ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾವೀರ ಜಯಂತಿ 2022: ಪ್ರಧಾನಿ ಸೇರಿ ಹಲವು ನಾಯಕರಿಂದ ಶುಭಾಶಯ

|
Google Oneindia Kannada News

ನವದೆಹಲಿ, ಏಪ್ರಿಲ್ 14: ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ನಾಯಕರುಗಳು ಗುರುವಾರ ದೇಶಕ್ಕೆ ಮಹಾವೀರ ಜಯಂತಿಯ ಶುಭಾಶಯ ತಿಳಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶಕ್ಕೆ ಬೈಸಾಖಿ, ಬೋಹಾಗ್ ಬಿಹು, ಒಡಿಯಾ ಹೊಸ ವರ್ಷ, ತಮಿಳು ಹೊಸ ವರ್ಷದ ಪುತಾಂಡು, ಮಹಾವೀರ ಜಯಂತಿ ಮತ್ತು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯ ಶುಭಾಶಯ ತಿಳಿಸಿದ್ದಾರೆ.

"ನಿಮ್ಮೆಲ್ಲರಿಗೂ ಮಹಾವೀರ ಜಯಂತಿಯ ಶುಭಾಶಯಗಳು. ಈ ದಿನದಂದು ಭಗವಾನ್ ಮಹಾವೀರರ ಉದಾತ್ತ ಬೋಧನೆಗಳನ್ನು ನಾವು ನೆನಪಿಸಿಕೊಳ್ಳುತ್ತೇವೆ. ಅದರಲ್ಲೂ ವಿಶೇಷವಾಗಿ ಶಾಂತಿ, ಸಹಾನುಭೂತಿ ಮತ್ತು ಸಹೋದರತ್ವಕ್ಕೆ ಒತ್ತು ನೀಡಿದ್ದೇವೆ," ಎಂದು ಹೇಳಿದ್ದಾರೆ.

Mahavir Jayanti 2022: ಮಹಾವೀರ ಜಯಂತಿ ದಿನಾಂಕ, ಇತಿಹಾಸ, ತಿಥಿ, ಬೋಧನೆಗಳು ಮತ್ತು ಮಹತ್ವMahavir Jayanti 2022: ಮಹಾವೀರ ಜಯಂತಿ ದಿನಾಂಕ, ಇತಿಹಾಸ, ತಿಥಿ, ಬೋಧನೆಗಳು ಮತ್ತು ಮಹತ್ವ

ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪುತಾಂಡುವಿನ ಶುಭಾಶಯ ಕೂಡಾ ಕೋರಿದ್ದಾರೆ. "ಪುತಾಂಡುವಿನ ಶುಭ ಸಂದರ್ಭದಲ್ಲಿ ಶುಭಾಶಯಗಳು," ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. "ಒಡಿಯಾ ಹೊಸ ವರ್ಷದ ಶುಭಾಶಯಗಳು! ಮುಂಬರುವ ವರ್ಷವು ಸಂತೋಷ ಮತ್ತು ಉತ್ತಮ ಆರೋಗ್ಯದಿಂದ ತುಂಬಿರಲಿ," ಎಂದು ಕೂಡಾ ಒಡಿಯಾ ಜನರಿಗೆ ಶುಭಾಶಯ ತಿಳಿಸಿದ್ದಾರೆ.

 ರಾಹುಲ್ ಗಾಂಧಿ ಶುಭಾಶಯ

ರಾಹುಲ್ ಗಾಂಧಿ ಶುಭಾಶಯ

ಇನ್ನು ರಾಹುಲ್ ಗಾಂಧಿ ಕೂಡಾ ಮಹಾವೀರ ಜಯಂತಿಯ ಶುಭಾಶಯವನ್ನು ತಿಳಿಸಿದ್ದಾರೆ. ಮಹಾವೀರ ಜಯಂತಿಯ ಶುಭ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು. ಭಗವಾನ್ ಮಹಾವೀರರ ಬೋಧನೆಗಳು ಎಲ್ಲರಿಗೂ ಸತ್ಯ, ಶಾಂತಿ ಮತ್ತು ಸಾಮರಸ್ಯದ ಹಾದಿಯಲ್ಲಿ ನಡೆಯಲು ಪ್ರೇರೇಪಿಸಲಿ," ಎಂದು ತಿಳಿಸಿದ್ದಾರೆ.

