• search

ಪತ್ರಕರ್ತ ಬುಖಾರಿ ಹತ್ಯೆ ಸಂಚುಕೋರ ಓದಿದ್ದು ಬೆಂಗಳೂರಿನಲ್ಲಿ!

By Sachhidananda Acharya
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ನವದೆಹಲಿ, ಜೂನ್ 28: ಜಮ್ಮು ಮತ್ತು ಕಾಶ್ಮೀರದ ಪತ್ರಕರ್ತ ಶೂಜತ್ ಬುಖಾರಿ ಹತ್ಯೆಗೆ ಸಂಚು ರೂಪಿಸಿದ್ದ ಮಾಸ್ಟರ್ ಮೈಂಡ್ ಬೆಂಗಳೂರಿನಲ್ಲಿ ಓದಿದ್ದ ಎಂಬ ವಿಚಾರ ಬಹಿರಂಗವಾಗಿದೆ. ನಗರದ ಖಾಸಗಿ ಕಾಲೇಜಿನಲ್ಲಿ ಈತ ಎಂಬಿಎ ಪದವಿ ಪಡೆದಿದ್ದ ಎಂದು ಗೊತ್ತಾಗಿದೆ.

  ಬುಖಾರಿ ಸಂಪಾದಕರಾಗಿದ್ದ ರೈಸಿಂಗ್‌ ಕಾಶ್ಮೀರ್ ಪತ್ರಿಕೆ ಪಾಕಿಸ್ತಾನದ ಪೋಷಣೆಯಲ್ಲಿರುವ ಉಗ್ರ ಸಂಘಟನೆಗಳ ವಿರುದ್ಧ ನೆಲೆಯಲ್ಲಿ ನಿಂತಿತ್ತು. ಈ ಕಾರಣಕ್ಕೆ ಅವರನ್ನು ಕೊಲೆ ಮಾಡಲು ಸಜ್ಜದ್‌ ಗುಲ್‌ ಖೆಡ್ಡಾ ತೋಡಿದ್ದ.

  ಶುಜಾತ್ ಬುಖಾರಿ ಹತ್ಯೆ ಮಾಡಿದ ಮೂವರಲ್ಲಿ ಒಬ್ಬ ಪಾಕ್ ಪ್ರಜೆ!

  ಗುಲ್ ಬೆಂಗಳೂರಿನಲ್ಲಿ ಎಂಬಿಎ ಓದಿಕೊಂಡ ಉನ್ನತ ವ್ಯಾಸಾಂಗ ಮಾಡಿದ ಯುವಕನಾಗಿದ್ದು ಈತ ಲಷ್ಕರ್ ಇ ತಯ್ಯಬಾ (ಎಲ್ಇಟಿ) ಉಗ್ರ ಸಂಘಟನೆಗೆ ಯುವಕರನ್ನು ಸೇರ್ಪಡೆ ಮಾಡುವಲ್ಲಿ ನಿರತನಾಗಿದ್ದ. ಈತನೇ ಹತ್ಯೆಯ ರೂವಾರಿ ಎಂದು ಗುಪ್ತಚರ ಇಲಾಖೆ ಮೂಲಗಳು ಹೇಳಿವೆ.

  Mastermind of Shujaat Bukharis murder did MBA in Bengaluru

  ಈತ ಮತ್ತು ಮುಖ್ಯಸ್ಥ ಹಫೀಜ್‌ ಸಯೀದ್‌ ಕಾಶ್ಮೀರದ ಸ್ಥಳೀಯ ಉಗ್ರರಿಗೆ ಬುಖಾರಿ ಕತೆ ಮುಗಿಸುವಂತೆ ಆದೇಶ ನೀಡಿದ್ದರು ಎಂಬುದು ಗೊತ್ತಾಗಿದೆ.

  ಬೆಂಗಳೂರಿನಿಂದ ರಾವಲ್ಪಿಂಡಿ

  ಬೆಂಗಳೂರಿನ ಕಾಲೇಜಿನಿಂದ ಎಂಬಿಎ ಪದವೀಧರನಾಗಿ ಗುಲ್ ಹೊರ ಬಿದ್ದಿದ್ದ. ನಂತರ ಈತ ಒಂದಷ್ಟು ದಿನ ಪ್ರಯೋಗಾಲಯದಲ್ಲಿ ತಂತ್ರಜ್ಞನಾಗಿ ತರಬೇತಿ ಪಡೆದಿದ್ದ. ನಂತರ ಆರ ಸೇರಿದ್ದು ಉಗ್ರ ಸಂಘಟನೆಗೆ.

  ಪ್ರಸ್ತುತ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಗುಲ್ ನೆಲೆಸಿದ್ದಾನೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಭಯೋತ್ಪಾದನಾ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡಿದ್ದಾನೆ ಎಂದಿದ್ದಾರೆ.

  ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ

  ಈತ ಹಿಂದೊಮ್ಮೆ ಕಾಶ್ಮೀರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಒಂದಷ್ಟು ದಿನಗಳ ಕಾಲ ಶ್ರೀನಗರ ಸೆಂಟ್ರಲ್‌ ಜೈಲಿನಲ್ಲಿದ್ದ ಆತ ಬಳಿಕ ದೆಹಲಿಯ ತಿಹಾರ್‌ ಜೈಲಿಗೆ ರವಾನಿಸಲಾಗಿತ್ತು. ಅಲ್ಲಿಂದ ಆತ ಪಾಕಿಸ್ತಾನಕ್ಕೆ ತಪ್ಪಿಸಿಕೊಂಡಿದ್ದ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Jammu and Kashmir police identified key conspirator behind the assassination of senior Kashmiri journalist Shujaat Bukhari. He did his MBA from a private institution in Bengaluru and is now settled in Pakistan.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more