ಖ್ಯಾತ ಮಲಯಾಳಂ ನಟಿಯ ಅಪಹರಣ, ಲೈಂಗಿಕ ಕಿರುಕುಳ?

ಖ್ಯಾತ ನಟಿಯರ ಪರಿಸ್ಥಿತಿಯೇ ಈರೀತಿಯದಾದರೆ ಉಳಿದವರ ಪಾಡೇನು? ದುರುಳರು ನಟಿಯನ್ನು ಬ್ಲಾಕ್ ಮೇಲ್ ಮಾಡುವ ಉದ್ದೇಶದಿಂದ ವಿಡಿಯೋ ಕೂಡ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಎರ್ನಾಕುಲಂ, ಫೆಬ್ರವರಿ 18 : ಖ್ಯಾತ ಮಲಯಾಳಂ ನಟಿಯೊಬ್ಬರನ್ನ ಶುಕ್ರವಾರ ರಾತ್ರಿ ಅಪಹರಿಸಿ, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಭಾರತೀಯ ಚಿತ್ರರಂಗವನ್ನೇ ತಲ್ಲಣಿಸಿದೆ.

ಈ ಕುರಿತು ಬಹುಭಾಷಾ ನಟಿ ಅವರು ಕೇರಳದ ಕೊಚ್ಚಿನ್ ಪೊಲೀಸ್ ಸ್ಟೇಷನ್ ನಲ್ಲಿ ಮೂವರ ವಿರುದ್ಧ ದೂರು ನೀಡಿದ್ದು, ಅವರ ಕಾರಿನ ಚಾಲಕ ಮಾರ್ಟಿನ್ ನನ್ನು ಬಂಧಿಸಲಾಗಿದೆ. ಇನ್ನಿಬ್ಬರನ್ನು ಪೊಲೀಸರು ಹುಡುಕುತ್ತಿದ್ದಾರೆ.

ಎರ್ನಾಕುಲಂನಲ್ಲಿ ಶುಕ್ರವಾರ ಶೂಟಿಂಗ್ ಮುಗಿಸಿ ಕಾರಿನಲ್ಲಿ ವಾಪಸ್ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಹಿಂದೆ ನಟಿಯ ಕಾರಿನ ಚಾಲಕನಾಗಿದ್ದ ಸುನೀಲ್ ಕುಮಾರ್ ಎಂಬಾತನೇ ಈ ಕೃತ್ಯದ ಪ್ರಮುಖ ಆರೋಪಿ ಎಂದು ಹೇಳಲಾಗಿದೆ. ಆತ ತಲೆಮರೆಸಿಕೊಂಡಿದ್ದಾನೆ. [ನಿರ್ಭಯಾ ದೌರ್ಜನ್ಯಕ್ಕೆ 4 ವರ್ಷ, ಎಲ್ಲಿದೆಯೋ ನ್ಯಾಯ?]

Malayalam actress allegedly kidnapped, molested; one held

ಬಲ್ಲ ಮಾಹಿತಿಯ ಪ್ರಕಾರ, ಸುನೀಲನ ಪರಿಚಯದ ಕಾರಿನ ಚಾಲಕ ಮಾರ್ಟಿನ್ ಕಾರನ್ನು ಚಾಲನೆ ಮಾಡುತ್ತಿದ್ದ. ಆಗ, ಟೆಂಪೊ ಟ್ರಾವಲರ್ ನಲ್ಲಿ ಬರುತ್ತಿದ್ದ ಇನ್ನಿಬ್ಬರು ನಟಿ ಇದ್ದ ಕಾರನ್ನು ಗುದ್ದಿದ್ದಾರೆ. ಆಗ ಜಗಳ ತೆಗೆದು, ಚಾಲಕನ ಮೇಲೆ ಮಾಡಿದಂತೆ ಮಾಡಿ ಬಲವಂತವಾಗಿ ಕಾರನ್ನು ಹತ್ತಿದ್ದಾರೆ.

ಸುಮಾರು ಎರಡು ಗಂಟೆಗಳ ಕಾಲ ಕಾರನ್ನು ಚಲಾಯಿಸುತ್ತಲೇ ಆಕೆಯ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದಾರೆ. ನಟಿಯನ್ನು ಬ್ಲಾಕ್ ಮೇಲ್ ಮಾಡುವ ಉದ್ದೇಶದಿಂದಲೇ ಫೋಟೋ ಮತ್ತು ವಿಡಿಯೋ ಕೂಡ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Malayalam actress Bhavana allegedly kidnapped, molested; one held

ನಂತರ ರಾತ್ರಿ 10 ಗಂಟೆಯ ಸುಮಾರಿಗೆ ಆಕಯನ್ನು ಬಿಟ್ಟಿದ್ದಾರೆ. ಮತ್ತೊಂದು ಮಾಹಿತಿಯ ಪ್ರಕಾರ ನಟಿ ಅವರಿಂದ ತಪ್ಪಿಸಿಕೊಂಡು ತಮ್ಮ ಸಂಬಂಧಿಯ ಮನೆ ಸೇರಿದ್ದಾರೆ. ಶನಿವಾರ ಬೆಳಗಿನ ಜಾವ ಪೊಲೀಸರಿಗೆ ದೂರು ನೀಡಿದ್ದು, ತಮಗಾದ ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ. [ಚಲಿಸುತ್ತಿದ್ದ ವಾಹನದಲ್ಲಿ ನಡೆದ ಹತ್ತು ಅತ್ಯಾಚಾರಗಳು]

ಈ ಹೇಯ ಕೃತ್ಯಕ್ಕೆ ಭಾರೀ ಆಕ್ರೋಶ ಕೂಡ ಸಾಮಾಜಿಕ ತಾಣದಲ್ಲಿ ವ್ಯಕ್ತವಾಗುತ್ತಿದೆ. ಇದನ್ನು ಎಸಗಿದ ದುರುಳರನ್ನು ಕಠಿಣವಾಗಿ ಶಿಕ್ಷಸಬೇಕು ಎಂದು ಟ್ವಿಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇಂಥ ಖ್ಯಾತ ನಟಿಯರಿಗೇ ಈ ಪರಿಸ್ಥಿತಿ ಬಂದರೆ ಭಾರತದ ಸಾಮಾನ್ಯ ಮಹಿಳೆಯರ ಪಾಡೇನು ಎಂದು ಮತ್ತೊಬ್ಬರು ಸಿಟ್ಟನ್ನು ಹೊರಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+