'ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ' ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ
ಕೋಲ್ಕಾತ್ತಾ ಜನವರಿ 16: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಮುರ್ಷಿದಾಬಾದ್ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಕೇಂದ್ರೀಯ ಸಂಸ್ಥೆಗಳು ಮತ್ತು ಪ್ರಮುಖ ಯೋಜನೆಗಳಿಗೆ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಳ್ಳುವುದು ಸೇರಿದಂತೆ ಹಲವು ವಿಷಯಗಳ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಂಗಾಳ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಅವರ ತವರು ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಸಿಪಿಐ(ಎಂ) ಮತ್ತು ಕಾಂಗ್ರೆಸ್ ಅನ್ನು ಸಹ ಬಿಡಲಿಲ್ಲ.
ಪ್ರತಿಪಕ್ಷಗಳ ವಿರುದ್ಧ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಕಿಡಿ ಕಾರಿದರು. ಈ ವೇಳೆ ಕೆಲವು ದಿನಗಳ ಹಿಂದೆ ಆದಾಯ ತೆರಿಗೆ ದಾಳಿಯನ್ನು ಎದುರಿಸಿದ ತಮ್ಮ ಪಕ್ಷದ ಸಚಿವರನ್ನು ಸಮರ್ಥಿಸಿಕೊಂಡರು. "ನಮ್ಮ ಜಂಗೀಪುರ ಶಾಸಕ ಜಾಕೀರ್ ಹುಸೇನ್ ಒಬ್ಬ ಉದ್ಯಮಿ, ಯಾರಾದರೂ ಏನಾದರೂ ತಪ್ಪು ಮಾಡಿದ್ದರೆ, ಆಗ ಅವರಿಗೆ ತಕ್ಕ ಶಿಕ್ಷೆಯಾಗಲಿದೆ. ಆದರೆ ಅವರು ತೃಣಮೂಲ ನಾಯಕರಾಗಿರುವುದರಿಂದ ಅವರ ಮೇಲೆ ಹಲ್ಲೆ ನಡೆಸಲಾಗುತ್ತಿದೆ'' ಎಂದು ದೂರಿದರು.
ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ
"ಬೇರೆಯವರ ಮೇಲೆ ದಾಳಿ ಮಾಡಲು ಏಜೆನ್ಸಿಗಳನ್ನು ಕಳುಹಿಸುವ ಮೊದಲು, ಬಿಜೆಪಿಯವರು ತಮ್ಮತ್ತ ನೋಡಬೇಕು. ಚಾರಿಟಿ ಮನೆಯಿಂದಲೇ ಪ್ರಾರಂಭವಾಗಲಿ. ಮೊದಲು ಇಡಿ, ಸಿಬಿಐ ಮತ್ತು ಐಟಿ ಇಲಾಖೆಯಿಂದ ಬಿಜೆಪಿ ನಾಯಕರ ತನಿಖೆ ಮಾಡಲಿ" ಎಂದು ಅವರು ಹೇಳಿದರು.

