ಕೇರಳದ ದೋಣಿ ದುರಂತಕ್ಕೆ ಕಾರಣವೇನು..? ಲೋಪಗಳ ಸುತ್ತ ಒಂದು ನೋಟ
ತಿರುವನಂತಪುರಂ, ಮೇ. 08: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಹೌಸ್‌ಬೋಟ್ ಪಲ್ಟಿಯಾಗಿ ಮುಳುಗಿ ಏಳು ಮಕ್ಕಳು ಸೇರಿದಂತೆ 22 ಮಂದಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. ಪೊಲೀಸರ ಪ್ರಕಾರ, ಪ್ರವಾಸಿ ಬೋಟ್ ನಿರ್ವಹಣೆ ವೇಳೆ ಹಲವಾರು ನಿಯಮಗಳನ್ನು ಉಲ್ಲಂಘಿಸಲಾಗಿದೆ. ಇದರಿಂದಾಗಿಯೇ, ಹಲವಾರು ಜನರ ಸಾವಿಗೆ ಕಾರಣವಾಗಿದೆ.
ಪ್ರವಾಸಿಗರನ್ನು ಕರೆದುಕೊಂದು ಹೋಗುತ್ತಿದ್ದ ಡಬಲ್ ಡೆಕ್ಕರ್ ಬೋಟ್ ತುಂಬಿ ತುಳುಕುತ್ತಿತ್ತು. ಸುಮಾರು 40 ಜನರು ಸವಾರಿಗಾಗಿ ಟಿಕೆಟ್ ಖರೀದಿಸಿದ್ದರು ಆದರೆ ಇನ್ನೂ ಅನೇಕರು ಟಿಕೆಟ್ ಖರೀದಿಸದೆ ಬೋಟ್ ಹತ್ತಿದ್ದರು ಎನ್ನಲಾಗಿದೆ.

ವರದಿಗಳ ಪ್ರಕಾರ, ಪ್ರಯಾಣಿಕರಿಗೆ ಲೈಫ್‌ಜಾಕೆಟ್‌ಗಳನ್ನು ನೀಡಲಾಗಿಲ್ಲ. ಟೂರಿಸ್ಟ್ ಬೋಟ್‌ಗಳಿಗೆ ಕಡ್ಡಾಯವಾಗಿರುವ ಸುರಕ್ಷತಾ ಪ್ರಮಾಣಪತ್ರವನ್ನು ದೋಣಿಗೆ ನೀಡಲಾಗಿಲ್ಲ. ಹೆಚ್ಚುವರಿಯಾಗಿ, ಸೂರ್ಯಾಸ್ತದ ನಂತರ ದೋಣಿ ಸವಾರಿ ನಿಷೇಧದ ಹೊರತಾಗಿಯೂ ಭಾನುವಾರ ಸಂಜೆ ತಡವಾಗಿ ಪ್ರವಾಸಿಗರ ದೋಣಿಯನ್ನು ನೀರಿಗೆ ಬಿಡುಗಡೆ ಮಾಡಲಾಗಿದೆ.
ಇದೀಗ ನಾಪತ್ತೆಯಾಗಿರುವ ಬೋಟ್ ಮಾಲೀಕನ ವಿರುದ್ಧ ನರಹತ್ಯೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ನಾಪತ್ತೆಯಾಗಿರುವವರ ರಕ್ಷಣೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ದುರಂತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಗೌರವ ಸೂಚಕವಾಗಿ ಶೋಕಾಚರಣೆಯ ದಿನವನ್ನು ಘೋಷಿಸಿದ್ದಾರೆ.

"ಕೇರಳದ ಮಲಪ್ಪುರಂನಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಪ್ರಾಣಹಾನಿ ಉಂಟಾಗಿರುವುದು ತೀವ್ರ ನೋವಿನ ಸಂಗತಿ. ದುಃಖತಪ್ತ ಕುಟುಂಬಗಳಿಗೆ ಸಂತಾಪ. ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ಪರಿಹಾರವನ್ನು ನಿಧನರಾದವರ ಪ್ರತಿಯೊಬ್ಬರ ಸಂಬಂಧಿಕರಿಗೆ ನೀಡಲಾಗುವುದು"ಎಂದು ಪ್ರಧಾನ ಮಂತ್ರಿ ಕಚೇರಿ ಟ್ವೀಟ್ ಮಾಡಿದೆ.
ಕಾಂಗ್ರೆಸ್ ನಾಯಕ ಮತ್ತು ಮಾಜಿ ವಯನಾಡ್ ಸಂಸದ ರಾಹುಲ್ ಗಾಂಧಿ ಕೂಡ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ಮಲಪ್ಪುರಂ ದೋಣಿ ಅಪಘಾತದಲ್ಲಿ ಸಾವಿನ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ದೋಣಿಯಲ್ಲಿ ಪ್ರಯಾಣಿಸುತ್ತಿದ್ದವರ ನಿಖರ ಸಂಖ್ಯೆಯನ್ನು ಖಚಿತಪಡಿಸಲು ಇನ್ನೂ ಸಾಧ್ಯವಾಗಿಲ್ಲ. ಬೆಳಗ್ಗೆ 9.30ರ ಸುಮಾರಿಗೆ ಸಿಎಂ ಪಿಣರಾಯಿ ವಿಜಯನ್ ಘಟನಾ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಚಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಎನ್‌ಡಿಆರ್‌ಎಫ್, ಅಗ್ನಿಶಾಮಕ ಮತ್ತು ಸ್ಕೂಬಾ ಡೈವಿಂಗ್ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ. ನೌಕಾಪಡೆಯ ತಂಡವೂ ಮುಂದೆ ಬಂದಿದೆ. ಎನ್‌ಡಿಆರ್‌ಎಫ್‌ನ ಎರಡನೇ ತಂಡವೂ ಇಲ್ಲಿಗೆ ತಲುಪಲಿದೆ ಎಂದು ಕೇರಳ ಕಂದಾಯ ಸಚಿವ ಕೆ ರಾಜನ್ ಮಾಹಿತಿ ನೀಡಿದ್ದಾರೆ.












Click it and Unblock the Notifications