ಕೇಂದ್ರ ಬಿಜೆಪಿಯಲ್ಲಿ ಮೇಜರ್ ಸರ್ಜರಿ: ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿಟಿ ರವಿಗೆ ಗೇಟ್ ಪಾಸ್
ನವದೆಹಲಿ, ಜುಲೈ 29: ಬಿಜೆಪಿ ರಾಷ್ಟ್ರ ಮಟ್ಟದ ಪದಾಧಿಕಾರಿಗಳ ನೇಮಕಾತಿಯಲ್ಲಿ ಭಾರೀ ಸರ್ಜರಿ ಮಾಡಲಾಗಿದ್ದು, ಕರ್ನಾಟಕದ ಸಿಟಿ ರವಿ ಸೇರಿದಂತೆ ಹಲವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಡಲಾಗಿದೆ.
ಈ ಮೊದಲು ಇದ್ದ ಸಿಟಿ ರವಿ, ದಿಲೀಪ್ ಘೋಷ್, ದಿಲೀಪ್ ಸೈಕಿಯಾ ಮತ್ತು ಸುನೀಲ್ ದಿಯೋಧರ್ ಅವರಂತಹ ಪ್ರಮುಖ ಹೆಸರುಗಳನ್ನು ಕೈಬಿಟ್ಟು ಬಂಡಿ ಸಂಜಯ್, ಅನಿಲ್ ಆಂಟೋನಿ ಮತ್ತು ಕಾಮಾಖ್ಯ ಪಿ ತಾಸಾ ಅವರಂತಹ ಹೊಸ ಮುಖಗಳನ್ನು ಕರೆತರಲು ಬಿಜೆಪಿ ಶನಿವಾರ ತನ್ನ ರಾಷ್ಟ್ರೀಯ ಪದಾಧಿಕಾರಿಗಳ ತಂಡವನ್ನು ಮರುಜೋಡಿಸಿದೆ.

ತೆಲಂಗಾಣದಲ್ಲಿ ಇತ್ತೀಚೆಗಷ್ಟೇ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಂಡಿದ್ದ ಬಂಡಿ ಸಂಜಯ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ, ರಾಮಮೋಹನ್ ಅಗರವಾಲ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಪ್ರಧಾನ ಕಾರ್ಯದರ್ಶಿಗಳ ಪಟ್ಟಿಯಿಂದ ಕೈಬಿಡಲ್ಪಟ್ಟವರಲ್ಲಿ ಸಿ ಟಿ ರವಿ ಸೇರಿದ್ದಾರೆ.
Bharatiya Janata Party releases list of its central office bearers - Bandi Sanjay Kumar, Radhamohan Agrawal inducted as general secretaries pic.twitter.com/vFfZscJI0B
— ANI (@ANI) July 29, 2023
ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ಈ ವರ್ಷಾಂತ್ಯದಲ್ಲಿ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಈ ಮೇಜರ್ ಸರ್ಜರಿಯಲ್ಲಿ ಮಾಡಲಾಗಿದೆ. ಇದಕ್ಕಾಗಿ ತಿಂಗಳುಗಳ ಹಿಂದೆಯೇ ಚರ್ಚೆ ನಡೆಸಲಾಗಿದೆ. ಈ ಯಾವುದೇ ಬದಲಾವಣೆಗಳನ್ನು ಸಂಸತ್ತಿನ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿಯಲ್ಲಿ ಸದ್ಯಕ್ಕೆ ತಿಳಿಸಲಾಗಿಲ್ಲ.
ದಿಲೀಪ್ ಘೋಷ್ ಮತ್ತು ಭಾರತಿಬೆನ್ ಸಿಯಾಲ್ ಈಗ ಉಪಾಧ್ಯಕ್ಷರಾಗಿ ಉಳಿದಿಲ್ಲ. ಬದಲಾಗಿ, ಲಕ್ಷ್ಮೀಕಾಂತ್ ವಾಜಪೇಯಿ, ಲತಾ ಉಸೇಂಡಿ ಮತ್ತು ತಾರೀಕ್ ಮನ್ಸೂರ್ ಸೇರಿದಂತೆ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.
ಕಾಮಾಖ್ಯ ಪಿ ತಾಸಾ, ಸುರೇಂದ್ರ ಸಿಂಗ್ ನಗರ ಮತ್ತು ಅನಿಲ್ ಆಂಟೋನಿ ಅವರು ಪಕ್ಷದ ಹೊಸ ಕಾರ್ಯದರ್ಶಿಗಳಾಗಿ ನೇಮಕವಾಗಿದ್ದಾರೆ. ಪಕ್ಷದ ಕಾರ್ಯದರ್ಶಿಗಳ ಪಟ್ಟಿಯಲ್ಲಿ ವಿನಯ್ ಸೋಂಕರ್, ಸುನೀಲ್ ದಿಯೋಧರ್, ಹರೀಶ್ ದ್ವಿವೇದಿ ಸೇರಿದ್ದಾರೆ. ಆಂಟೋನಿ, ಅವರ ತಂದೆ ಎಕೆ ಆಂಟನಿ ಸೋನಿಯಾ ಗಾಂಧಿಯವರ ಆಪ್ತರಾಗಿದ್ದರು, ಈ ವರ್ಷದ ಆರಂಭದಲ್ಲಿ ಬಿಜೆಪಿ ಸೇರಿದ್ದರು. ತಾಸಾ ಅಪ್ಪರ್ ಅಸ್ಸಾಂನ ಚಹಾ ತೋಟಗಳ ನಾಯಕರಾಗಿದ್ದರು.
ಕೈಬಿಟ್ಟವರು
ಸಿಟಿ ರವಿ
ರಾಧಾ ಮೋಹನ್ ಸಿಂಗ್
ದಿಲೀಪ್ ಘೋಷ್
ದಿಲೀಪ್ ಸೈಕಿಯಾ
ಸುನಿಲ್ ದೇವಧರ್
ಹರೀಶ್ ದ್ವಿವೇದಿ
ವಿನೋದ್ ಸೋಂಕರ್
ಭಾರತಿ ಸಿಯಾಲ್
ಸೇರ್ಪಡೆಗೊಂಡವರು
ಬಂಡಿ ಸಂಜಯ್ (ಜಿಎಸ್)
ರಾಧಾ ಮೋಹನ್ ಅಗರ್ವಾಲ್ (ಜಿಎಸ್)
ಅನಿಲ್ ಆಂಟೋನಿ (ಎನ್ಎಸ್)
ಸರೋಜ್ ಪಾಂಡೆ (ವಿಪಿ)
ಸುರೇಂದ್ರ ನಗರ (ಎನ್‌ಎಸ್)
ಕಾಮಾಖ್ಯ ತಾಸ (ಎನ್‌ಎಸ್)
ಲಕ್ಷ್ಮೀಕಾಂತ್ ಬಾಜಪೇಯಿ (ವಿಪಿ)












Click it and Unblock the Notifications