ಮ್ಯಾನುಯಲ್ ಸ್ಕ್ಯಾವೆಂಜರ್ ನೇಮಕ ತಡೆ: ಸಭೆ ಕರೆಯುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ
ಬೆಂಗಳೂರು, ಏಪ್ರಿಲ್ 13: ದೇಶದಲ್ಲಿ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ನೇಮಕ ತಡೆ ಅರ್ಜಿ ಕುರಿತು ಸರ್ವೋಚ್ಚ ನ್ಯಾಯಾಲಯವು (Supreme Court) ಮಹತ್ವದ ಸೂಚನೆ ನೀಡಿದೆ.
ಪ್ರಕರಣದ ವಿವಿಧ ಅಂಶಗಳನ್ನು ಚರ್ಚಿಸಲು ಸಾಮಾಜಿಕ ನ್ಯಾಯದ ಉಸ್ತುವಾರಿ ವಹಿಸಿದ ದೇಶ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾರ್ಯದರ್ಶಿಗಳ ಜೊತೆಗೆ ಸಭೆ ನಡೆಸುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ. ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕಾರ್ಯದರ್ಶಿಗೆ ನ್ಯಾಯಪೀಠ ಬುಧವಾರ ಸಭೆ ಕರೆಯಲು ಸುಪ್ರಿಂ ನಿರ್ದೇಶನ ನೀಡಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ರವೀಂದ್ರ ಭಟ್ ಮತ್ತು ದೀಪಂಕರ್ ದತ್ತ ಅವರ ಪೀಠವು ಅಮಿಕಸ್ ಕ್ಯೂರಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರಿಗೆ ಸಭೆಯ ಸಂಭವನೀಯ 'ಚರ್ಚೆ ಅಂಶಗಳನ್ನು' ನ್ಯಾಯಾಲಯಕ್ಕೆ ಸೂಚಿಸುವಂತೆ ತಿಳಿಸಿದೆ.
ಸ್ಕ್ಯಾವೆಂಜರ್‌ಗಳನ್ನು ನೇಮಕ ತಡೆ ಕೋರಿ ಅರ್ಜಿ
ಭಾರತದಲ್ಲಿ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳನ್ನು ನೇಮಿಸಿಕೊಳ್ಳುವುದನ್ನು ತಡೆಗೆ ಕ್ರಮಗಳನ್ನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಆ ಅರ್ಜಿಯನ್ನು ನ್ಯಾಯಪೀಠ ಪರಿಗಣಿಸಿದೆ.
ಫೆಬ್ರವರಿಯಲ್ಲಿ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯಿದೆ 2013 ರ ಪ್ರಕಾರ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ಉದ್ಯೋಗವನ್ನು ತಡೆಗಟ್ಟಲು ತೆಗೆದುಕೊಂಡ ಕ್ರಮಗಳನ್ನು ದಾಖಲೆಯಲ್ಲಿ ಇರಿಸಲು ಭಾರತ ಒಕ್ಕೂಟಕ್ಕೆ ನ್ಯಾಯಾಲಯವು ನಿರ್ದೇಶನ ನೀಡಿದೆ.
ಸುಮಾರು ಒಂಬತ್ತು ವರ್ಷಗಳ ಹಿಂದೆ 2014ರಲ್ಲಿ ಸಫಾಯಿ ಕರಮಾಚಾರಿ ಆಂದೋಲನ ಮತ್ತು ಇತರರ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಹಾಗೂ ಇತರ ಸಂಬಂಧಿಸಿದ ಇಲಾಖೆಗಳು ನೀಡಿದ ಮಾರ್ಗಸೂಚಿಗಳು ಏನು, ಆ ಬಗ್ಗೆ ಮಾಹಿತಿ ಕೇಳಲಾಗಿದೆ.

ಸಫಾಯಿ ಕರಮಾಚಾರಿ ಆಂದೋಲನ ತೀರ್ಪಿನಲ್ಲಿ ನ್ಯಾಯಾಲಯವು ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ಪುನರ್ವಸತಿಗೆ ಆರ್ಥಿಕ ನೆರವು, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿವೇತನ, ವಸತಿ ಪ್ಲಾಟ್‌ಗಳ ಹಂಚಿಕೆ, ಜೀವನೋಪಾಯ ಕೌಶಲ್ಯ ಮತ್ತು ಮಾಸಿಕ ಸ್ಟೈಫಂಡ್‌ಗಳು, ರಿಯಾಯಿತಿ ಸಾಲ ಇತ್ಯಾದಿಗಳನ್ನು ಒಳಗೊಂಡಂತೆ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಲಾಗಿದೆ.
ನ್ಯಾಯಾಲಯದ ಸೂಚನೆಗಳು ಏನು?
