ಮೋದಿಜೀ ಆಶೀರ್ವಾದ ಪಡೆದು ನೀರವ್ ಮೋದಿ ಪರಾರಿ : ಖರ್ಗೆ
Recommended Video

ನವದೆಹಲಿ, ಡಿಸೆಂಬರ್ 03 : 'ಕೇಂದ್ರ ಸರ್ಕಾರ ಮತ್ತು ಮೋದಿಜೀ ಅವರ ಆಶೀರ್ವಾದದಿಂದ ನೀರವ್ ಮೋದಿ ಬ್ಯಾಂಕ್‌ನಿಂದ ಹಣ ಪಡೆದು ಪರಾರಿಯಾಗಿದ್ದಾರೆ' ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, 'ಕೇಂದ್ರ ಸರ್ಕಾರ ನೀರವ್ ಮೋದಿ, ಮೆಹುಲ್ ಚೋಕ್ಸಿಯಂತಹ ವ್ಯಕ್ತಿಗಳನ್ನು ರಕ್ಷಣೆ ಮಾಡಲು ಮಾರ್ಗ ಹುಡುಕಿದೆ' ಎಂದು ದೂರಿದರು.
'ನೀರವ್ ಮೋದಿ, ಚೋಕ್ಸಿಯಂತಹ ವ್ಯಕ್ತಿಗಳು ವಿದೇಶಕ್ಕೆ ಪರಾರಿಯಾಗುವ ಬಗ್ಗೆ ಕೇಂದ್ರ ಸರ್ಕಾರಕ್ಕೆ 1 ವರ್ಷದ ಹಿಂದೆಯೇ ಮಾಹಿತಿ ಇತ್ತು. ಆದರೆ, ಸರ್ಕಾರ ಯಾವುದೇ ತನಿಖಾ ಸಂಸ್ಥೆಗಳನ್ನು ಕಳಿಸಿಲ್ಲ, ಅವರು ಪರಾರಿಯಾಗದಂತೆ ತಡೆದಿಲ್ಲ' ಎಂದು ಟೀಕಿಸಿದರು.

'ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಆಶೀರ್ವಾದ ಪಡೆದು ನೀರವ್ ಮೋದಿಯಂತಹ ವ್ಯಕ್ತಿಗಳು ದೇಶದ ಬ್ಯಾಂಕ್‌ಗಳಿಂದ ಹಣ ಪಡೆದು ವಿದೇಶಕ್ಕೆ ಪರಾರಿಯಾಗಿದ್ದಾರೆ' ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದರು.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂ. ವಂಚಿಸಿ ನೀರವ್ ಮೋದಿ ಪರಾರಿಯಾಗಿದ್ದಾರೆ. 'ಭಾರತಕ್ಕೆ ಬಂದರೆ ನನ್ನ ಮೇಲೆ ದಾಳಿ ನಡೆಯಬಹುದು. ಅಭದ್ರತೆ ಭೀತಿ ನನ್ನನ್ನು ಕಾಡುತ್ತಿದೆ. ಹೀಗಾಗಿ ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ' ಎಂದು ಅವರು ವಕೀಲರ ಮೂಲಕ ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದ್ದಾರೆ.












Click it and Unblock the Notifications