Manipur violence: ಭಾರತ-ಮ್ಯಾನ್ಮಾರ್ ಗಡಿಗೆ ಚಾಚಿದ ಮಣಿಪುರ ಬೆಂಕಿ, ಮೈತೇಯಿ ಸಮುದಾಯದ ಮನೆಗಳನ್ನು ಸುಟ್ಟು ಹಾಕಿದ ಮಹಿಳೆಯರು
ಗುವಾಹಟಿ, ಜುಲೈ 26: ಕಲಹ ಪೀಡಿತ ಮಣಿಪುರದ ಹಿಂಸಾಚಾರ ಭಾರತ-ಮ್ಯಾನ್ಮಾರ್ ಗಡಿಗೆ ಚಾಚಿಕೊಂಡಿದೆ. ಹೊಸದಾಗಿ ವರದಿಯಾಗಿರುವ ಹಿಂಸಾಚಾರದಲ್ಲಿ ಮೈತೇಯಿ ಸಮುದಾಯದ ಮನೆಗಳು ಭಸ್ಮಗೊಂಡಿವೆ. ಈ ಘಟನೆ ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ಪಟ್ಟಣದಲ್ಲಿ ನಡೆದಿದೆ.
ಸುಮಾರು 2,000 ಜನರ ಗುಂಪೊಂದು ಭಾರತ-ಮ್ಯಾನ್ಮಾರ್ ಗಡಿ ಪಟ್ಟಣವಾದ ಮೊರೆಹ್‌ನಲ್ಲಿ ಬುಧವಾರ ಬೆಳಿಗ್ಗೆ ಮನೆಗಳನ್ನು ಸುಟ್ಟುಹಾಕಿದೆ. ಸುಮಾರು 30 ಮನೆಗಳಿಗೆ ಬೆಂಕಿ ಹಚ್ಚಿದೆ. ಇತರ ನಾಲ್ಕು ಮನೆಗಳನ್ನು ನೆಲಸಮಗೊಳಿಸಿದೆ. ಈ ಮನೆಗಳೆಲ್ಲವೂ ಮೈತೇಯಿ ಸಮುದಾಯದ ಜನರಿಗೆ ಸೇರಿವೆ ಎಂದು ವರದಿಯಾಗಿವೆ.

ಬಹುತೇಕ ಮಹಿಳೆಯರಿಂದಲೇ ತುಂಬಿದ್ದ ಗುಂಪು ಬೆಳಗ್ಗೆ 10 ಗಂಟೆ ಸುಮಾರಿಗೆ ಮೋರೆ ಬಜಾರ್ ಪ್ರದೇಶದಲ್ಲಿ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ದಾಳಿಗಳು ಮುಂದುವರಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಭದ್ರತಾ ಸಿಬ್ಬಂದಿ ಸ್ಥಳದಲ್ಲಿದ್ದರೂ ಮೂಕ ಪ್ರೇಕ್ಷಕರಾಗಿದ್ದರು ಎಂದು ವರದಿಯಾಗಿದೆ. ಮೇ 3 ರಂದು ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಈ ಪಟ್ಟಣವನ್ನು ಮೈತೇಯಿ ಸಮುದಾಯದವರು ತೊರೆದಿದ್ದಾರೆ.
ಮೊರೆಹ್ ಪಟ್ಟಣವು ವಿವಿಧ ಸಮುದಾಯಗಳ ಮಿಶ್ರ ಜನಸಂಖ್ಯೆಯನ್ನು ಹೊಂದಿದೆ. ಕುಕಿಗಳು, ಮೈತೇಯಿಗಳು, ತಮಿಳರು, ಗೂರ್ಖಾಗಳು, ಬೆಂಗಾಲಿಗಳು, ಪಂಜಾಬಿಗಳು ಸೇರಿದಂತೆ ಇತ್ಯಾದಿ ಸಮಯದಾಯದ ಜನರು ಈ ಸ್ಥಳದಲ್ಲಿ ವಾಸವಾಗಿದ್ದಾರೆ.

ಇಲ್ಲಿನ ಆದಿವಾಸಿಗಳಲ್ಲದವರು ಹೆಚ್ಚಾಗಿ ವ್ಯಾಪಾರಿಗಳು. ಅವರು ಹೆಚ್ಚಾಗಿ ಮ್ಯಾನ್ಮಾರ್‌ನ ಗ್ರಾಹಕರನ್ನು ಅವಲಂಬಿಸಿದ್ದಾರೆ. ಆದಾಗ್ಯೂ, ಈಗ ಮ್ಯಾನ್ಮಾರ್ ದೇಶದ ಜನರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇದು ವ್ಯಾಪಾರದ ಮೇಲೆ ತೀವ್ರ ಹೊಡೆತ ಬಿದ್ದಿದೆ ಎಂದು ಹೇಳಲಾಗಿದೆ.
ಬಿಷ್ಣುಪುರ್-ಚುರಚಂದ್‌ಪುರ ಜಿಲ್ಲೆಗಳ ಗಡಿಗೆ ಸಮೀಪವಿರುವ ಸ್ಥಳದಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ರೈತರು ಗಾಯಗೊಂಡಿದ್ದಾರೆ. ಇದಾದ, ಮರುದಿನ ಮನೆಗೆ ಹಂಚಿದ ಪ್ರಕರಣ ನಡೆದಿದೆ.












Click it and Unblock the Notifications