Get Updates
Get notified of breaking news, exclusive insights, and must-see stories!

Manipur Violance End: ಸರ್ಕಾರದ ಜತೆ ಉಗ್ರಗಾಮಿ ಗುಂಪು ಒಪ್ಪಂದ, 60 ವರ್ಷದ ಚಳವಳಿ ಸುಖಾಂತ್ಯ: ಅಮಿತ್ ಶಾ

ನವದೆಹಲಿ ನವೆಂಬರ್ 29: ದೇಶಾದ್ಯಂತ ಚರ್ಚೆ, ಆಕ್ರೋಶ ಕಾರಣವಾಗಿದ್ದ ಮಣಿಪುರ ಹಿಂಸಾಚಾರವು ಅಂತ್ಯ ಕಾಣಲಿದೆ. ಇಲ್ಲಿನ ಉಗ್ರಗಾಮಿ ಗುಂಪು ಸರ್ಕಾರಕ್ಕೆ ತಲೆಬಾಗಿದ್ದು, ಹಿಂಸಾಚಾರ ತ್ಯೆಜಿಸಲು ಒಪ್ಪಿಕೊಂಡು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ. ಇದರಿಂದ ಮಣಿಪುರದ ಜನರು ನಿಟ್ಟುಸಿರು ಬಿಡುವಂತಾಗಿದೆ.

ಮಣಿಪುರದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರಗಾಮಿ ಗುಂಪು ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (UNLF) ನವೆಂಬರ್ 29 ರಂದು ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ. ಇನ್ನುಮುಂದೆ ಹಿಂಸಾಚಾರವನ್ನು ತ್ಯಜಿಸಲು ಒಪ್ಪಿಕೊಂಡಿದೆ ಎಂದು ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಘೋಷಣೆ ಮಾಡಿದ್ದಾರೆ.

Manipur Violance End: Manipur Militant Group UNLF Signs Peace Accord With Government: Amit Shah

UNLF ಇದೊಂದು ಮಣಿಪುರದ ಅತ್ಯಂತ ಹಳೆಯ ಇಂಫಾಲ್ ಕಣಿವೆ ಮೂಲದ ಸಶಸ್ತ್ರಧಾರಿ ಗುಂಪು. ಇದರ ಸದಸ್ಯರು ಸಾಕಷ್ಟು ಹಿಂಸಾಚಾರ ಕೃತ್ಯಗಳನ್ನು ಮಾಡಿದ್ದಾರೆ. ಇದೀಗ ಸರ್ಕಾರದೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ಗುಂಪಿನ ಎಲ್ಲ ಸದಸ್ಯರು ಒಪ್ಪಿದ್ದಾರೆ.

ಪ್ರಧಾನಿ ಮೋದಿ ಸರ್ಕಾರದ ಸಾಧನೆ

ಈಶಾನ್ಯದಲ್ಲಿ ಶಾಶ್ವತ ಶಾಂತಿ ಸ್ಥಾಪಿಸಲು ಮೋದಿ ಸರ್ಕಾರದ ಅವಿರತ ಪ್ರಯತ್ನಗಳು ಮೂಲಕ ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ಶಾಂತಿ ಸ್ಥಾಪನೆಯ ಹೊಸ ಅಧ್ಯಾಯ ಆರಂಭವಾಗಲಿದೆ. ಒಪ್ಪಂದಂತೆ ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್ (ಯುಎನ್‌ಎಲ್ಎಫ್) ಬುಧವಾರ ನವದೆಹಲಿಯಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿತು ಎಂದು ಅಮಿತ್ ಶಾ ತಿಳಿಸಿದ್ದಾರೆ.

Manipur Violance End: Manipur Militant Group UNLF Signs Peace Accord With Government: Amit Shah

ಮಣಿಪುರದ ಅತ್ಯಂತ ಹಳೆಯ ಕಣಿವೆ ಮೂಲದ ಸಶಸ್ತ್ರ ಗುಂಪು UNLF ಹಿಂಸಾಚಾರವನ್ನು ತ್ಯಜಿಸಲು ಮತ್ತು ಮುಖ್ಯವಾಹಿನಿಗೆ ಸೇರಲು ಒಪ್ಪಿಕೊಂಡಿದೆ. ಈ ಮೂಲಕ ಗುಂಪಿನ ಸದಸ್ಯರನ್ನು ಪ್ರಜಾಪ್ರಭುತ್ವ ಪ್ರಕ್ರಿಯೆಗಳಿಗೆ ಸ್ವಾಗತಿಸುತ್ತೇನೆ. ಮುಂದಿನ ಶಾಂತಿ ಮತ್ತು ಪ್ರಗತಿಯ ಹಾದಿಯಲ್ಲಿ ಗುಂಪಿನ ಪ್ರಯಾಣಕ್ಕೆ ಶುಭ ಹಾರೈಸುವುದಾಗಿ ಸಾಮಾಜಿಕ ಜಾಲತಾಣ X ನಲ್ಲಿ ಗೃಹ ಸಚಿವರು ಪೋಸ್ಟ್ ಮಾಡಿದ್ದಾರೆ.

ಒಪ್ಪಂದಿಂದ 6 ದಶಕದ ಚಳವಳಿ ಅಂತ್ಯ

ಭಾರತ ಸರ್ಕಾರ ಮತ್ತು ಮಣಿಪುರ ಸರ್ಕಾರದ ಯುಎನ್‌ಎಲ್‌ಎಫ್‌ನೊಂದಿಗೆ ಇಂದು ನಡೆದ ಶಾಂತಿ ಒಪ್ಪಂದವು ಕಳೆದ ಆರು ದಶಕಗಳ (60)ನಡೆದುಕೊಂಡು ಬಂದಿದ್ದ ಸುದೀರ್ಘ ಸಶಸ್ತ್ರ ಚಳವಳಿಯ ಅಂತ್ಯದ ಪ್ರತೀಕವಾಗಿದೆ ಎಂದು ಅಮಿತ್ ಶಾ ವಿವರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಸರ್ವರನ್ನೊಳಗೊಂಡ ಅಭಿವೃದ್ಧಿಯ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಮತ್ತು ಈಶಾನ್ಯ ಭಾರತದ ಯುವಕರಿಗೆ ಉತ್ತಮ ಭವಿಷ್ಯವನ್ನು ಒದಗಿಸುವಲ್ಲಿ ಇಂದಿನ ಒಪ್ಪಂದು ಒಂದು ಹೆಗ್ಗುರುತು ಸಾಧನೆ ಆಗಿದೆ ಎಂದು ಅವರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+