ಯೋಗ ದಿನಾಚರಣೆ ನಂತರ ಸಂಪುಟ ಪುನರಾಚನೆ?

Posted By:
Subscribe to Oneindia Kannada

ನವದೆಹಲಿ, ಜೂನ್ 17: ವಿಶ್ವ ಯೋಗ ದಿನಾಚರಣೆ (ಜೂನ್ 21) ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸಚಿವ ಸಂಪುಟ ಪುನಾರಚನೆಯಾಗುವುದು ಖಚಿತವಾಗಿದೆ. ಮುಂಬರುವ ಉತ್ತರಪ್ರದೇಶ ಹಾಗೂ ಇತರೆ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಈಗಾಗಳೇ ರಣಕಹಳೆ ಊದಿರುವುದರಿಂದ ಎನ್ ಡಿಎ ಕೂಡಾ ತನ್ನ ಕಾರ್ಯತಂತ್ರ ಆರಂಭಿಸಿದೆ.

ಜೂನ್ 19 ರಿಂದ ಜೂನ್ 22ರೊಳಗೆ ಸಚಿವ ಸಂಪುಟಕ್ಕೆ ಸರ್ಜರಿ ಮಾಡಲು ಮೋದಿ ಅವರು ಮುಂದಾಗಿದ್ದಾರೆ. ಈಗಾಗಲೇ ಈ ಬಗ್ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಸುದ್ದಿ ಮುಟ್ಟಿಸಲಾಗಿದೆ. [ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿಯಿಂದ ಮುರಳಿ ಮನೋಹರ್ ಜೋಶಿ ಅಭ್ಯರ್ಥಿ?]

ಮೂಲಗಳ ಪ್ರಕಾರ ನಾಲ್ವರು ಹೊಸಬರಿಗೆ ಸಂಪುಟದಲ್ಲಿ ಅವಕಾಶ ಕೊಡುವ ಸಾಧ್ಯತೆಯಿದೆ. ಈ ಪೈಕಿ ಕನಿಷ್ಠ ಒಬ್ಬರು ಉತ್ತರ ಪ್ರದೇಶದವರು ಇರುವ ಸಾಧ್ಯತೆಯಿದೆ. ಈಗ ಉತ್ತರ ಪ್ರದೇಶವನ್ನು ಪ್ರತಿನಿಧಿಸುತ್ತಿರುವ ಯಾರೂ ದಲಿತ ಸಮುದಾಯದವರಲ್ಲ. ಹೀಗಾಗಿ ಈ ಬಾರಿ ದಲಿತರಿಗೆ ಅವಕಾಶ ನೀಡುವ ಸಾಧ್ಯತೆಯಿದೆ.

Modi cabinet expansion on cards next week, Giriraj Singh may be axed

ಈಗಾಗಲೇ ಉತ್ತರಪ್ರದೇಶದ ಬ್ರಾಹ್ಮಣರನ್ನು ಸೆಳೆಯಲು ಮುರಳಿ ಮನೋಹರ್ ಜೋಶಿ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಮಾಡುವ ಸುದ್ದಿಯನ್ನು ಬಿಜೆಪಿ ಹೊರಹಾಕಿದೆ. [ರಾಷ್ಟ್ರಪತಿ ಸ್ಥಾನಕ್ಕೆ ಜೋಶಿ ಅಲ್ಲದೆ ಬಿಗ್ ಬಿ, ವೆಂಕಯ್ಯ?]

ಕ್ರೀಡಾ ಖಾತೆಯ ರಾಜ್ಯ ಸಚಿವ ಸರಬಾನಂದ ಸೋನೋವಾಲ್ ಅಸ್ಸಾಂ ಸಿಎಂ ಆಗಿದ್ದಾರೆ. ಸಮಾಜ ಕಲ್ಯಾಣ ರಾಜ್ಯ ಸಚಿವ ವಿಜಯ್ ಸಂಪ್ಲಾರನ್ನು ಪಂಜಾಬ್​ನ ಬಿಜೆಪಿ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಈ ಎರಡು ಸ್ಥಾನವನ್ನು ತುಂಬಬೇಕಿದೆ.

ಉತ್ತರಾಖಂಡದಿಂದ ಭಗತ್ ಸಿಂಗ್ ಕೋಶಿಯಾರಿ, ಅಸ್ಸಾಂನಿಂದ ರಾಮೇಶ್ವರ ತೆಲಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಇನ್ನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಮನ್ ದೇಕಾ ಅವರಿಗೂ ಚಾನ್ಸ್ ಸಿಗಬಹುದು.[ಅಸ್ಸಾಂನಲ್ಲಿ ಬಿಜೆಪಿ ಆಡಳಿತ ಆರಂಭ, ಸಿಎಂ ಆದ ಸೋನೊವಾಲ್]

ಯಾವಾಗ?: ವಿದೇಶ ಪ್ರವಾಸದಿಂದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಜೂನ್ 18ರಂದು ಭಾರತಕ್ಕೆ ವಾಪಸಾಗಲಿದ್ದಾರೆ.ಜೂನ್ 21ಕ್ಕೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದ್ದು, ಜೂನ್ 23ರಂದು ಪ್ರಧಾನಿ ಮೋದಿ ವಿದೇಶ ಪ್ರಯಾಣ ಮಾಡಲಿದ್ದಾರೆ. ಈ ಮಧ್ಯ ಸಂಪುಟ ಪುನರ್ ರಚನೆಯಾಗಬೇಕಿದೆ.

