Get Updates
Get notified of breaking news, exclusive insights, and must-see stories!

ಮಣಿಪುರ: ಆಗಸ್ಟ್ 21 ರಂದು ವಿಧಾನಸಭೆ ಅಧಿವೇಶನ ನಡೆಸುವಂತೆ ರಾಜ್ಯಪಾಲರಿಗೆ ಸಂಪುಟದ ಮನವಿ

ಇಂಫಾಲ, ಆಗಸ್ಟ್. 05: ರಾಜ್ಯ ವಿಧಾನಸಭೆಯ ಮುಂದಿನ ಅಧಿವೇಶನವನ್ನು ಆಗಸ್ಟ್ 21 ರಂದು ಕರೆಯುವಂತೆ ಮಣಿಪುರ ಸಂಪುಟವು ರಾಜ್ಯಪಾಲರಿಗೆ ಶಿಫಾರಸು ಮಾಡಿದೆ ಎಂದು ಅಧಿಕೃತ ಪ್ರಕಟಣೆ ಶುಕ್ರವಾರ ತಿಳಿಸಿದೆ. ರಾಜ್ಯದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಕುರಿತು ಚರ್ಚಿಸಲು ವಿಧಾನಸಭೆಯ ವಿಶೇಷ ಅಧಿವೇಶನ ನಡೆಸಬೇಕೆಂದು ಹಲವು ನಾಗರಿಕ ಸಮಾಜ ಸಂಘಟನೆಗಳು ಒತ್ತಾಯಿಸುತ್ತಿವೆ.

"21 ಆಗಸ್ಟ್ 2023 ರಂದು 12 ನೇ ಮಣಿಪುರ ವಿಧಾನಸಭೆಯ 4 ನೇ ಅಧಿವೇಶನವನ್ನು ಕರೆಯಲು ರಾಜ್ಯ ಸಚಿವ ಸಂಪುಟವು ಮಣಿಪುರದ ಗೌರವಾನ್ವಿತ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ" ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯವು ಹೊರಡಿಸಿದ ಪ್ರಕಟಣೆ ತಿಳಿಸಿದೆ.

Manipur cabinet recommended governor to hold assembly session on Aug 21

ಸುಮಾರು ಮೂರು ತಿಂಗಳ ಹಿಂದೆ ಮೇ 3 ರಂದು ಮೈತೇಯಿ ಸಮುದಾಯವರಿಗೆ ಪರಿಶಿಷ್ಟ ಪಂಗಡದ (ST) ಸ್ಥಾನಮಾನವನ್ನು ಪ್ರಸ್ತಾಪಿಸುವ ಹೈಕೋರ್ಟ್ ಆದೇಶದ ವಿರುದ್ಧ ಕುಕಿ ಸಮುದಾಯ ಪ್ರತಿಭಟನೆ ನಡೆಸಿತ್ತು. ಈ ಸಂದರ್ಭದಲ್ಲಿ ಪ್ರಬಲವಾದ ಮೈತೇಯಿ ಸಮುದಾಯ ಮತ್ತು ಬುಡಕಟ್ಟು ಕುಕಿಗಳ ನಡುವಿನ ಘರ್ಷಣೆಗಳ ಸ್ಫೋಟಗೊಂಡವು. ಜನಾಂಗೀಯ ಹಿಂಸಾಚಾರ ರಾಜ್ಯವನ್ನು ತೀವ್ರವಾಗಿ ಆವರಿಸಿತ್ತು. ಹಿಂಸಾಚಾರದಲ್ಲಿ ಇದುವರೆಗೆ ಕನಿಷ್ಠ 150 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಮತ್ತೆ ಹಿಂಸಾಚಾರ, ಮೂವರ ಹತ್ಯೆ

ಶುಕ್ರವಾರ ತಡರಾತ್ರಿ ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ವರದಿಯಾದ ಹಿಂಸಾಚಾರದ ಘಟನೆಗಳಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಮೃತರು ಕ್ವಾಕ್ಟಾ ಪ್ರದೇಶದಲ್ಲಿ ಮೈತೇಯಿ ಸಮುದಾಯದವರು ಎಂದು ವರದಿಯಾಗಿದೆ. ಹಿಂಸಾಚಾರದ ಹೊಸ ಘಟನೆಗಳಲ್ಲಿ, ಕುಕಿ ಸಮುದಾಯದ ಹಲವಾರು ಮನೆಗಳು ಸಹ ಸುಟ್ಟುಹೋಗಿವೆ. ಪೊಲೀಸ್ ಪಡೆಗಳು ಸ್ಥಳದಲ್ಲಿವೆ.

