ಒಂದೇ ವೇದಿಕೆಯಲ್ಲಿ ಪ್ರಧಾನಿ ಮತ್ತು ಪ್ರಧಾನಿ ಅಭ್ಯರ್ಥಿ
ಅಹಮದಾಬಾದ್, ಅ 26: ಗುಜರಾತ್ ನಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ವೇದಿಕೆ ಹಂಚಿ ಕೊಳ್ಳಲಿದ್ದಾರೆ.
ಅಕ್ಟೋಬರ್ 29 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಇಬ್ಬರೂ ನಾಯಕರು ಭಾಗವಹಿಸಲಿದ್ದಾರೆ. ಅಂದು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಹೆಸರಿನಲ್ಲಿ ಮ್ಯೂಸಿಯಂ ಸಮರ್ಪಣೆಯಾಗಲಿದೆ.
ಪಟೇಲ್ ಮ್ಯೂಸಿಯಂ ಅನ್ನು ಸರ್ದಾರ್ ವಲ್ಲಭಭಾಯ್ ಪಟೇಲ್ ಮೆಮೋರಿಯಲ್ ಟ್ರಸ್ಟ್ ನಿರ್ಮಿಸುತ್ತಿದ್ದು, ಈ ಟ್ರಸ್ಟಿಗೆ ಕೇಂದ್ರ ಸಚಿವ ದಿನ್ಷಾ ಪಟೇಲ್ ಅಧ್ಯಕ್ಷರು.

ದಿನ್ಷಾ ಪಟೇಲ್ ಗುಜರಾತ್ ಮುಖ್ಯಮಂತ್ರಿಯವರನ್ನು ಖುದ್ದಾಗಿ ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.
ಆಹ್ವಾನ ಪತ್ರಿಕೆಯಲ್ಲಿ ಪ್ರಧಾನಿ ಸಿಂಗ್ ಅವರನ್ನು ಮುಖ್ಯ ಅತಿಥಿ ಎಂದು ಮೋದಿ ಅವರನ್ನು ವಿಶೇಷ ಅತಿಥಿ ಎಂದು ಮುದ್ರಿಸಲಾಗಿದೆ.
ಇದಾದ ಎರಡು ದಿನಗಳಲ್ಲಿ ನರ್ಮದಾ ಸರೋವರ ಅಣೆಕಟ್ಟು ಬಳಿ ನಿರ್ಮಿಸಲಾಗುವ ವಲ್ಲಭಭಾಯ್ ಪಟೇಲ್ ಅವರ ಪುಥ್ಥಳಿ ಕಾರ್ಯಕ್ರಮದ ಭೂಮಿ ಪೂಜೆ ಕಾರ್ಯಕ್ರಮ ನಡೆಯಲಿದೆ.
ಆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಜೈರಾಮ್ ರಮೇಶ್ ಅವರನ್ನು ಮೋದಿ ಆಹ್ವಾನಿಸಿದ್ದಾರೆ.












Click it and Unblock the Notifications