Arvind Kejriwal: ಪಾದಯಾತ್ರೆಯಲ್ಲಿ ಅರವಿಂದ್ ಕೇಜ್ರಿವಾಲ್‌ರನ್ನ ಜೀವಂತವಾಗಿ ಸುಡಲು ಯತ್ನಿಸಿದ ವ್ಯಕ್ತಿ!
ದೆಹಲಿ ಡಿಸೆಂಬರ್ 1: ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮೇಲೆ ವ್ಯಕ್ತಿಯೊಬ್ಬರು ದ್ರವವನ್ನು ಎಸೆಯಲು ಪ್ರಯತ್ನಿಸಿದ ಘಟನೆ ಶನಿವಾರ ಸಂಜೆ ನಡೆದಿದೆ. ದೆಹಲಿಯ ಗ್ರೇಟರ್ ಕೈಲಾಶ್‌ನ ಸಾವಿತ್ರಿ ನಗರದಲ್ಲಿ ಶನಿವಾರ ಸಂಜೆ ನಡೆದ ಪಾದಯಾತ್ರೆಯಲ್ಲಿ ಕೇಜ್ರಿವಾರನ್ನು ಜೀವಂತವಾಗಿ ಸುಡುವ ಪ್ರಯತ್ನ ನಡೆದಿದೆ ಎಂದು ಎಎಪಿ ಪಕ್ಷ ಆರೋಪಿಸಿದೆ. ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ದಿನ ಕೇಜ್ರಿವಾಲ್ ತಮ್ಮ ಪಕ್ಷದ ಅಸ್ತಿತ್ವವನ್ನು ಬಲಪಡಿಸುವ ಮತ್ತು ಪ್ರದೇಶದ ಮತದಾರರೊಂದಿಗೆ ಸಂಪರ್ಕ ಸಾಧಿಸುವ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾಗ ವ್ಯಕ್ತಿ ಸ್ಪಿರಿಟ್ (spirit) ಎಸೆದಿದ್ದರಿಂದ ದೆಹಲಿಯ ಮಾಜಿ ಮುಖ್ಯಮಂತ್ರಿಯನ್ನು "ಸುಡುವ" ಪ್ರಯತ್ನವಾಗಿದೆ ಎಂದು ಪಕ್ಷ ಆರೋಪಿಸಿದೆ. ಕೇಜ್ರಿವಾಲ್ ಪ್ರದೇಶದಲ್ಲಿ ಹಾದು ಹೋಗುತ್ತಿದ್ದಾಗ ಆರೋಪಿ ದಾಳಿ ನಡೆಸಲು ಯತ್ನಿಸಿದ್ದಾನೆ. ಆದರೆ ಆರೋಪಿಯು ನೀರು (water) ಎಸೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಆದರೂ ಅದರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಭದ್ರತಾ ಸಿಬ್ಬಂದಿಯ ತ್ವರಿತ ಪ್ರತಿಕ್ರಿಯೆಯಿಂದ ಅವರ ಪ್ರಯತ್ನ ವಿಫಲವಾಗಿದೆ. ಭದ್ರತಾ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ಕೇಜ್ರಿವಾಲ್‌ಗೆ ದ್ರವ ತಲುಪದಂತೆ ನಿಲ್ಲಿಸಿ ಅವರನ್ನು ಕಾಪಾಡಿದ್ದಾರೆ. ತಕ್ಷಣ ವ್ಯಕ್ತಿಯನ್ನು ಸದೆಬಡಿದು ಹೆಚ್ಚಿನ ವಿಚಾರಣೆಗಾಗಿ ಪೊಲೀಸರಿಗೆ ಒಪ್ಪಿಸಿದ್ದಾರೆ. ದಾಳಿಯ ಹಿಂದಿನ ಉದ್ದೇಶದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯು ಸಾರ್ವಜನಿಕ ಪ್ರಚಾರದ ಸಮಯದಲ್ಲಿ ರಾಜಕೀಯ ನಾಯಕರ ಸುರಕ್ಷತೆಯ ಬಗ್ಗೆ ಕಳವಳವನ್ನು ಉಂಟುಮಾಡಿದೆ.