ಯೋಗ ದಿನಾಚರಣೆ ನಂತರ ಸಂಪುಟ ಪುನರಾಚನೆ?

ಯೋಗ ದಿನಾಚರಣೆ ನಂತರ ಸಂಪುಟ ಪುನರಾಚನೆ?

ಅಲಹಾಬಾದಿನ ಸಂಸದ ಶ್ಯಾಮ ಚರಣ ಗುಪ್ತ ಸಚಿವ ಸ್ಥಾನದ ಆಕಾಂಕ್ಷಿ
ಯೋಗ ದಿನಾಚರಣೆ ನಂತರ ಸಂಪುಟ ಪುನರಾಚನೆ?

ಯೋಗ ದಿನಾಚರಣೆ ನಂತರ ಸಂಪುಟ ಪುನರಾಚನೆ?

ಕ್ರೀಡಾ ಖಾತೆಯ ರಾಜ್ಯ ಸಚಿವ ಸರಬಾನಂದ ಸೋನೋವಾಲ್ ಅಸ್ಸಾಂ ಸಿಎಂ ಆಗಿದ್ದಾರೆ
ಯೋಗ ದಿನಾಚರಣೆ ನಂತರ ಸಂಪುಟ ಪುನರಾಚನೆ?

ಯೋಗ ದಿನಾಚರಣೆ ನಂತರ ಸಂಪುಟ ಪುನರಾಚನೆ?

ಮೋದಿ ಸಂಪುಟದಲಿರುವ ನಿಹಾಲ್ ಚಂದ್ ಅವರ ಸ್ಥಾನವೂ ಅಲುಗಾಡುತ್ತಿದೆ
ಯೋಗ ದಿನಾಚರಣೆ ನಂತರ ಸಂಪುಟ ಪುನರಾಚನೆ?

ಯೋಗ ದಿನಾಚರಣೆ ನಂತರ ಸಂಪುಟ ಪುನರಾಚನೆ?

ನಜ್ಮಾ ಹೆಫ್ತುಲ್ಲಾ ಉಪರಾಷ್ಟ್ರಪತಿ ಹುದ್ದೆ ಮೇಲೆ ಕಣ್ಣಿಟ್ಟಿರುವುದರಿಂದ ಅವರನ್ನೂ ಸಚಿವ ಸ್ಥಾನದಿಂದ ತೆರವುಗೊಳಿಸುವ ಸಾಧ್ಯತೆಯಿದೆ
ಯೋಗ ದಿನಾಚರಣೆ ನಂತರ ಸಂಪುಟ ಪುನರಾಚನೆ?

ಯೋಗ ದಿನಾಚರಣೆ ನಂತರ ಸಂಪುಟ ಪುನರಾಚನೆ?

ಬಿಹಾರದ ಸಂಸದ ಗಿರಿರಾಜ್ ಸಿಂಗ್ ಹುದ್ದೆಗೆ ಕುತ್ತು

ಬಿಹಾರದ ಸಂಸದ ಗಿರಿರಾಜ್ ಸಿಂಗ್ ಹುದ್ದೆಗೆ ಕುತ್ತು ಬರುವ ಸಾಧ್ಯತೆಯಿದೆ. ಇನ್ನು ಅಲ್ಪಸಂಖ್ಯಾತ ಕೋಟಾದಡಿ ಸಚಿವ ಹುದ್ದೆ ಗಿಟ್ಟಿಸಿದ್ದ ನಜ್ಮಾ ಹೆಫ್ತುಲ್ಲಾ ಉಪರಾಷ್ಟ್ರಪತಿ ಹುದ್ದೆ ಮೇಲೆ ಕಣ್ಣಿಟ್ಟಿರುವುದರಿಂದ ಅವರನ್ನೂ ಸಚಿವ ಸ್ಥಾನದಿಂದ ತೆರವುಗೊಳಿಸುವ ಸಾಧ್ಯತೆಯಿದೆ. ಜೊತೆಗೆ ನಿಹಾಲ್ ಚಂದ್ ಅವರ ಸ್ಥಾನವೂ ಅಲುಗಾಡುತ್ತಿದೆ. [ಮೋದಿ ಸಂಪುಟದ ಹೊಸ ಸಚಿವರ ಖಾತೆಗಳು]

ಸಚಿವ ಸ್ಥಾನ ಆಕಾಂಕ್ಷಿಗಳು: ಅಲಹಾಬಾದಿನ ಸಂಸದ ಶ್ಯಾಮ ಚರಣ ಗುಪ್ತ, ಜಬಲಪುರ್ ನ ಸಂಸದ ರಾಕೇಶ್ ಸಿಂಗ್, ಬಿಕಾನೇರ್ ಸಂಸದ ಅರ್ಜುನ್ ರಾಮ್ ಮೆಘ್ ವಾಲ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಓಂ ಮಾಥುರ್, ವಿನಯ್ ಸಹಸ್ರಬುದ್ಧಿ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
According to reports, Modi can expand his cabinet between June 19 to June 23. Giriraj Singh may be axed, On the other hand, Nihal Chand, Giriraj Singh and Najma Heptullah can be ousted.
Please Wait while comments are loading...