ಎಲ್‌ಐಸಿ ಷೇರು ಕುಸಿತಕ್ಕೆ ಮೋದಾನಿ ಕಾರಣ: ಜೈರಾಮ್ ರಮೇಶ್
ನವದೆಹಲಿ, ಮೇ 19: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಷೇರುಗಳ ಬೆಲೆಯು ನೀಡಿಕೆ ಬೆಲೆಗಿಂತಲೂ ಶೇಕಡ 40ರವರೆಗೆ ಕುಸಿದು ಹೂಡಿಕೆದಾರರ ಸಂಪತ್ತು 1.93 ಲಕ್ಷ ಕೋಟಿಯಷ್ಟು ಆದಾಯ ಕರಗಿದ ಪರಿಣಾಮ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ವರಿಷ್ಠ ಜೈರಾಮ್ ರಮೇಶ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಎಲ್‌ಐಸಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್‌ನಲ್ಲಿ ಇತ್ತು. ಆಗ ಅದರ ಮಾರುಕಟ್ಟೆ ಬಂಡವಾಳ 5.48 ಲಕ್ಷ ಕೋಟಿ ರೂ. ಇಂದು, ಇದು ರೂ 3.59 ಲಕ್ಷ ಕೋಟಿಗೆ ಇಳಿದಿದ್ದು, ಶೇಕಡ 35% ನಷ್ಟು ಕುಸಿತವಾಗಿದೆ. ಈ ಕಡಿದಾದ ಕುಸಿತಕ್ಕೆ ಒಂದೇ ಒಂದು ಕಾರಣವಿದೆ ಅದು ಮೋದನಿ (ಮೋದಿ, ಅದಾನಿ). ಈ ಪ್ರಕ್ರಿಯೆಯಲ್ಲಿ ಲಕ್ಷ ಲಕ್ಷ ಪಾಲಿಸಿದಾರರು ಗಂಭೀರ ಹೊಡೆತಕ್ಕೆ ಸಿಲುಕಿದ್ದಾರೆ ಎಂದು ಅವರು ಬರೆದಿದ್ದಾರೆ.

ಎಲ್‌ಐಸಿ ದೇಶದ ಮಾರುಕಟ್ಟೆಗಳಲ್ಲಿ ವಾಹಿವಾಟು ಆರಂಭಿಸಿ ಬುಧವಾರಕ್ಕೆ ಒಂದು ವರ್ಷ ಕಳೆದಿತ್ತು. ಈ ಅವಧಿಯಲ್ಲಿ ಎಲ್‌ಐಸಿ ಷೇರುಗಳ ಬೆಲೆಯು ತೀವ್ರವಾಗಿ ಕುಸಿತ ಕಂಡಿವೆ. ಅಲ್ಲದೆ ಹೂಡಿಕೆದಾರರ ಸಂಪತ್ತು 1.93 ಲಕ್ಷ ಕೋಟಿಯಷ್ಟು ಕರಗಿದೆ. ಎಲ್‌ಐಸಿಯು 2022ರಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆಯ (ಐಪಿಒ) ಮೂಲಕ 20,557 ಕೋಟಿ ಬಂಡವಾಳ ಸಂಗ್ರಹಿಸಿತ್ತು.
Exactly a year ago today, LIC was listed in the stock market. Its market capitalisation then stood at Rs 5.48 lakh crore. Today, this is down to Rs 3.59 lakh crore—a fall of a whopping 35%!
— Jairam Ramesh (@Jairam_Ramesh) May 17, 2023
There is only one reason for this steep fall—Modani.
In the process, lakhs and lakhs… pic.twitter.com/zr8fAxRg9t
ಮುಂಬೈ ಷೇರುಪೇಟೆಯಲ್ಲಿ (ಬಿಎಸ್‌ಸಿ) ಎಲ್‌ಐಸಿ ಷೇರಿನ ಬೆಲೆಯು ನೀಡಿಕೆ ಬೆಲೆಯಾದ 949 ರೂಪಾಯಿಗೆ ಹೋಲಿಸಿದರೆ ಶೇಕಡ 3992ರಷ್ಟು ಕುಸಿತ ಕಂಡಿದೆ. ರಾಷ್ಟ್ರೀಯ ಷೇರುಪೇಟೆಯಲ್ಲಿ ಷೇರು ಬೆಲೆಯು ನೀಡಿಕೆ ಬೆಲೆಗೆ ಹೋಲಿಸಿದರೆ ಶೇಕಡ 39.93ರಷ್ಟು ಇಳಿಕೆ ಕಂಡಿತ್ತು. ಬುಧವಾರದ ವಹಿವಾಟಿನ ಅಂತ್ಯದ ವೇಳೆಗೆ ಬಿಎಸ್‌ಇನಲ್ಲಿ ಪ್ರತಿ ಷೇರಿನ ಬೆಲೆ 570.10 ಮತ್ತು ಎನ್‌ಇಎಸ್‌ನಲ್ಲಿ ಪ್ರತಿ ಷೇರಿನ ಬೆಲೆ 570 ರೂಪಾಯಿಗೆ ತಲುಪಿತ್ತು.

ಕಾಂಗ್ರೆಸ್‌ನ ಜೈರಾಮ್ ರಮೇಶ್ ಮಾಡಿರುವ ಆರೋಪ ತಿರಸ್ಕರಿಸಿರುವ ಬಿಜೆಪಿ ಅದಾನಿ ಸಮೂಹದ ಕಂಪೆನಿಗಳಲ್ಲಿ ಎಲ್‌ಐಸಿ ಹೂಡಿಕೆಯು ಶೇಕಡ 1ಕ್ಕಿಂತಲೂ ಕಡಿಮೆ ಇದೆ. ಅರ್ಧ ಮಾಹಿತಿ ಕೊಡುವ ಮೂಲಕ ಜನರ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಹೇಳಿದೆ.












Click it and Unblock the Notifications