currency was in circulation in the Indian market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X