Manipur cabinet recommended governor to hold assembly session on Aug 21

ಬಿಷ್ಣುಪುರ್ ಪೋಲೀಸರ ಪ್ರಕಾರ, ಕುಕಿ ಸಮುದಾಯದ ಹಲವಾರು ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಮೈತೇಯಿ ಸಮುದಾಯದ ಮೂವರು ಸಾವನ್ನಪ್ಪಿದ್ದಾರೆ. ಕೆಲವು ಜನರು ಬಫರ್ ಝೋನ್ ದಾಟಿ ಮೈತೇಯಿ ಪ್ರದೇಶಗಳಿಗೆ ಬಂದು ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಿಷ್ಣುಪುರ್ ಜಿಲ್ಲೆಯ ಕ್ವಾಕ್ಟಾ ಪ್ರದೇಶದಿಂದ 2 ಕಿ.ಮೀ ಗಿಂತಲೂ ಹೆಚ್ಚು ದೂರದಲ್ಲಿ ಕೇಂದ್ರೀಯ ಪಡೆಗಳು ಬಫರ್ ವಲಯವನ್ನು ಮಾಡಿವೆ.

ಗುರುವಾರ ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ಸಶಸ್ತ್ರ ಪಡೆಗಳು ಮತ್ತು ಮೈತೇಯ್ ಸಮುದಾಯದ ಪ್ರತಿಭಟನಾಕಾರರ ನಡುವೆ ಭುಗಿಲೆದ್ದ ಘರ್ಷಣೆಯಲ್ಲಿ 17 ಜನರು ಗಾಯಗೊಂಡ ಎರಡು ದಿನಗಳ ನಂತರ ಮೂವರ ಸಾವು ಸಂಭವಿಸಿದೆ. ಈ ಘಟನೆಯಿಂದಾಗಿ ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮದಲ್ಲಿ ಕರ್ಫ್ಯೂ ಸಡಿಲಿಕೆಗಳನ್ನು ಮತ್ತೆ ಹಿಂತೆಗೆದುಕೊಳ್ಳುವಂತೆ ಮಾಡಿದೆ. ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಹಗಲಿನಲ್ಲಿ ನಿರ್ಬಂಧ ಹೇರಿದ್ದಾರೆ.

ಜಿಲ್ಲೆಯ ಕಾಂಗ್ವೈ ಮತ್ತು ಫೌಗಕ್ಚಾವೊ ಪ್ರದೇಶಗಳಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಸಶಸ್ತ್ರ ಪಡೆಗಳು ಮತ್ತು ಮಣಿಪುರ ಪೊಲೀಸರು ಅಶ್ರುವಾಯು ಬಳಸಿದ್ದಾರೆ. ವಿವರಗಳ ಪ್ರಕಾರ, ಮೈತೇಯಿ ಮಹಿಳೆಯರು ಜಿಲ್ಲೆಯ ಬ್ಯಾರಿಕೇಡ್ ವಲಯವನ್ನು ದಾಟಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅವರನ್ನು ಅಸ್ಸಾಂ ರೈಫಲ್ಸ್ ಮತ್ತು ರ್ಯಾಪಿಡ್ ಆಕ್ಷನ್ ಫೋರ್ಸ್ (RAF) ತಡೆದು ನಿಲ್ಲಿಸಿತ್ತು. ಇದರಿಂದಾಗಿ ಸಮುದಾಯ ಮತ್ತು ಸಶಸ್ತ್ರ ಪಡೆಗಳ ನಡುವೆ ಕಲ್ಲು ತೂರಾಟ ಮತ್ತು ಘರ್ಷಣೆಗೆ ಕಾರಣವಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+