ಒಳಚರಂಡಿ ಸಾವಿನ ಪ್ರಕರಣಗಳಲ್ಲಿ ಕಾಯ್ದೆ ಪ್ರಕಾರ ನಿಗದಿತ ಕನಿಷ್ಠ ಪರಿಹಾರವನ್ನು ನೀಡಬೇಕು. ರೈಲ್ವೆ ಹಳಿಗಳ ಮೇಲೆ ಹಸ್ತಚಾಲಿತ ಸ್ಕ್ಯಾವೆಂಜಿಂಗ್ ಮಾಡದಂತೆ ನೋಡಿಕೊಳ್ಳಿದೆ ಎಂದು ನಿರ್ದೇಶಿಸಿದೆ.
ವಿಚಾರಣೆ ವೇಳೆ ಅಮಿಕಸ್ ವಕೀಲ ಕೆ ಪರಮೇಶ್ವರ್, ಭಾರತೀಯ ರೈಲ್ವೇಯು ರಕ್ಷಣಾತ್ಮಕ ಅಂಶಗಳನ್ನು ಬಳಸಿಕೊಂಡು 'ಶೌಚಾಲಯ'ಕ್ಕೆ ಕ್ಲೀನರ್‌ಗಳನ್ನು ನೇಮಿಸಿಕೊಂಡಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದು ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಆಗುವುದಿಲ್ಲ. ರೈಲ್ವೆ ಹಳಿಗಳಲ್ಲಿ ಸ್ಕ್ಯಾವೆಂಜರ್ಸ್ ಕೆಲಸ ಕುರಿತು ಕಾಯ್ದೆಯ ನಿಯಮಗಳ ಅಡಿಯಲ್ಲಿ ಉದ್ಯೋಗ ನೇಮಕಕ್ಕೆ ಅನುಮತಿಸಲಾಗಿದೆ ಎಂಬುದಿದೆ ಎಂದು ಅವರು ಹೇಳಿದರು.
ಭಾರತೀಯ ರೈಲ್ವೆ ಅತ್ಯಂತ ದೊಡ್ಡ ಅಪರಾಧಿ ಎಂದು ಅಮಿಕಸ್ ಕ್ಯೂರಿ ವಿಚಾರಣ ವೇಳೆ ಪ್ರಸ್ತಾಪಿಸಿದರು. ಕಂಟೋನ್ಮೆಂಟ್ ಬೋರ್ಡ್‌ಗಳು ಮತ್ತು ರೈಲ್ವೇಗಳಲ್ಲಿ ಡ್ರೈ ಲ್ಯಾಟ್ರಿನ್‌ಗಳು ಮತ್ತು ಸಫಾಯಿ ಕರಮಾಚಾರಿಗಳ ಸ್ಥಿತಿಗತಿ ಬಗ್ಗೆ ನ್ಯಾಯಾಲಯ ಕೇಳಿತ್ತು. ಅಂದರೆ ರೈಲ್ವೇ ಮತ್ತು ಕಂಟೋನ್ಮೆಂಟ್ ಬೋರ್ಡ್‌ಗಳಲ್ಲಿ ಗುತ್ತಿಗೆದಾರರು, ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕೆಲಸ ಮಾಡುವ ಸಫಾಯಿ ಕರಮಾಚಾರಿಗಳ ಉದ್ಯೋಗ ಕುರಿತು ಮಾಹಿತಿ ಕೇಳಿತ್ತು.
ನ್ಯಾಯಾಲಯದ ಈ ಹಿಂದೆ ನೀಡಿದ್ದ ನಿರ್ದೇಶನದ ಪ್ರಕಾರ ಸಮಿತಿಗಳನ್ನು ರಚಿಸಬೇಕಿತ್ತು. ಆದರೂ ರಚಿಸದ ರಾಜ್ಯಗಳಿಗೆ ಏನು ಸೂಚನೆ ನೀಡಬಹುದು ಎಂಬೆಲ್ಲ ಅಂಶಗಳ ಕುರಿತು ಪೀಠವು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರನ್ನು ಕೇಳಿದೆ ಎನ್ನಲಾಗಿದೆ.
ಬಳಿಕ ನ್ಯಾಯಪೀಠವು, 2014ರ ಜೂನ್ ಮತ್ತು 2014ರ ಅಕ್ಟೋಬರ್ ನಲ್ಲಿ ಹೊರಡಿಸಲಾಗಿದ್ದ ಅಧಿಸೂಚನೆಗಳ ಆಧಾರದಲ್ಲಿ ಇಂದಿನ ಅಂಶಗಳೊಂದಿಗೆ ಭಾರತೀಯ ರೈಲ್ವೇ ಇಲಾಖೆಯು ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿತು. ನಂತರ ಅರ್ಜಿ ವಿಚಾರಣೆಯನ್ನು ಇದೇ ತಿಂಗಳ ಏಪ್ರಿಲ್ 19 ರಂದು ಮುಂದೂಡಿತು.












Click it and Unblock the Notifications