Delhi Mayoral Election: ದೆಹಲಿ ಮೇಯರ್ ಆಗಿ ಶೆಲ್ಲಿ ಒಬೆರಾಯ್, ಉಪಮೇಯರ್ ಆಗಿ ಆಲೆ ಮೊಹಮ್ಮದ್ ಇಕ್ಬಾಲ್ ಅವಿರೋಧ ಗೆಲುವು
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮೇಯರ್ ಆಗಿ ಶೆಲ್ಲಿ ಒಬೆರಾಯ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಎಪಿ ಕಾರ್ಪೊರೇಟರ್ ಆಲೆ ಮೊಹಮ್ಮದ್ ಇಕ್ಬಾಲ್ ಅವರು ಉಪಮೇಯರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಕಾರ್ಪೊರೇಟರ್ ಮತ್ತು ಗ್ರೇಟರ್ ಕೈಲಾಶ್ ಪಕ್ಷದ ಮೇಯರ್ ಅಭ್ಯರ್ಥಿ ಶಿಖಾ ರೈ ತಮ್ಮ ಹೆಸರನ್ನು ಹಿಂಪಡೆದಿದ್ದಾರೆ. ಬಿಜೆಪಿಯ ಉಪಮೇಯರ್ ಅಭ್ಯರ್ಥಿ ಸೋನಿ ಪಾಂಡೆ ಕೂಡ ತಮ್ಮ ಹೆಸರನ್ನು ಹಿಂಪಡೆದಿದ್ದಾರೆ.
ದೆಹಲಿಯ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ಇಂದು ಮತದಾನ ನಡೆಯಿತು. ದೆಹಲಿ ಕಾರ್ಪೊರೇಷನ್ ಸೆಕ್ರೆಟರಿಯೇಟ್ ಸಿವಿಕ್ ಸೆಂಟರ್‌ನಲ್ಲಿ ಬೆಳಗ್ಗೆ 11 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಯಿತು. ಮೇಯರ್ ಸ್ಥಾನಕ್ಕೆ ಎಎಪಿಯಿಂದ ಶೈಲಿ ಒಬೆರಾಯ್ ಮತ್ತು ಬಿಜೆಪಿಯಿಂದ ಶಿಖಾ ರೈ ಕಣದಲ್ಲಿದ್ದರು.

ಚುನಾವಣೆಯಲ್ಲಿ ಒಟ್ಟು 274 ಮತಗಳು ಚಲಾವಣೆಯಾಗಬೇಕಿತ್ತು. ಆಮ್ ಆದ್ಮಿ ಪಕ್ಷ 148 ಮತ್ತು ಬಿಜೆಪಿ 115 ಮತಗಳನ್ನು ಹೊಂದಿತ್ತು. ಆದರೆ ಚುನಾವಣೆಗೂ ಮುನ್ನ ಬಿಜೆಪಿ ಮೇಯರ್ ಅಭ್ಯರ್ಥಿ ಶಿಖಾ ರೈ ತಮ್ಮ ಹೆಸರನ್ನು ಹಿಂಪಡೆದಿದ್ದಾರೆ. ಮಾತ್ರವಲ್ಲದೆ ಬಿಜೆಪಿಯ ಉಪಮೇಯರ್ ಅಭ್ಯರ್ಥಿ ಸೋನಿ ಪಾಂಡೆ ಕೂಡ ತಮ್ಮ ಹೆಸರನ್ನು ಹಿಂಪಡೆದಿದ್ದಾರೆ.
दिल्लीवासियों को बधाई 🎉
— AAP (@AamAadmiParty) April 26, 2023
Delhi की जनता को एक बार फ़िर मिले ईमानदार Mayor और Dy. Mayor 💯@OberoiShelly निर्विरोध मेयर और @AaleyIqbal Dy. Mayor का चुनाव जीते। 💐
दिल्ली को स्वच्छ और विश्वस्तरीय शहर बनाना AAP की प्राथमिकता है। pic.twitter.com/MueMFssNhK
ಇದರಿಂದಾಗಿ ಈ ಬಾರಿಯೂ ಎಎಪಿಯ ಮೇಲುಗೈ ಸಾಧಿಸಿದೆ. ಆದರೆ ಬಿಜೆಪಿ ಗೆಲ್ಲಲು ಸಾಧ್ಯವಿರುವ ಎಲ್ಲಾ ಕಸರತ್ತು ಮಾಡಿತ್ತು. ಆದರೆ ಬಿಜೆಪಿಯ ಪ್ರಯತ್ನಗಳು ಫಲಿಸಲಿಲ್ಲ.

ಕಳೆದ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ್ದ ಎಎಪಿ
ಕಳೆದ ಚುನಾವಣೆಯಲ್ಲಿ ಮೇಯರ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿತ್ತು. ಎಎಪಿ ಅಭ್ಯರ್ಥಿ ಶೈಲಿ ಒಬೆರಾಯ್ ಮೇಯರ್ ಮತ್ತು ಮೊಹಮ್ಮದ್ ಇಕ್ಬಾಲ್ ಉಪಮೇಯರ್ ಆಗಿ ಆಯ್ಕೆಯಾದರು. ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ಶೈಲಿ ಒಬೆರಾಯ್ ಅವರು ಫೆಬ್ರವರಿ 22 ರಂದು ದೆಹಲಿಯ ಮೇಯರ್ ಆಗಿ ಆಯ್ಕೆಯಾದರು. ಅವರು ಭಾರತೀಯ ಜನತಾ ಪಕ್ಷದ ರೇಖಾ ಗುಪ್ತಾ ಅವರನ್ನು 34 ಮತಗಳ ಅಂತರದಿಂದ ಸೋಲಿಸಿದರು. ಒಬೆರಾಯ್ ಒಟ್ಟು 266 ಮತಗಳಲ್ಲಿ 150 ಮತಗಳನ್ನು ಪಡೆದರೆ ರೇಖಾ ಗುಪ್ತಾ 116 ಮತಗಳನ್ನು ಪಡೆದರು.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications