ಪತ್ನಿ ಮೇಲಿನ ಕೋಪಕ್ಕೆ ಆತ್ಮಾಹುತಿ ಬಾಂಬ್ ಸ್ಫೋಟಿಸಿ ಕೊಲೆಗೈದ ಪತಿ
ಪತ್ನಿ ಮೇಲಿನ ಕೋಪಕ್ಕೆ ಆತ್ಮಾಹುತಿ ಬಾಂಬ್ ಸ್ಫೋಟಿಸಿ ಪತಿಯೇ ಹತ್ಯೆ ಮಾಡಿರುವ ಘಟನೆ ಮಿಜೋರಾಂನಲ್ಲಿ ನಡೆದಿದೆ.
'ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ' ಎಂಬ ಗಾದೆ ಸುಳ್ಳಾಗಿದೆ. ಆದರೆ ಕೆಲವೊಮ್ಮೆ ಈ ಜಗಳ ಅತಿರೇಕಕ್ಕೆ ಹೋಗಿ ಅನಾಹುತಗಳು ಸಂಭವಿಸಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಣು ಮುಂದಿವೆ. ಸದ್ಯ ಅಂತಹದೊಂದು ಘಟನೆ ಮಿಜೋರಾಂನಲ್ಲಿ ನಡೆದಿದೆ.
ಮಿಜೋರಾಂನ ಲುಂಗೇಲಿಯ ಹೈಪವರ್ ಕಮಿಟಿ ಕಚೇರಿಯ ಎದುರಲ್ಲೇ ಈ ಘಟನೆ ನಡೆದಿದೆ. ಮಂಗಳವಾರ ಮಧ್ಯಾಹ್ನ 12:15ರ ವೇಳೆ ಈ ಬಾಂಬ್ ಸ್ಫೋಟಗೊಂಡಿದ್ದು, 61 ವರ್ಷದ ವ್ಯಕ್ತಿ ರೋಹ್ಮಿಂಗ್ಲಿಯಾನ್ ಹಾಗೂ ಆತನ ಪತ್ನಿ ತಲಾಂಗ್ ಥಿಯಾಂಗಲಿಮಿ ಸಾವನ್ನಪ್ಪಿದ್ದಾರೆ.

ಹೆಂಡತಿ ಮೇಲಿನ ಕೋಪದಿಂದಾಗಿ ಗಂಡನೊಬ್ಬ ಬಟ್ಟೆಯೊಳಗೆ ಆತ್ಮಾಹುತಿ ಬಾಂಬ್ ಇಟ್ಟುಕೊಂಡು ಆಕೆಯನ್ನ ತಬ್ಬಿಕೊಂಡಿದ್ದು, ಈ ವೇಳೆ ಬಾಂಬ್ ಸ್ಫೋಟಗೊಂಡಿದೆ. ಪರಿಣಾಮ ಇಬ್ಬರೂ ಈ ಘಟನೆ ವೇಳೆ ಸಾವನ್ನಪ್ಪಿದ್ದಾರೆ.
ಆರಂಭದಲ್ಲಿ ಭಯೋತ್ಪಾದಕ ಸಂಘಟನೆಗಳು ಈ ಕೃತ್ಯವೆಸಗಿವೆ ಎಂದು ಶಂಕೆ ವ್ಯಕ್ತಪಡಿಸಲಾಗಿತ್ತು. ಆದರೆ, ಸೂಕ್ತ ತನಿಖೆ ನಡೆಸಿದಾಗ ಮಹತ್ವದ ಮಾಹಿತಿ ಬಹಿರಂಗಗೊಂಡಿದೆ.
ಆದರೆ, ನಿನ್ನೆ ಮಾಜಿ ಪತ್ನಿ ಇದ್ದ ಸ್ಥಳಕ್ಕೆ ಹೋಗಿರುವ ವ್ಯಕ್ತಿ ಆಕೆಯನ್ನ ತಬ್ಬಿಕೊಂಡು ಬಾಂಬ್ ಬ್ಲಾಸ್ಟ್ ಮಾಡಿಕೊಂಡಿದ್ದಾನೆ. ಹೀಗಾಗಿ ಇಬ್ಬರ ಪ್ರಾಣ ಪಕ್ಷಿ ಹಾರಿಹೋಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ನೀಡಿದ್ದು, ಸ್ಫೋಟಕದಲ್ಲಿ ಜಿಲಿಟಿನ್ ಬಳಕೆ ಮಾಡಲಾಗಿದೆ ಎಂದಿದ್ದಾರೆ.
ರೋಹ್ಮಿಂಗ್ಲಿಯಾನ್ ಹಾಗೂ ಥಿಯಾಂಗಲಿಮಿ ಕಳೆದ ಒಂದು ವರ್ಷದ ಹಿಂದೆ ವಿಚ್ಛೇದನ ಪಡೆದುಕೊಂಡಿದ್ದರು. ಹೀಗಾಗಿ ಇಬ್ಬರು ಬೇರೆ ಬೇರೆಯಾಗಿಯೇ ವಾಸ ಮಾಡುತ್ತಿದ್ದರು.
ಅಫ್ಘಾನಿಸ್ತಾನ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟ: ಇಸ್ಲಾಮಿಕ್ ಸ್ಟೇಟ್ ಹೊಣೆ:
ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಅವಳಿ ಆತ್ಮಾಹುತಿ ಬಾಂಬ್ ದಾಳಿಗೆ ಇಸ್ಲಾಮಿಕ್ ಸ್ಟೇಟ್ ಹೊಣೆ ಹೊತ್ತುಕೊಂಡಿದೆ. ಆ.26 ರಂದು ಅಮೆರಿಕ ನೇತೃತ್ವದಲ್ಲಿ ಸೇನಾ ಪಡೆಗಳ ಹಿಂತೆಗೆತ ಕಾರ್ಯಾಚರಣೆ ನಡೆಯುತ್ತಿದ್ದಾಗ ತಾಲೀಬಾನ್ ಆಡಳಿತವಿರುವ ಅಫ್ಘಾನಿಸ್ತಾನದಲ್ಲಿ ಈ ಅವಳಿ ಸ್ಫೋಟ ಸಂಭವಿಸಿತ್ತು.
ಸೈಟ್ ಮೇಲ್ವಿಚಾರಣೆ ಏಜೆನ್ಸಿ ಹೇಳುವ ಪ್ರಕಾರ " ಬಾಂಬರ್ ಗಳು ಎಲ್ಲಾ ಭದ್ರತಾ ತಡೆಗೋಡೆಗಳನ್ನೂ ದಾಟಿ ಅಮೆರಿಕ ಪಡೆಗಳಿರುವ ಪ್ರದೇಶಕ್ಕಿಂತ 16 ಅಡಿ ದೂರದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸುವುದಕ್ಕೆ ಓರ್ವ ಬಾಂಬರ್ ಗೆ ಸಾಧ್ಯವಾಗಿದೆ" ಎಂದು ಉಗ್ರ ಸಂಘಟನೆಯ ಪ್ರಚಾರ ವಿಭಾಗ ಹೇಳಿದೆ.
ಹೇಳಿಕೆಯಲ್ಲಿ ಓರ್ವ ಬಾಂಬರ್ ಹಾಗೂ ಒಂದು ಸ್ಫೋಟದ ಬಗ್ಗೆಯಷ್ಟೇ ಮಾಹಿತಿ ನೀಡಲಾಗಿದೆ. ಆದರೆ ಘಟನೆಯಲ್ಲಿ ಕನಿಷ್ಟ 2 ಬಾಂಬ್ ಸ್ಫೋಟಗೊಂಡಿರುವುದು ಪತ್ತೆಯಾಗಿದೆ. ಸೇನಾ ಪಡೆಗಳ ಸ್ಥಳಾಂತರಿಸುವಿಕೆಯಲ್ಲಿ ತೊಡಗಿರುವ ಅಮೆರಿಕ ಹಾಗೂ ಇತರ ಪಾಶ್ಚಿಮಾತ್ಯ ಶಕ್ತಿಗಳ ಮೇಲೆ ಐಎಸ್ಐ ನ ಪ್ರಾದೇಶಿಕ ಸಂಘಟನೆ ಆಫ್ಘಾನಿಸ್ತಾನದಲ್ಲಿ ದಾಳಿ ನಡೆಸಲಿದೆ ಎಂಬ ಮಾಹಿತಿ ಇತ್ತು. ಆಫ್ಘಾನಿಸ್ತಾನ ತಾಲೀಬಾನ್ ವಶವಾದಾಗಿನಿಂದಲೂ ದೇಶ ತೊರೆಯುವುದಕ್ಕಾಗಿ ಈಗಲೂ ಜನರು ಹಾತೊರೆಯುತ್ತಿದ್ದಾರೆ.












Click it and Unblock the Notifications