ಪ್ರಮುಖ ಬೆಳವಣಿಗೆ, ಬುಖಾರಿ ಹಂತಕರ ಗುರುತು ಪತ್ತೆ

ಕಾಶ್ಮೀರ, ಜೂನ್ 27: ಪ್ರಮುಖ ಬೆಳವಣಿಗೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಖ್ಯಾತ ಪತ್ರಕರ್ತ ಶೂಜತ್ ಬುಖಾರಿ ಹಂತಕರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಜೂನ್ 14ರಂದು ಬುಖಾರಿ ಮೇಲೆ ಗುಂಡಿನ ದಾಳಿ ನಡೆಸಿದ ಹಂತಕರಲ್ಲಿ ಒಬ್ಬ ದಕ್ಷಿಣ ಕಾಶ್ಮೀರದವನು ಮತ್ತು ಇನ್ನೋರ್ವ ಪಾಕಿಸ್ತಾನಿ ಪ್ರಜೆ ಎಂದು ತಿಳಿದು ಬಂದಿದೆ.

"ನಾವು ದಾಳಿ ನಡೆಸಿದವರನ್ನು ಗುರುತಿಸಿದ್ದೇವೆ," ಎಂಬುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಆಂಗ್ಲ ಮಾಧ್ಯವೊಂದಕ್ಕೆ ತಿಳಿಸಿದ್ದಾರೆ.

ಈ ದಾಳಿಯಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನಿ ಪ್ರಜೆ ನವೀದ್ ಜಾಟ್ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರ ಕೈಯಲ್ಲಿ ಬಂಧಿತನಾಗಿದ್ದ ಈತ ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಯಿಂದ ಫೆಬ್ರವರಿಯಲ್ಲಿ ತಪ್ಪಿಸಿಕೊಂಡಿದ್ದ. ಈತ ಪಾಕಿಸ್ತಾನಿಯಾಗಿದ್ದು ಲಷ್ಕರ್ ಇ ತಯ್ಯಬಾ ಜೊತೆ ನಂಟು ಹೊಂದಿದ್ದಾನೆ.

Major breakthrough, J&K Police identify killers of Shujaat Bukhari

ಇದೇ ವೇಳೆ ಪಾಕಿಸ್ತಾನಿ ಮೂಲದ ಬ್ಲಾಗರ್ ಒಬ್ಬನನ್ನೂ ಗುರುತಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಈತ ಶ್ರೀನಗರ ಮೂಲದ ಬಂಡುಕೋರನಾಗಿದ್ದು, ಪಾಕಿಸ್ತಾನದಲ್ಲಿ ನೆಲೆ ನಿಂತಿದ್ದಾನೆ. ಅಲ್ಲಿಂದಲೇ ಈತ ಬುಖಾರಿ ವಿರುದ್ಧ ಧ್ವೇಷ ಕಾರುವ ಅಭಿಯಾನವನ್ನು ನಡೆಸಿದ್ದ ಎಂದು ಮೂಲಗಳು ಹೇಳಿವೆ.

ಜೂನ್ 14ರಂದು ರೈಸಿಂಗ್ ಕಾಶ್ಮೀರ ಪತ್ರಿಕೆ ಪ್ರಧಾನ ಸಂಪಾದಕ ಬುಖಾರಿ ಹತ್ಯೆಯಾಗಿದ್ದರು. ಅವರ ಇಬ್ಬರು ಅಂಗ ರಕ್ಷಕರನ್ನೂ ದಾಳಿಯಲ್ಲಿ ಕೊಲೆ ಮಾಡಲಾಗಿತ್ತು. ಅವರನ್ನು ಶ್ರೀನಗರದಲ್ಲಿರುವ ಪತ್ರಿಕೆ ಕಚೇರಿ ಮುಂದೆ ಬೈಕ್ ನಲ್ಲಿ ಬಂದ ಮೂವರು ಗುಂಡು ಹಾರಿಸಿ ಹತ್ಯೆ ಮಾಡಿದ್ದರು.

ತನಿಖೆಯಲ್ಲಿ ಪ್ರಮುಖ ಸುಳಿವುಗಳು ಸಿಕ್ಕಿದ್ದು ಇಂದು ಸಂಜೆ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಹೆಚ್ಚಿನ ವಿವರಗಳನ್ನು ಪೊಲೀಸರು ನೀಡುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+