ಭಾರತದ ವಿರುದ್ಧ ಮತ್ತೆ ವಿಷ ಕಾರಿದ ಮಾಲ್ಡೀವ್ಸ್ ಅಧ್ಯಕ್ಷ?
ಭಾರತ ಹಾಗೂ ಮಾಲ್ಡೀವ್ಸ್ ಸಂಬಂಧ ಸರಿ ಹೋಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಈ ಸಮಯದಲ್ಲಿ ಮಾಲ್ಡೀವ್ಸ್ ಅಧ್ಯಕ್ಷ, ಪದೇ ಪದೇ ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿದು ಜ್ವಾಲೆ ದೊಡ್ಡದು ಮಾಡುತ್ತಿದ್ದಾರೆ. ಈಗ ಮತ್ತೊಮ್ಮೆ ಇಂತಹದ್ದೇ ಹೇಳಿಕೆಯ ನೀಡಿದ್ದಾರೆ ಮಾಲ್ಡೀವ್ಸ್ ಹಾಲಿ ಅಧ್ಯಕ್ಷ ಮೊಹಮ್ಮದ್ ಮೊಯಿಝ.
ಭಾರತ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಂಡ ಮಾಲ್ಡೀವ್ಸ್ ಎಂಬ ಬುದ್ಧಿಯೇ ಇಲ್ಲದೆ ದೇಶಕ್ಕೆ ಸಾಲು ಸಾಲು ಸಂಕಷ್ಟ ಎದುರಾಗುತ್ತಿವೆ. ಇಷ್ಟಾದರೂ, ಅಲ್ಲಿನ ಹೊಸ ಅಧ್ಯಕ್ಷನಿಗೆ ತಲೆಯಲ್ಲಿ ಮಣ್ಣು ತುಂಬಿದೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ತಿಕ್ಕಾಟ ಹಿಂಗೆ ಮುಂದುವರಿದರೆ, ಪರಿಸ್ಥಿತಿ ಕೈಮೀರಿ & ಎರಡೂ ದೇಶಗಳ ನಡುವಿನ ಸ್ನೇಹ ಸಂಬಂಧ ಮತ್ತಷ್ಟು ಹಾಳಾಗುವ ಆತಂಕ ಕೂಡ ಇದೆ. ಹೀಗಿದ್ದಾಗಲೇ ಮತ್ತೊಂದು ಹೇಳಿಕೆ ನೀಡಿರುವ ಮಾಲ್ಡೀವ್ಸ್ ಹಾಲಿ ಅಧ್ಯಕ್ಷ ಮೊಹಮ್ಮದ್ ಮೊಯಿಝ, ಭಾರತ & ಮಾಲ್ಡೀವ್ಸ್ ಸಂಬಂಧಕ್ಕೆ ಮತ್ತೊಮ್ಮೆ ಹುಳಿ ಹಿಂಡಿದ್ದಾರೆ.

ಮಾಲ್ಡೀವ್ಸ್ ಅಧ್ಯಕ್ಷನ ಹೊಸ ಕಿರಿಕ್!
ಮೊಹಮ್ಮದ್ ಮೊಯಿಝ ಈಗ ಮಾಡಿದ ಆರೋಪದ ಪ್ರಕಾರ ಮಾಲ್ದೀವ್ಸ್‌ನ ಮಾಜಿ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ವಿದೇಶಿ ರಾಯಭಾರಿ ಆದೇಶದ ಪ್ರಕಾರ ಕೆಲಸ ಮಾಡ್ತಿದ್ದರು ಅಂತಾ ಹೊಸ ಆರೋಪದ ಬಾಂಬ್ ಸಿಡಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಭಾರತದ ಹೆಸರನ್ನು ಪ್ರಸ್ತಾಪ ಮಾಡದೆ ಈ ಆರೋಪ ಮಾಡಿದ್ದಾರೆ ಎಂಬ ಆಕ್ರೋಶವೂ ಮೊಳಗಿದೆ. ಹಾಗಾದರೆ ಮೊಹಮ್ಮದ್ ಮೊಯಿಝ ಅಸಲಿಗೆ ಈ ರೀತಿ ಆರೋಪ ಮಾಡಿದ್ದು ಯಾಕೆ?
