Get Updates
Get notified of breaking news, exclusive insights, and must-see stories!

ಮಹಿಳಾ ಮೀಸಲಾತಿ ಜತೆಗೆ ತಲಾಖ್: ಡೀಲ್‌ಗೆ ಒಪ್ಪುತ್ತೀರಾ ರಾಹುಲ್?

ನವದೆಹಲಿ, ಜುಲೈ 17: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ಕೆಲವು ಸವಾಲುಗಳನ್ನು ಮುಂದಿಟ್ಟಿದೆ.

ತಮ್ಮ ಪತ್ರದಲ್ಲಿ ಮಹಿಳೆಯರ ನಾಯಕತ್ವದ ಗುಣ, ಸಬಲೀಕರಣ ಮುಂತಾದವುಗಳ ಕುರಿತು ಪ್ರಸ್ತಾಪಿಸಿರುವ ರಾಹುಲ್ ಗಾಂಧಿ ಅವರಿಗೆ, ಬಿಜೆಪಿ ಜತೆ ಮಸೂದೆ ಮಂಡನೆಯ ಒಪ್ಪಂದ ಮಾಡಿಕೊಳ್ಳುವಂತೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಆಹ್ವಾನ ನೀಡಿದ್ದಾರೆ.

ಸಂಸತ್‌ನ ಎರಡೂ ಸದನಗಳಲ್ಲಿ ಮಹಿಳಾ ಮೀಸಲಾತಿ ಮಸೂದೆ ಜತೆಗೆ ತ್ರಿವಳಿ ತಲಾಖ್ ಹಾಗೂ ನಿಖಾಹ್ ಹಲಾಲ್ ನಿಷೇಧದ ಮಸೂದೆಗಳನ್ನು ಸಹ ಅಂಗೀಕರಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಜತೆಗೂಡಬೇಕು ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

minister ravishankar prasad letter to rahul gandhi new deal women reservation

ರಾಹುಲ್ ಗಾಂಧಿ ಅವರಿಗೆ ಬರೆದಿರುವ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪ್ರಸಾದ್, ಭಾರತೀಯ ಮಹಿಳೆಯರಿಗೆ ಗುಣಮಟ್ಟದ ಹಾಗೂ ಸೂಕ್ತ ಪ್ರಾತಿನಿಧ್ಯ ದೊರಕುವಂತೆ ಮಾಡಲು 'ಹೊಸ ಒಪ್ಪಂದ' ನೆರವಾಗಲಿದೆ ಎಂದು ಹೇಳಿದರು.

'ಹೊಸ ಒಪ್ಪಂದ'ದ ಅನ್ವಯ ನಾವು (ಕಾಂಗ್ರೆಸ್-ಬಿಜೆಪಿ) ಮಹಿಳಾ ಮೀಸಲಾತಿ ಮಸೂದೆ, ತ್ರಿವಳಿ ತಲಾಖ್ ಹಾಗೂ ನಿಖಾಹ್ ಹಲಾಲ್ ನಿಷೇಧಿಸುವ ಮಸೂದೆಗಳನ್ನು ಸಂಸತ್‌ನ ಎರಡೂ ಮನೆಗಳಲ್ಲಿ ಅಂಗೀಕರಿಸಬೇಕು ಎಂದು ಅವರು ಬರೆದಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆಗೆ ಎನ್‌ಡಿಎ ಯಾವಾಗಲೂ ತನ್ನ ದೃಢ ಬೆಂಬಲ ನೀಡುತ್ತಿದ್ದರೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವಿಳಂಬ ಧೋರಣೆ ಅನುಸರಿಸಿತ್ತು ಎಂದು ಅವರು ಆರೋಪಿಸಿದ್ದಾರೆ.

ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಶೇ 33ರಷ್ಟು ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ ದೊರಕುವ ವೇಳೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಇದೇ ನಿಲುವು ಹೊಂದಿರುವುದನ್ನು ಖಚಿತಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನಿಮ್ಮ ಜತೆ ಬಾಂಧವ್ಯ ಹೊಂದಿರುವ ನಿಮ್ಮ ಮಿತ್ರಪಕ್ಷಗಳು ಹಾಗೂ ಇತರೆ ವಿರೋಧಪಕ್ಷಗಳು ಮಸೂದೆಯನ್ನು ಬೆಂಬಲಿಸುತ್ತಾರೆ ಹಾಗೂ ಈ ಹಿಂದಿನ ಸಂದರ್ಭಗಳಲ್ಲಿ ಮಾಡಿದಂತೆ ಸದನದ ಕಲಾಪವನ್ನು ಹಾಳುಗೆಡವುದಿಲ್ಲ ಎಂಬುದನ್ನು ತಿಳಿದುಕೊಳ್ಳಲು ಸರ್ಕಾರ ಬಯಸುತ್ತದೆ ಎಂದಿದ್ದಾರೆ.

ನೀವು ಅನೇಕ ಸಾರ್ವಜನಿಕ ಸಭೆಗಳಲ್ಲಿ ಮಹಿಳಾ ಸಬಲೀಕರಣ ಮತ್ತು ಆಡಳಿತದಲ್ಲಿ ಅವರನ್ನು ತೊಡಗಿಸುವಿಕೆ ಬಗ್ಗೆ ಮಾತನಾಡಿದ್ದೀರಿ. ಮಹಿಳೆಯರ ಅಭ್ಯುದಯಕ್ಕಾಗಿ ನಿಮ್ಮ ಬದ್ಧತೆಯನ್ನು ತೋರಿಸಲು ಇದಕ್ಕಿಂತ ಉತ್ತಮ ಅವಕಾಶ ಮತ್ತಾವುದಿದೆ? ಇನ್ನೂ ತಡಮಾಡಿದರೆ ಲೋಕಸಭೆ ಚುನಾವಣೆಯೊಳಗೆ ಈ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡನೆ ಮಾಡಲು ಸಾಧ್ಯವೇ ಆಗುವುದಿಲ್ಲ ಎಂದು ರಾಹುಲ್ ಗಾಂಧಿ ಪತ್ರದಲ್ಲಿ ಹೇಳಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+