#WATCH | A person tried to throw a liquid on former Delhi CM and AAP National Convenor Arvind Kejriwal during his padyatra in Delhi's Greater Kailash area.
— ANI (@ANI) November 30, 2024
The person was later held by his security staff. pic.twitter.com/9c9MhzLEzj
ದ್ರವ ಎಸೆದವರು ಯಾರು?
ಶನಿವಾರ (ನವೆಂಬರ್ 30) ಸಂಜೆ 05:50ರ ಸುಮಾರಿಗೆ ಮಾಳವೀಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಪಾದಯಾತ್ರೆಯಲ್ಲಿ ಸಾರ್ವಜನಿಕರೊಂದಿಗೆ ಕೈಕುಲುಕುತ್ತಿದ್ದಾಗ, ಇದ್ದಕ್ಕಿದ್ದಂತೆ ಅಶೋಕ್ ಝಾ ಎಂಬ ವ್ಯಕ್ತಿ ಅರವಿಂದ್ ಕೇಜ್ರಿವಾಲ್ ಮೇಲೆ ದ್ರವ ಎಸೆಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಆ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿಗಿದೆ.
BJP ने अरविंद केजरीवाल के ऊपर हमला करवाकर उन्हें ज़िंदा जलाने का प्रयास किया‼️
— AAP (@AamAadmiParty) November 30, 2024
आज @ArvindKejriwal जी के ऊपर हमला करने वाला शख़्स अशोक कुमार BJP का औपचारिक सदस्य है।
दिल्ली में हारता हुआ देख आज बीजेपी के नेताओं ने केजरीवाल जी के ऊपर स्प्रिट फिंकवाकर उन्हें ज़िंदा जलाने की कोशिश… pic.twitter.com/2FB2pk6SET
ಅಲ್ಲಿದ್ದವರು ಪೊಲೀಸ್ ಸಿಬ್ಬಂದಿಯಾಗಿರುವುದರಿಂದ ಆ ವ್ಯಕ್ತಿ ತಕ್ಷಣವೇ ಸಿಕ್ಕಿಬಿದ್ದಿದ್ದಾನೆ. ಸದ್ಯ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯು ಖಾನ್‌ಪುರ ಡಿಪೋದಲ್ಲಿ ಬಸ್ ಮಾರ್ಷಲ್ ಆಗಿ ಕೆಲಸ ಮಾಡುತ್ತಿದ್ದಾನೆಂದು ತಿಳಿದು ಬಂದಿದೆ. ಈ ಕೃತ್ಯದ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ವ್ಯಕ್ತಿಯ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಕೇಜ್ರಿವಾಲ್ ಅವರನ್ನು ಜೀವಂತವಾಗಿ ಸುಡುವ ಸಂಚು
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದೆಹಲಿ ಸಚಿವ ಸೌರಭ್ ಭಾರದ್ವಾಜ್, ' ಗ್ರೇಟರ್ ಕೈಲಾಶ್‌ನ ಸಾವಿತ್ರಿ ನಗರದಲ್ಲಿ ಅರವಿಂದ್ ಕೇಜ್ರಿವಾಲ್ ಪಾದಯಾತ್ರೆಯಲ್ಲಿದ್ದರು. ಅವರನ್ನು ಭೇಟಿಯಾಗಲು ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಒಬ್ಬ ವ್ಯಕ್ತಿ ಏಕಾಏಕಿ ಅವರ ಮೇಲೆ ದಾಳಿ ಮಾಡಿದ. ಅವನು ಅವರ ಮೇಲೆ ದ್ರವವನ್ನು ಎಸೆದನು. ವ್ಯಕ್ತಿ ಅವರನ್ನು ಜೀವಂತವಾಗಿ ಸುಡಲು ಯತ್ನಿಸಿದ್ದಾನೆ. ಅವನ ಒಂದು ಕೈಯಲ್ಲಿ ಸ್ಪಿರಿಟ್ ಮತ್ತು ಇನ್ನೊಂದು ಕೈಯಲ್ಲಿ ಬೆಂಕಿಕಡ್ಡಿ ಇತ್ತು. ನಮ್ಮ ಸಿಬ್ಬಂದಿ ಮತ್ತು ಜನರು ಜಾಗರೂಕರಾಗಿ ಆತನ ಕೆಲಸ ಯಶಸ್ವಿಯಾಗಲು ಬಿಡಲಿಲ್ಲ' ಎಂದು ಹೇಳಿದ್ದಾರೆ.
