Mahindra Thar: ರೈಲ್ವೇ ಟ್ರ್ಯಾಕ್ ಮೇಲೆ ಥಾರ್ ಕಾರು ಓಡಿಸಿದ ವ್ಯಕ್ತಿ: ವಿಡಿಯೋ ಭಾರೀ ವೈರಲ್
Mahindra Thar: ಕೆಲವೊಂದು ವೈರಲ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿದ ಉದಾಹರಣೆಗಳಿವೆ. ಇದೀಗ ವ್ಯಕ್ತಿಯೊಬ್ಬ ಥಾರ್ ಕಾರನ್ನು ರೈಲು ನಿಲ್ದಾಣದಲ್ಲೇ ರೈಲ್ವೆ ಟ್ರ್ಯಾಕ್ ಮೇಲೆ ಚಲಾಯಿಸಿ ಪಜೀತಿಗೆ ಸಿಲುಕಿರುವ ಘಟನೆ ನಡೆದಿದೆ. ಇನ್ನೂ ಈ ವಿಡಿಯೋ ಅಂತೂ ಭಾರೀ ವೈರಲ್ ಆಗುತ್ತಿದೆ.
ರೈಲು ನಿಲ್ದಾಣದ ರೈಲು ಹಳಿಯ ಮೇಲೆಯೇ ವ್ಯಕ್ತಿಯೊಬ್ಬ ತನ್ನ ಮಹೀಂದ್ರಾ ಥಾರ್ ಕಾರನ್ನು ಚಲಾಯಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ಈಶಾನ್ಯ ರಾಜ್ಯ ನಾಗಲ್ಯಾಂಡ್‌ನಲ ಧಿಮಾಪುರ ರೈಲು ನಿಲ್ದಾಣದಲ್ಲಿ ನಡೆದಿದೆ. ಇನ್ನೂ ಈತನನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ರೈಲ್ವೆ ಟ್ರ್ಯಾಕ್‌ಗೆ ಇಳಿದಿದ್ದ ಕಾರು ಸಹಿತ ಚಾಲಕನನ್ನು ಸುರಕ್ಷಿತವಾಗಿ ಪೊಲೀಸರು ಹೊರಗಡೆ ಕರೆತಂದಿದ್ದಾರೆ. ಇದೀಗ ಕಾರು ಹಳಿಗೆ ಬಂದಿದ್ದು ಹೇಗೆ ಎಂಬುದರ ಪೊಲೀಸರು ವಿಚಾರಣೆ ನಡೆಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಕಾರು ಚಾಲಕ ಪಾನಮತ್ತನಾಗಿದ್ದ ಎಂದು ತಿಳಿದುಬಂದಿದೆ.
ಇನ್ನೂ ಈ ವಿಡಿಯೋ ನೋಡಿದ ನೆಟ್ಟಿಗರು ಆ ಕಾರು ಚಾಲಕನ ವಿರುದ್ಧ ಕೆಂಡಕಾರಿದ್ದಾರೆ. "ಇಂತಹವರಿಗೆಲ್ಲಾ ಪರವಾನಗಿ ಕೊಟ್ಟವರು ಯಾರು?," ಎಂದು ಪ್ರಶ್ನೆ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಇಂತಹ ಘಟನೆಗಳು ನಡೆದಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಸಹ ನಡೆದಿರುವ ಉದಾಹರಣೆಗಳಿವೆ.
#WATCH : Mahindra Thar drove straight onto the railway tracks at Dimapur Railway Station, Nagaland late night Dec 16.#DimapurRailwayStation #Dimapur #Nagaland #Thar pic.twitter.com/550Zww6kaO
— upuknews (@upuknews1) December 18, 2025
ಶೋ ರೂಂ ಮೊದಲ ಮಹಡಿಯಿಂದ ಕಾರು ಹಾರಿಸಿದ ಮಹಿಳೆ: ಹೊಸ ಕಾರು ಖರೀದಿ ಮಾಡಬೇಕೆನ್ನುವ ಆಸೆ ಬಹುತೇಕ ಮಂದಿಯಲ್ಲಿರುತ್ತದೆ. ಈ ಆಸೆ ನೆರವೇರಿದರೆ, ಅವರಿಗೆ ಆಗುವ ಖುಷಿನೇ ಬೇರೆ. ಹೀಗೆ ಮಹಿಳೆಯೊಬ್ಬರು ಐಷಾರಾಮಿ ಮಹೀಂದ್ರಾ ಥಾರ್ ರಾಕ್ಸ್ ಕಾರು ಖರೀದಿ ಮಾಡಲು ಶೋ ರೂಂಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಆದರೆ, ಇದೇ ವೇಳೆ ಆ ಮಹಿಳೆಯು ಕಾರನ್ನು ಶೋರೂಂ ಮೊದಲ ಮಹಡಿಯಿಂದಲೇ ಹಾರಿಸಿದ್ದು, ಕಾರು ಕೆಳಗೆ ಬಿದ್ದು ನುಜ್ಜುಗುಜ್ಜಾಗಿತ್ತು. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.
