ಗೋವಾದಲ್ಲಿ ನಿಗೂಢ ರೀತಿಯಲ್ಲಿ ನಟ ಸಾವು
ಪಣಜಿ, ಜನವರಿ 16: ಗೋವಾ ಪ್ರವಾಸಕ್ಕೆಂದು ತೆರಳಿದ್ದ ಮಲಯಾಳಂ ನಟ ಸಿಧು ಆರ್ ಪಿಳ್ಳೈ ಅವರು ನಿಗೂಢರೀತಿಯಲ್ಲಿ ಸಾವಿಗೀಡಾಗಿದ್ದಾರೆ.
ಜನವರಿ 12ರಂದು ಗೋವಾಕ್ಕೆ ತೆರಳಿದ್ದ ಸಿಧು ಅವರು ಸಮುದ್ರದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಸಾವಿನ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.

ತ್ರಿಶೂರ್ ಮೂಲದ ನಿರ್ಮಾಪಕ ಪಿಕೆಆರ್ ಪಿಳೈ ಅವರ ಮಗ ಸಿಧು ಅವರು ಸೆಕೆಂಡ್ ಶೋ, ಚಿತ್ರಮ್, ವದನಮ್ ಹಾಗೂ ಅಮೃತಮ್ ಗಮಯ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.

ಜನಪ್ರಿಯ ನಟ ದುಲ್ಕರ್ ಸಲ್ಮಾನ್ ಜತೆ ವೃತ್ತಿ ಬದುಕು ಆರಂಭಿಸಿದ ಸಿಧು ಅವರು ಸಹ ನಟನಾಗಿ ಸುಮಾರು 16ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.
Disturbed and sad about the passing of #SidhuRPillai ! Was an excited and vivacious youngster during #SecondShow. Prayers to his family 😞
— dulquer salmaan (@dulQuer) January 16, 2018
ಸಿಧು ಅವರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿ, ಸಲ್ಮಾನ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications