ಹಜ್ ಯಾತ್ರಾರ್ಥಿಗಳಿಗೆ ಸಬ್ಸಿಡಿ ರದ್ದು ಮಾಡಿದ ಸರ್ಕಾರ

ನವದೆಹಲಿ, ಜನವರಿ 16: ಪವಿತ್ರ ಹಜ್ ಯಾತ್ರೆಗೆ ತೆರಳುವ ಮುಸ್ಲಿಮರಿಗೆ ಇತ್ತೀಚೆಗೆ ಸಿಹಿ ಸುದ್ದಿ ನೀಡಿದ್ದ ನರೇಂದ್ರ ಮೋದಿ ಅವರ ಸರ್ಕಾರವು ಇಂದು ಕಹಿ ಸುದ್ದಿಯೊಂದನ್ನು ನೀಡಿದೆ. ಹಜ್ ಯಾತ್ರಾರ್ಥಿಗಳಿಗೆ ಸಬ್ಸಿಡಿ ರದ್ದು ಮಾಡಲಾಗಿದೆ.

ಇದೇ ಸಬ್ಸಿಡಿ ಮೊತ್ತವನ್ನು ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಲಾಗುವುದು ಎಂದು ಅಲ್ಪಸಂಖ್ಯಾತ ಖಾತೆ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದರು.

ಈ ವರ್ಷದಿಂದಲೇ ಹೊಸ ನಿಯಮ ಜಾರಿಯಾಗಲಿದೆ. ಇದು ಅಲ್ಪಸಂಖ್ಯಾತರ ಸಬಲೀಕರಣಕ್ಕಾಗಿ ಕೈಗೊಂಡಿರುವ ಕ್ರಮವಾಗಿದ್ದು, ಸ್ವಂತ ಖರ್ಚಿನಿಂದಲೇ ಮೆಕ್ಕಾಕ್ಕೆ ತೆರಳಬೇಕಾಗುತ್ತದೆ ಎಂದು ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದರು.

Modi Government Withdraws Subsidy To Haj Pilgrims

ಭಾರತದಿಂದ ಪ್ರತಿ ವರ್ಷ ಹಜ್ ಯಾತ್ರೆಗೆ ತೆರಳುವ ಭಾರತೀಯರ ಸಂಖ್ಯಾ ಮಿತಿ ಏರಿಕೆ ಮಾಡಲಾಗಿತ್ತು. ಮನ್ ಕಿ ಬಾತ್ ನಲ್ಲಿ ಮೋದಿ ಅವರು ಈ ಬಗ್ಗೆ ಪ್ರಸ್ತಾಪಿಸಿದ್ದರು. ಮಹಿಳೆಯರಿಗೆ ಹಜ್ ಯಾತ್ರೆ ಕೈಗೊಳ್ಳುವ ಅವಕಾಶವನ್ನು ಸರ್ಕಾರ ನೀಡಲು ಮುಂದಾಗಿದ್ದು, ಮುಸ್ಲಿಂ ಸಮುದಾಯಕ್ಕೆ ಸಂತಸ ತಂದಿತ್ತು.

5,000 ಹೆಚ್ಚುವರಿ ಹಜ್ ಯಾತ್ರಿಕರಿಗೆ ಮೆಕ್ಕಾಗೆ ಪ್ರಯಾಣ ಭಾಗ್ಯ ಒದಗಿಸಲು ಮುಂದಾಗಿರುವ ಭಾರತ ಸರ್ಕಾರದ ಕ್ರಮಕ್ಕೆ ಸೌದಿ ಅರೇಬಿಯಾ ಸರ್ಕಾರ ಅನುಮತಿ ನೀಡಿತ್ತು. ಹೀಗಾಗಿ, ಹಜ್ ಯಾತ್ರಾರ್ಥಿಗಳ ಕೋಟಾ ಈಗ 1,75,025ಕ್ಕೇರಲಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದರು.

2018ರಲ್ಲಿ ಹಜ್ ಯಾತ್ರೆಗಾಗಿ 3,55,000 ಅರ್ಜಿಗಳು ಬಂದಿವೆ. ಈ ಬಾರಿ ಭಾರತದಿಂದ 1,300 ಮಹಿಳೆಯರು ಮಹ್ರಾಮ್(ಪುರುಷರ ಸಂಗಾತಿಯ ನೆರವಿಲ್ಲದೆ) ಇಲ್ಲದೆ ಹಜ್ ಯಾತ್ರೆ ಕೈಗೊಳ್ಳುವ ಅವಕಾಶವೂ ಲಭಿಸಲಿದೆ. ಸಮುದ್ರಯಾನದ ಮೂಲಕ ಸೌದಿಗೆ ಪ್ರಯಾಣ ಭಾಗ್ಯ ನೀಡುವ ಬಗ್ಗೆ ಕೂಡಾ ಮಾತುಕತೆ ನಡೆಯುತ್ತಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+