ಕಳೆದ 35 ದಿನಗಳಲ್ಲಿ ಮೂರನೇ ದಾಳಿ
ಬಿಜೆಪಿ ಆಡಳಿತದಲ್ಲಿ ದೆಹಲಿ ಸಂಪೂರ್ಣ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಳೆದ 35 ದಿನಗಳಲ್ಲಿ ಅವರ ಮೇಲೆ ನಡೆದ ಮೂರನೇ ದಾಳಿ ಇದಾಗಿದೆ. ಈ ಹಿಂದೆ ವಿಕಾಸಪುರಿ ಮತ್ತು ನಂಗ್ಲೋಯ್‌ನಲ್ಲಿ ಅವರ ಮೇಲೆ ದಾಳಿ ನಡೆಸಲಾಗಿತ್ತು ಎಂದು ಎಎಪಿ ಹೇಳಿಕೆಯಲ್ಲಿ ತಿಳಿಸಿದೆ.
'ಕೇಜ್ರಿವಾಲ್ ಮೇಲೆ ಜನರಿಗೆ ಅಸಮಧಾನ'
ಇನ್ನೂ ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಉದಿತ್ ರಾಜ್, 'ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ ಎಂದು ನಾನು ನಂಬುತ್ತೇನೆ. ಈ ದೇಶದಲ್ಲಿ ಇಬ್ಬರು ಸುಳ್ಳು ಹೇಳುವವರಿದ್ದಾರೆ, ಒಬ್ಬರು ಪ್ರಧಾನಿ ಮೋದಿ ಮತ್ತು ಇನ್ನೊಬ್ಬರು ಅರವಿಂದ್ ಕೇಜ್ರಿವಾಲ್. ಅವರು ಸುಳ್ಳು ಭರವಸೆಗಳನ್ನು ನೀಡಿದರು ಆದರೆ ಜನರಿಗಾಗಿ ಕೆಲಸ ಮಾಡಲಿಲ್ಲ' ಎಂದು ಹೇಳಿದ್ದಾರೆ.
ಮಹಿಳೆಯರಿಗೆ ಮಾಸಿಕ 1,000 ರೂಪಾಯಿ ಗೌರವಧನ
ಇನ್ನೂ ದೆಹಲಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಅನೇಕ ಭರವಸೆಗಳೊಂದಿಗೆ ಸಿದ್ದತೆಗಳು ಜೋರಾಗಿವೆ. ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಶುಕ್ರವಾರ, ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರಿಗೆ ಮಾಸಿಕ 1,000 ರೂಪಾಯಿ ಗೌರವಧನ ನೀಡಲು ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆಯಡಿ ನೋಂದಣಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.
ಮುಂಬರುವ ಚುನಾವಣೆಗಳಿಗೆ ಮುಂಚಿತವಾಗಿ ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಲು ಕೇಜ್ರಿವಾಲ್ ಅವರ ನಿರಂತರ ಪ್ರಯತ್ನಗಳ ನಡುವೆ ಈ ದಾಳಿಯ ಯತ್ನ ನಡೆದಿದೆ. ಮತದಾರರೊಂದಿಗೆ ಸಂವಹನ ನಡೆಸುವಾಗ ಭದ್ರತೆಯನ್ನು ಕಾಪಾಡಿಕೊಳ್ಳುವಲ್ಲಿ ರಾಜಕೀಯ ನಾಯಕರು ಎದುರಿಸುತ್ತಿರುವ ಸವಾಲುಗಳನ್ನು ಈ ಘಟನೆ ಎತ್ತಿ ತೋರಿಸುತ್ತದೆ.












Click it and Unblock the Notifications