ಡ್ರೋನ್ ಖರೀದಿ ವಿಚಾರದಲ್ಲಿ ಕಿರಿಕ್!
ಅಂದಹಾಗೆ, ಮಿಲಿಟರಿ ಡ್ರೋನ್‌ಗಳ ಖರೀದಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಟೀಕೆ ಬಗ್ಗೆ ಈಗ ಉತ್ತರ ನೀಡಿರುವ ಮೊಹಮ್ಮದ್ ಮೊಯಿಝ, ವಿಪಕ್ಷ ಎಂಡಿಪಿ 2018ರಿಂದ 2023ರ ಅವಧಿಯ ನಡುವೆ ಅಧಿಕಾರದಲ್ಲಿ ಇದ್ದಾಗ ಸಂಸತ್ತಿನಲ್ಲಿ ಬಹುಮತ ಹೊಂದಿತ್ತು. ಆದರೂ ಮಾಲ್ದೀವ್ಸ್‌ನ ಸ್ವಾತಂತ್ರ್ಯ ರಕ್ಷಿಸಲು ವಿಫಲವಾಗಿದೆ. ಅದನ್ನು ವಿದೇಶದ ಕೈಯಲ್ಲಿ ಬಿಟ್ಟಿತ್ತಲ್ಲದೆ, ಇಬ್ರಾಹಿಂ ಮೊಹಮ್ಮದ್ ಸೊಲಿಹ್ ವಿದೇಶಿ ರಾಯಭಾರಿ ಆದೇಶದಂತೆ ಕಾರ್ಯ ನಿರ್ವಹಿಸಿದ್ದಾರೆ. ಎಂದು ಈಗ ಆರೋಪ ಮಾಡಿದ್ದಾರೆ ಮೊಹಮ್ಮದ್ ಮೊಯಿಝ.
ಒಟ್ನಲ್ಲಿ ಹೀಗೆ ಮಾಲ್ಡೀವ್ಸ್ ಅಧ್ಯಕ್ಷರು ಬಾಯಿಗೆ ಬಂದಂತೆ ಹೇಳಿಕೆ ಕೊಡುತ್ತಿರುವ ಕಾರಣ, ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗುತ್ತಿದೆ. ಅಲ್ಲದೆ ಹೀಗೆ ಸ್ವತಃ ಮಾಲ್ಡೀವ್ಸ್ ಜನರಿಗೂ ತಮ್ಮ ಸರ್ಕಾರದ ವರ್ತನೆ ಬಗ್ಗೆ ಸಾಕಷ್ಟು ಸಿಟ್ಟು ಬಂದಿದೆ. ಇಷ್ಟೆಲ್ಲಾ ನಡೆದರೂ ಮಾಲ್ಡೀವ್ಸ್ ಅಧ್ಯಕ್ಷ ಮಾತ್ರ ತನ್ನ ಚೀನಾ ಪರ ನಿಲುವನ್ನ ಮುಂದುವರಿಸಿ ಭಾರತದ ಜೊತೆ ಸಂಬಂಧವನ್ನ ಮತ್ತಷ್ಟು ಹಾಳು ಮಾಡಿಕೊಳ್ಳುತ್ತಿದ್ದಾನೆ ಎಂಬ ಆರೋಪ ಪದೇ ಪದೇ ಕೇಳಿಬರುತ್ತಿದೆ. ಹೀಗಾಗಿ ಇದೇ ವಿಚಾರ ಎಲ್ಲಿ ದೊಡ್ಡ ಮಟ್ಟದ ತಿಕ್ಕಾಟಕ್ಕೆ ಕಾರಣವಾಗುತ್ತೋ? ಎಂಬ ಅನುಮಾನ ಕೂಡ ದಟ್ಟವಾಗಿದೆ.












Click it and Unblock the Notifications