Yogendra Yadav: ಮೋದಿ ಸೋಲನ್ನು ಮುಚ್ಚಿಡುವಲ್ಲಿ ಮಾಧ್ಯಮಗಳಿಗೆ ಯೋಗೇಂದ್ರ ಯಾದವ್ ತಿವಿದಿದ್ದು ಹೀಗೆ!
ಬೆಂಗಳೂರು, ಜೂನ್. 05: ಈ ಬಾರಿಯ ಲೋಕಸಭಾ ಚುನಾವನೆಯಲ್ಲಿ ಅಚ್ಚರಿಯ ಫಲಿತಾಂಶ ಬಂದಿದೆ. ನಾಲ್ಕು ನೂರು ಸ್ಥಾನಗಳ ಆಸೆಯಲ್ಲಿದ್ದ ಎನ್‌ಡಿಎ ಒಕ್ಕೂಟಕ್ಕೆ ತೀವ್ರ ಮುಖಭಂಗ ಎದುರಾಗಿದೆ . ಬಿಜೆಪಿ ಒಂದೇ 300 ಸ್ಥಾನಗಳನ್ನು ಗಳಿಸುವ ಅದರ ಕನಸು ಕನಸಾಗಿಯೇ ಉಳಿದಿದೆ. ಆದರೆ, ಈ ಬಗ್ಗೆ ಮಾಧ್ಯಮಗಳ ವಿಮರ್ಶೆ, ಸುದ್ದಿಗಳು ಮಾತ್ರ ಬೇರೆ ರೀತಿಯಲ್ಲಿವೆ.
ಹೌದು. ಮಾಧ್ಯಮಗಳು ಮೋದಿಯವರ ಸೋಲನ್ನು ಒಪ್ಪಿಕೊಳ್ಳುವ ಹಂತದಲ್ಲಿಲ್ಲ. ಅವರ ಅಲೆ ಕಡಿಮೆಯಾಗಿದೆ ಎಂಬುದನ್ನು ತೋರಿಸದೆ ಕಾಂಗ್ರೆಸ್‌ನ ಅಂಕಿ ಅಂಶಗಳ ಜೊತೆಗೆ ಬಿಜೆಪಿ ಅಂಕಿ ಅಂಶಗಳನ್ನೇ ಹೈಲೆಟ್ ಮಾಡುತ್ತಿವೆ. ಎನ್‌ಡಿಎ ಒಕ್ಕೂಟ 300 ಸ್ಥಾನಗಳನ್ನು ಕೂಡ ದಾಟದ ಬಗ್ಗೆ ಮೌನವಾಗಿವೆ. ಈ ಬಗ್ಗೆ ಮಾಧ್ಯಮ ಚರ್ಚೆಯಲ್ಲಿ ಸ್ವರಾಜ್ ಇಂಡಿಯಾ ನಾಯಕ ಯೋಗೇಂದ್ರ ಯಾದವ್ ಸರಿಯಾದ ಉತ್ತರಗಳನ್ನು ನೀಡಿ, ಮಾಧ್ಯಮಗಳ ಬಾಯಿ ಮುಚ್ಚಿಸಿದ್ದಾರೆ.

ಮೋದಿ ಸೋಲು ಒಪ್ಪದ ಮಾಧ್ಯಮಗಳು: ಯೋಗೇಂದ್ರ ಯಾದವ್ ಚಾಟಿ
ಲೋಕಸಭಾ ಚುನಾವಣೆ ಮತ ಎಣಿಕೆಯ ಇಡೀ ದಿನ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳ ಚರ್ಚೆಯಲ್ಲಿ ಭಾಗವಹಿಸಿದ್ದ ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಅವರು ಮಾಧ್ಯಮಗಳು ದೇಶದಲ್ಲಿ ಏನನ್ನು ಮುಚ್ಚಿಡುತ್ತಿವೆ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.
ಇಂಡಿಯಾ ಟುಡೇ ಚಾನೆಲ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಯೋಗೇಂದ್ರ ಯಾದವ್ ಮಾಧ್ಯಮಗಳು ಹೇಗೆ ಫಲಿತಾಂಶವನ್ನು ಹೇಗೆ ಕೊನೆಯ ಕ್ಷಣದ ವರೆಗೂ ತಿರುಗಿಸುವ ಪ್ರಯತ್ನ ಮಾಡಿವೆ ಎಂಬುದನ್ನು ತಿಳಿಸಿದ್ದಾರೆ. ಮಾಧ್ಯಮಗಳು ಎರಡು ದಿನಗಳ ಹಿಂದೆಯೇ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದು ರೆಡಿ ಮಾಡಿಕೊಂಡಿರುವ ಪಾಯಿಂಟ್‌ಗಳನ್ನೇ ಫಲಿತಾಂಶಕ್ಕೂ ಮುನ್ನ ಹಾಕುತ್ತಿರುವುದನ್ನು ಬಹಿರಂಗ ಮಾಡಿದ್ದಾರೆ.

ಇದಲ್ಲದೆ ಮಾಧ್ಯಗಳು ಇಷ್ಟು ದಿನ ಹೇಗೆ ಉಳಿಯುತ್ತಿವೆ ಎಂಬುದನ್ನು ವ್ಯಂಗ್ಯವಾಗಿ ರಾಷ್ಟ್ರೀಯ ಚಾನೆಲ್ ಒಂದರಲ್ಲಿ ಬಹಿರಂಗವಾಗಿ ತಿಳಿಸಿದ್ದಾರೆ. ಮಾಧ್ಯಮಗಳು ಆಡಳಿತ ಪಕ್ಷದ ಮಾತುಗಳಿಗೆ ದನಿಯಾಗುವ ಜೊತೆಗೆ ವಿರೋಧ ಪಕ್ಷಗಳ ಮಾತಿಗೂ ಜಾಗ ಕೊಟ್ಟೆ ಪ್ರಜಾಪ್ರಭುತ್ವವನ್ನು ಉಳಿಸಬಹುದು. ಅದೊಂದು ಸುಂದರ ಕೆಲಸವಾಗುತ್ತದೆ ಎಂದು ತಿವಿದಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಮಾಧ್ಯಮಗಳು ನಿಜವಾಗಿಯೂ ದನಿಯಾಗಬೇಕು. ಅದು ಬಿಟ್ಟು ಪಕ್ಷವೊಂದರ ಮುಖವಾಣಿಯಾಗಬಾರದು ಎಂಬುದನ್ನು ಯೋಗೇಂದ್ರ ಯಾದವ್ ತಿಳಿಸಿದ್ದಾರೆ. ಸತ್ಯವನ್ನು ತಿಳಿಸುವ ಜೊತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇನ್ನು ಮುಂದೆಯಾದರೂ ಮಾಧ್ಯಮಗಳು ಬಳಸಿಕೊಳ್ಳಬೇಕು ಎಂದು ಮಾಧ್ಯಮದಲ್ಲಿಯೇ ಸರಿಯಾಗಿ ತಿವಿದಿದ್ದಾರೆ.












Click it and Unblock the Notifications