Get Updates
Get notified of breaking news, exclusive insights, and must-see stories!

ಸಂಸತ್ ಕಲಾಪ: ಮಣಿಪುರ ಹಿಂಸಾಚಾರ ಚರ್ಚಿಸಲು ಸಹಕಾರ ಕೋರಿ ವಿಪಕ್ಷಗಳಿಗೆ ಪತ್ರ ಬರೆದ ಅಮಿತ್ ಶಾ

ನವದೆಹಲಿ, ಜುಲೈ. 25: ಮಣಿಪುರ ಹಿಂಸಾಚಾರ ಸಮಸ್ಯೆಯನ್ನು ಸಂಸತ್ತಿನಲ್ಲಿ ಚರ್ಚಿಸಲು ಪ್ರತಿಪಕ್ಷಗಳ ಅಮೂಲ್ಯ ಸಹಕಾರವನ್ನು ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಪತ್ರ ಬರೆದಿದ್ದಾರೆ. ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಸಾಮರಸ್ಯ ರೀತಿಯಲ್ಲಿ ಕಂಡುಕೊಳ್ಳಲು ಪಕ್ಷ ಭೇದ ಮರೆತು ಸಹಕಾರ ನೀಡುವಂತೆ ಕೇಳಿಕೊಂಡಿದ್ದಾರೆ.

ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಧೀರ್ ರಂಜನ್ ಚೌಧರಿ ಅವರಿಗೆ ಹಿಂದಿಯಲ್ಲಿ ಬರೆದ ಒಂದೇ ರೀತಿಯ ಪತ್ರಗಳಲ್ಲಿ ಅಮಿತ್ ಶಾ, ಮಣಿಪುರದ ಜನರು ಎಲ್ಲಾ ರಾಜಕೀಯ ಪಕ್ಷಗಳ ಸಂಸದರು ಮಣಿಪುರದ ಶಾಂತಿಗಾಗಿ ಒಗ್ಗಟ್ಟಾಗಿದ್ದಾರೆ ಮತ್ತು ಬದ್ಧರಾಗಿದ್ದಾರೆ ಎಂಬ ಭರವಸೆಯನ್ನು ನೀಡಬೇಕೆಂದು ಮಣಿಪುರದ ಜನರು ಬಯಸುತ್ತಾರೆ ಎಂದು ಹೇಳಿದ್ದಾರೆ.

minister-amit-shah-writes-to-opposition

ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ ಮತ್ತು ಅಧೀರ್ ರಂಜನ್ ಚೌಧರಿ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿದ್ದಾರೆ.

ಮಣಿಪುರ ವಿಷಯದ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ ಅಮಿತ್ ಶಾ, ಪಕ್ಷ ಭೇದ ಮರೆತು ಎಲ್ಲರೂ ಸಹಕರಿಸುವಂತೆ ಒತ್ತಾಯಿಸಿದ್ದಾರೆ. ಕಳೆದ ಆರು ವರ್ಷಗಳ ಬಿಜೆಪಿ ಆಡಳಿತದಲ್ಲಿ ಮಣಿಪುರವು ಶಾಂತಿ ಮತ್ತು ಅಭಿವೃದ್ಧಿಯ ಹೊಸ ಯುಗವನ್ನು ಅನುಭವಿಸುತ್ತಿದೆ. ಆದರೆ ಕೆಲವು ನ್ಯಾಯಾಲಯದ ಆದೇಶಗಳು ಮತ್ತು ಕೆಲವು ಘಟನೆಗಳು ಮೇ ತಿಂಗಳಲ್ಲಿ ಮಣಿಪುರದಲ್ಲಿ ಹಿಂಸಾಚಾರಕ್ಕೆ ಕಾರಣವಾಯಿತು ಎಂದು ತಿಳಿಸಿದ್ದಾರೆ.

ಕೆಲವು ನಾಚಿಕೆಗೇಡಿನ ಘಟನೆಗಳು ಮುನ್ನೆಲೆಗೆ ಬಂದಿವೆ ಎಂದಿರುವ ಅವರು, ಇದಾದ ನಂತರ ದೇಶ, ಈಶಾನ್ಯ ಮತ್ತು ವಿಶೇಷವಾಗಿ ಮಣಿಪುರದ ಜನರು ಸಂಸತ್ತಿನಿಂದ ಬಹಳಷ್ಟನ್ನು ನಿರೀಕ್ಷಿಸುತ್ತಿದ್ದಾರೆ. ಹೀಗಾಗಿ ಪಕ್ಷ ಭೇದ ಮರೆತು ಎಲ್ಲಾ ನಾಯಕರು ರಾಜ್ಯದ ಜನರೊಂದಿಗೆ ನಿಲ್ಲಬೇಕು. ಈ ಹಿಂದೆಯೂ ನಮ್ಮ ಮಹಾನ್ ಸಂಸತ್ತು ಇದನ್ನು ಮಾಡಿದೆ. ಪ್ರತಿಪಕ್ಷಗಳು ಸರ್ಕಾರ ಹೇಳಿಕೆ ನೀಡಬೇಕೆಂದು ಒತ್ತಾಯಿಸುತ್ತಿವೆ. ಆದರೆ ಸರ್ಕಾರ ಹೇಳಿಕೆಗೆ ಮಾತ್ರವಲ್ಲದೆ ಪೂರ್ಣ ಪ್ರಮಾಣದ ಚರ್ಚೆಗೂ ಸಿದ್ಧವಾಗಿದೆ" ಎಂದಿದ್ದಾರೆ.