''ಕಾಂಗ್ರೆಸ್, ಬಿಜೆಪಿ ಮತ್ತು ಸಿಪಿಐ(ಎಂ) ರಹಸ್ಯವಾಗಿ ಮೈತ್ರಿ ಮಾಡಿಕೊಳ್ಳುತ್ತಿವೆ. 'ರಾಮ್-ಬಾಮ್-ಶ್ಯಾಮ್' ಬಂಗಾಳವನ್ನು ಹಿಂಸಿಸಲು ಕೈಜೋಡಿಸಿದ್ದಾರೆ. ಅವರು ನನ್ನ ಮೇಲೆ ದಾಳಿ ಮಾಡಲು ಪ್ರಯತ್ನಿಸುವ ಮೂಲಕ ಅವರು ನಮ್ಮ ರಾಜ್ಯದ ಮಹಿಳೆಯರನ್ನು ಹಿಂಸಿಸುತ್ತಿದ್ದಾರೆ. ಅವರು ನಮ್ಮ ರೈತರು, ನಮ್ಮ ಕುಶಲಕರ್ಮಿಗಳು, ನಮ್ಮ ಕಾರ್ಮಿಕರು ಮತ್ತು ನಮ್ಮ ವಿದ್ಯಾರ್ಥಿಗಳನ್ನು ಹಿಂಸಿಸುತ್ತಿದ್ದಾರೆ. ಅವರಿಗೆ ಇಂತಹ ಕೆಲಸ ಮಾಡಲು ನಾಚಿಕೆ ಇಲ್ಲವೇ?"
'ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ' ದೀದಿ ಗರಂ
100 ದಿನಗಳ ಉದ್ಯೋಗ ಖಾತ್ರಿ ಯೋಜನೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಯಂತಹ ಪ್ರಮುಖ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣವನ್ನು ತಡೆಹಿಡಿಯುತ್ತಿದೆ ಎಂದು ಅವರು ಆರೋಪಿಸಿದರು. "ನಮಗೆ ವಿವಿಧ ಯೋಜನೆಗಳಿಗೆ ನೀಡಬೇಕಾಗಿರುವ ಹಣವನ್ನು ಬಿಜೆಪಿ ವೈಯಕ್ತಿಕ ನಿಧಿಯಿಂದ ನೀಡುತ್ತದೆ ಎಂದು ಯಾರಾದರೂ ಭಾವಿಸಿದರೆ ಅದು ತಪ್ಪು. ಕೇಂದ್ರ ಬಡವರ ಹಣವನ್ನು ಕಸಿದುಕೊಳ್ಳುತ್ತಿದೆ. ವಿನಾಕಾರಣ ಹಣವನ್ನು ತಡೆಹಿಡಿಯುವಂತ ಕೆಲಸಗಳನ್ನು ಕೇಂದ್ರ ಮಾಡುತ್ತಿದೆ ಎಂದರು. ನಾವು ಅಂತಹ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಯನ್ನು ಅನುಮತಿಸುವುದಿಲ್ಲ"ಎಂದು ಅವರು ಹೇಳಿದರು.
"ನಾನು ಇಲ್ಲಿ ಯಾವುದೇ ರಾಜಕೀಯ ಹೇಳಿಕೆ ನೀಡುತ್ತಿಲ್ಲ, ನಮ್ಮ ಕಾರ್ಯಕರ್ತರಿಗೆ 100 ದಿನಗಳ ಕೆಲಸದ ಯೋಜನೆಯಡಿ ನಾವು ನೀಡಬೇಕಾದ ಮೊತ್ತವನ್ನು ಮಾತ್ರ ನಾನು ಕೇಳುತ್ತಿದ್ದೇನೆ, ಅವರು ತಮ್ಮ ಹಕ್ಕುಗಳನ್ನು ಯಾವಾಗ ಪಡೆಯುತ್ತಾರೆ? ಈ ಪ್ರಶ್ನೆಗೆ ಬಿಜೆಪಿ ಮತ್ತು ಸಿಪಿಐ (ಎಂ) ಎರಡೂ ಉತ್ತರಿಸಬೇಕಾಗುತ್ತದೆ" ಅವರು ಕಿಡಿ ಕಾರಿದರು.

ಬಿಜೆಪಿಯನ್ನು ತರಾಟೆ ತೆಗೆದುಕೊಂಡ ದೀದಿ
ಬಿಜೆಪಿಯನ್ನು ಇನ್ನಷ್ಟು ತರಾಟೆ ತೆಗೆದುಕೊಂಡ ಮಮತಾ ಬ್ಯಾನರ್ಜಿ, "ಬಿಜೆಪಿ ತನ್ನ ಶಕ್ತಿಯನ್ನು ತೋರಿಸಲು ಪ್ರಯತ್ನಿಸುತ್ತಿದೆ. ಈ ಶಕ್ತಿ ಶಾಶ್ವತವಾಗಿ ಉಳಿಯುವುದಿಲ್ಲ ಎಂದು ನಾನು ಹೇಳುತ್ತೇನೆ. ನೀವು ಅಧಿಕಾರ ಕಳೆದುಕೊಂಡ ನಂತರ ನೀವು 'ಬಿಗ್ ಜೀರೋ' ಆಗುತ್ತೀರಿ" ಎಂದು ಹೇಳಿದರು.
ವಿಶೇಷವಾಗಿ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ತಮ್ಮ ಬಳಕೆಗಾಗಿ ರಾಜಕೀಯ ಚರ್ಚೆಯನ್ನು ಪ್ರವೇಶಿಸಿರುವ 'ಬುಲ್ಡೋಜರ್'ಗಳ ಕುರಿತು ಅವರು ಪಕ್ಷವನ್ನು ಗುರಿಯಾಗಿಸಿದರು. "ನಾನು ಬುಲ್ಡೋಜರ್‌ಗಳ ಪರವಾಗಿಲ್ಲ ಈ ಬುಲ್ಡೋಜರ್ ತುಂಬಾ ದಿನ ಉಳಿಯುವುದಿಲ್ಲ'' ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ ಎಂದರು.












Click it and Unblock the Notifications