ಪ್ರತಿಷ್ಠಿತ ಮಹೀಂದ್ರಾ ಕಂಪನಿಯ ಐಷಾರಾಮಿ ಥಾರ್ ರಾಕ್ಸ್ ಕಾರು ಖರೀದಿ ಮಾಡಿದ ತಕ್ಷಣವೇ ಅಪಘಾತಕ್ಕೆ ಒಳಗಾಗಿದೆ. 29 ವರ್ಷದ ಮಹಿಳೆ ಮಾನಿ ಪವಾರ್ ಎಂಬವವರು ಶೋ ರೂಂ ಮೊದಲ ಮಹಡಿಯಿಂದ ಕಾರು ಹಾರಿಸಿದ್ದಾರೆ. ರಸ್ತೆಗಿಳಿಸುವ ಮೊದಲೇ ಅವರು ಶೋರೂಂವೊಳಗೆ ಸಾಂಪ್ರದಾಯಿಕ ಆಚರಣೆ ಮಾಡಲು ನಿರ್ಧಾರ ಮಾಡಿದ್ದರು.
ಸಾಮಾನ್ಯವಾಗಿ ಹೊಸ ವಾಹನ ಖರೀದಿ ಮಾಡಿದಾಗ ಸಂಪ್ರದಾಯದಂತೆ ಚಕ್ರಗಳಿಗೆ ನಿಂಬೆಹಣ್ಣು ಇಟ್ಟು ಪೂಜೆ ಮಾಡಲಾಗುತ್ತದೆ. ಅದರಂತೆಯೇ ಈ ಮಹಿಳೆ ಕಾರಿನ ಟೈರ್ ಕೆಳಗೆ ಇಟ್ಟಿದ್ದ ನಿಂಬೆಹಣ್ಣಿನ ಮೇಲೆ ಕಾರು ಹತ್ತಿಸುವ ವೇಳೆ ಆಕಸ್ಮಿಕವಾಗಿ ಆಕ್ಸಿಲೇಟರ್ ಒತ್ತಿ ಹಿಡಿದಿದ್ದಾರೆ. ಆಗ ಕಾರು ಶೋ ರೂಂನ ಮೊದಲ ಮಹಡಿಯಿಂದ ಕೆಳಗಡೆ ಬಿದ್ದಿದೆ. ಈ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಘಟನೆ ನಡೆದಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ಮಾನಿ ಪವಾರ್ ಅವರು ನವದೆಹಲಿಯ ನಿರ್ಮಾಣ್ ವಿಹಾರ್‌ನಲ್ಲಿ ಇರುವ ಮಹೀಂದ್ರಾ ಶೋರೂಮ್‌ಗೆ ಭೇಟಿ ನೀಡಿ 27,00,000 ರೂಪಾಯಿ ಮೌಲ್ಯದ ತಮ್ಮ ಹೊಸ ಥಾರ್ ಕಾರಿನ ಡೆಲಿವರಿ ಪಡೆದರು. ಶೋರೂಮ್‌ನಿಂದ ಕಾರನ್ನು ರಸ್ತೆಗಿಳಿಸುವ ಮೊದಲು ಪೂಜೆ ಮಾಡುವ ವೇಳೆ ಈ ಘಟನೆ ನಡೆದಿದೆ. ಮಾನಿ ಪವಾರ್ ಅವರು ನಿಧಾನವಾಗಿ ಎಕ್ಸ್‌ಲೇಟರ್ ಮೇಲೆ ಒತ್ತಿದ್ದರೆ, ಏನು ಆಗುತ್ತಿರಲಿಲ್ಲ. ಅವರು ಹಾಗೇ ಆಕ್ಸಲೇಟರ್ ಮೇಲೆ ಬಲವಾಗಿ ಒತ್ತಿ ಹಿಡಿದ ಕಾರಣ ಕಾರು ಶೋಂರೂಂ ಮೊದಲ ಮಹಡಿಯಿಂದ ಕೆಳಗೆ ಜಂಪ್ ಮಾಡಿದೆ.
ಅಪಘಾತ ಸಂಭವಿಸಿದ ತಕ್ಷಣವೇ ಏರ್‌ಬ್ಯಾಗ್‌ಗಳು ಓಪನ್ ಆಗಿದ್ದು, ಗಾಯಾಳುಗಳನ್ನು ಕೂಡಲೇ ಸಮೀಪದ ಮಲಿಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರಲ್ಲಿದ್ದರಿಗೆ ಹೆಚ್ಚಿನ ಗಾಯಗಳಾಗಿರಲಿಲ್ಲ. ಈ ಬಗ್ಗೆ ಶೋರೂಂ ಮಾಲೀಕರು ಮಾತನಾಡಿ, ಎಕ್ಸಲೇಟರ್ ಅನ್ನು ಆಕಸ್ಮಿಕವಾಗಿ ತುಳಿದ ಕಾರಣ ಈ ಘಟನೆ ಸಂಭವಿಸಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಮಾಹಿತಿ ನೀಡಿದ್ದರು.
-
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಭಾರತದ ಏಕೈಕ ರೈಲು ಸಂಪರ್ಕವಿಲ್ಲದ ರಾಜ್ಯ ಸಿಕ್ಕಿಂ: ಕಾರಣ ಮತ್ತು ಪ್ರಯಾಣ ಮಾರ್ಗಗಳ ವಿವರ -
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Vande Bharat Sleeper: ಉತ್ಪಾದನೆ ಗುರಿ ತಲುಪದ ಬೆಂಗಳೂರು-ಚೆನ್ನೈ ಕಂಪನಿಗಳು, ಸ್ಲೀಪರ್ ರೈಲು ವಿತರಣೆ ವಿಳಂಬ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
ರೈಲಿನಲ್ಲಿ ಆಹಾರ ಗುಣಮಟ್ಟ, ಅಧಿಕೃತ ವೆಂಡರ್ ಮಾಹಿತಿ ತಿಳಿಯಲು QR ಕೋಡ್ ವ್ಯವಸ್ಥೆ, ಏನಿದು? -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್












Click it and Unblock the Notifications