ಮುಂದುವರೆದು, "ಚರ್ಚೆಗೆ ಸಿದ್ಧವಿದೆ. ಆದರೆ ಎಲ್ಲಾ ರಾಜಕೀಯ ಪಕ್ಷಗಳ ಸಹಕಾರವನ್ನು ನಿರೀಕ್ಷಿಸಲಾಗಿದೆ, ಸೌಹಾರ್ದಯುತ ವಾತಾವರಣದಲ್ಲಿ ಚರ್ಚೆಗೆ ಎಲ್ಲಾ ವಿರೋಧ ಪಕ್ಷಗಳು ಮುಂದಾಗಬೇಕೆಂದು ನಾನು ಒತ್ತಾಯಿಸುತ್ತೇನೆ. ಬನ್ನಿ, ದೇಶದ ಮುಂದಿರುವ ಸವಾಲುಗಳಿಗೆ ಸಾಮರಸ್ಯದ ರೀತಿಯಲ್ಲಿ ನ್ಯಾಯಯುತ ಮತ್ತು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಪಕ್ಷ ಭೇದ ಮರೆತು ಮೇಲೇರೋಣ" ಎಂದು ಅಮಿತ್ ಶಾ ಬರೆದಿದ್ದಾರೆ.

minister-amit-shah-writes-to-opposition

"ಜನರ ಪ್ರತಿನಿಧಿಗಳಾಗಿ, ನಾಗರಿಕರ ಹಿತಾಸಕ್ತಿಗಳನ್ನು ಪೂರೈಸುವುದು ಮತ್ತು ದೇಶದ ಒಳಿತಿಗಾಗಿ ಕೆಲಸ ಮಾಡುವುದು ಎಲ್ಲಾ ಸಂಸದರ ಸಾಮೂಹಿಕ ಕರ್ತವ್ಯವಾಗಿದೆ. ನಿಮಗೆ ತಿಳಿದಿರುವಂತೆ ಮಣಿಪುರವು ದೇಶದ ಅತ್ಯಂತ ಪ್ರಮುಖ ಗಡಿ ರಾಜ್ಯವಾಗಿದೆ. ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯು ದೇಶದ ಸಂಸ್ಕೃತಿಯ ರತ್ನವಾಗಿದೆ. ದೇಶದ ಪ್ರಜಾಪ್ರಭುತ್ವ ರಚನೆಯಲ್ಲಿ ಲೋಕಸಭೆಗೆ ವಿಶೇಷ ಸ್ಥಾನವಿದೆ. ನಮ್ಮ ದೇಶ ಪ್ರಜಾಪ್ರಭುತ್ವದ ತಾಯಿ ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ, ಸಂಸತ್ತು ದೇಶದ 140 ಕೋಟಿ ಜನಸಂಖ್ಯೆಯ ಭರವಸೆ, ಆಕಾಂಕ್ಷೆಗಳು, ಸಮಸ್ಯೆಗಳು ಮತ್ತು ಚಿಂತೆಗಳನ್ನು ಪ್ರತಿನಿಧಿಸುತ್ತದೆ. ಈ ಮಹತ್ವದ ಸಮಸ್ಯೆಯನ್ನು ಪರಿಹರಿಸಲು ಎಲ್ಲಾ ಪಕ್ಷಗಳು ಸಹಕರಿಸುತ್ತವೆ ಎಂದು ನಾನು ಭಾವಿಸುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಕ್ಷಣಾ ಸಚಿವ ಮತ್ತು ಲೋಕಸಭೆಯ ಉಪ ನಾಯಕ ರಾಜನಾಥ್ ಸಿಂಗ್ ಕೂಡ ಈ ವಿಷಯದ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಜುಲೈ 20 ರಂದು ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದ ಸಂಸತ್ತಿನ ಉಭಯ ಸದನಗಳಲ್ಲಿ ಕಲಾಪಗಳು ಗದ್ದಲ್ ಗೂಡುಗಳಾಗುವೆ. ಚರ್ಚೆಯ ಮೊದಲು ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ವಿರೋಧ ಪಕ್ಷಗಳು ಒತ್ತಾಯಿಸಿವೆ.

ಇಬ್ಬರು ಮಹಿಳೆಯರನ್ನು ಗುಂಪೊಂದು ವಿವಸ್ತ್ರಗೊಳಿಸಿ ಬೆತ್ತಲೆಯಾಗಿ ಮೆರವಣಿಗೆ ಮಾಡಿದ, ಮೇ 4 ರ ಘಟನೆಯ ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಮಣಿಪುರ ಹಿಂಸಾಚಾರದ ಬಗ್ಗೆ ಸರ್ಕಾರ್ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿವೆ. ಮಣಿಪುರ ಪೊಲೀಸರು ವಿಡಿಯೊದಲ್ಲಿ ಕಾಣಿಸಿಕೊಂಡಿರುವ ಹಲವು ಆರೋಪಿಗಳನ್ನು ಬಂಧಿಸಿದ್ದಾರೆ. ತೌಬಲ್ ಜಿಲ್ಲೆಯ ನಾಂಗ್‌ಪೋಕ್ ಸೆಕ್ಮೈ ಪೊಲೀಸ್ ಠಾಣೆಯಲ್ಲಿ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇ 3 ರಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಿಂದ 160 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+