ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ರಾಜೀನಾಮೆ

ನವದೆಹಲಿ, ಸೆಪ್ಟೆಂಬರ್ 1: ಕೇಂದ್ರ ಸಂಪುಟ ಪುನಾರಚನೆ ಭಾನುವಾರಕ್ಕೆ ನಿಗದಿಯಾಗಿದ್ದು, ಕಾರ್ಮಿಕ ಖಾತೆ ರಾಜ್ಯ ಸಚಿವ ಬಂಡಾರು ದತ್ತಾತ್ರೇಯ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಸಂಪುಟದ ಪುನಾರಚನೆ ಭಾನುವಾರ ಬೆಳಗ್ಗೆ ನಡೆಯಲಿದೆ.

ಸೆಪ್ಟೆಂಬರ್ ಮೂರನೇ ತಾರೀಕು ಬೆಳಗ್ಗೆ ಹತ್ತು ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೂಲಗಳ ಪ್ರಕಾರ, ಹನ್ನೆರಡು ಖಾತೆಗಳು ಮರುಹಂಚಿಕೆ ಆಗಲಿವೆ. ಕಳೆದ ಎರಡು ದಿನಗಳಿಂದ ನರೇಂದ್ರ ಮೋದಿ ಅವರ ಸಚಿವ ಸಂಪುಟದ ಪುನಾರಚನೆ ಬಗ್ಗೆಯೇ ವಿಪರೀತ ಚರ್ಚೆ ನಡೆಯುತ್ತಿದೆ.

Bandaru Dattatreya

ಮುಂದಿನ ಲೋಕಸಭೆ ಚುನಾವಣೆಗೆ ಮುನ್ನ ನಡೆಯುವ ಪ್ರಮುಖ ಸಂಪುಟ ಪುನಾರಚನೆ ಇದಾಗಿರಲಿದೆ. ಗುರುವಾರವಷ್ಟೇ ರಾಜೀವ್ ಪ್ರತಾಪ್ ರೂಡಿ ತಮ್ಮ ರಾಜೀನಾಮೆ ಸಲ್ಲಿಸಿದ್ದರು. ಅವರಿಗೆ ಸಂಘಟನೆಯ ಜವಾಬ್ದಾರಿ ವಹಿಸುವ ಸಾಧ್ಯತೆಗಳಿವೆ.

ಉಮಾಭಾರತಿ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಮಾಃಇತಿ ಇದೆ. ಆದರೆ ಈ ವಿಚಾರವನ್ನು ಅವರು ಒಪ್ಪಲೂ ಇಲ್ಲ, ನಿರಾಕರಿಸಿಯೂ ಇಲ್ಲ.
ಒನ್ಇಂಡಿಯಾ ನ್ಯೂಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+