 ಶುಭಾಶಯ ತಿಳಿಸಿದ ಬೊಮ್ಮಾಯಿ

ಶುಭಾಶಯ ತಿಳಿಸಿದ ಬೊಮ್ಮಾಯಿ

"ನಾಡಿನ ಸಮಸ್ತ ಜನತೆಗೆ ಅಹಿಂಸೆಯೇ ಶ್ರೇಷ್ಠ ಧರ್ಮವೆಂದು ಸಾರಿದ ಭಗವಾನ್ ಮಹಾವೀರ ಜಯಂತಿಯ ಶುಭಾಶಯಗಳು. ಭಗವಾನ್ ಮಹಾವೀರರ ಮಾನವೀಯ ಮೌಲ್ಯಗಳ ಉಪದೇಶಗಳನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಂಡು, ಅವರು ತೋರಿದ ಸಾರ್ಥಕ ಜೀವನದ ಮಾರ್ಗದಲ್ಲಿ ಮುನ್ನಡೆಯೋಣ," ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ. "ಅಹಿಂಸೆಯೇ ಪರಮ ಧರ್ಮ ಎಂದು ಸಾರಿ ಲೋಕಕಲ್ಯಾಣಕ್ಕಾಗಿ ಸರ್ವಸಂಗ ಪರಿತ್ಯಾಗ ಮಾಡಿದ ಮಹಾಮುನಿ, 24ನೇ ಜೈನ ತೀರ್ಥಂಕರರಾದ ಭಗವಾನ್ ವರ್ಧಮಾನ್ ಮಹಾವೀರ ಜಯಂತಿಯ ಹಾರ್ದಿಕ ಶುಭಾಶಯಗಳು," ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಶುಭಾಶಯ ತಿಳಿಸಿದ್ದಾರೆ.

 ಅರವಿಂದ್ ಕೇಜ್ರಿವಾಲ್ ಶುಭಾಶಯ

ಅರವಿಂದ್ ಕೇಜ್ರಿವಾಲ್ ಶುಭಾಶಯ

"ಸತ್ಯ ಮತ್ತು ಅಹಿಂಸೆಯ ಪ್ರತೀಕವಾದ ಜೈನ ತತ್ತ್ವಶಾಸ್ತ್ರದ ಪ್ರಸಾರಕ ಭಗವಾನ್ ಮಹಾವೀರ ಯನ ಜಯಂತಿಯ ಶುಭಾಶಯಗಳು!," ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ಟ್ವೀಟ್ ಮಾಡಿದ್ದಾರೆ. ಭಗವಾನ್ ಮಹಾವೀರ ಜಯಂತಿಯ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

 ಮಹಾವೀರ ಜಯಂತಿ 2022

ಮಹಾವೀರ ಜಯಂತಿ 2022

ಮಹಾವೀರ ಜಯಂತಿ ಜೈನ ಧರ್ಮದ ಜನರಿಗೆ ಮಹತ್ವದ ಹಬ್ಬ. ಈ ಮಹಾವೀರ ಜಯಂತಿಯನ್ನು ಜೈನ ಧರ್ಮದ 24 ನೇ ಮತ್ತು ಕೊನೆಯ ಆಧ್ಯಾತ್ಮಿಕ ನಾಯಕ ಭಗವಾನ್ ಮಹಾವೀರರ ಜನ್ಮದಿನದಂದು ಆಚರಿಸಲಾಗುತ್ತದೆ. ಜೊತೆಗೆ ಈ ದಿನವನ್ನು ಮಹಾವೀರ ತ್ರಯೋದಶಿ ಎಂದೂ ಕರೆಯುತ್ತಾರೆ. ಮಹಾವೀರರು ಆರುನೂರು ವರ್ಷಗಳ ಹಿಂದೆ ಈ ಪುಣ್ಯಭೂಮಿಯಲ್ಲಿ ಹುಟ್ಟಿದರು ಎನ್ನಲಾಗುತ್ತದೆ. ಆದರೆ ಅವರು ಪ್ರತಿಪಾದಿಸಿದ ತತ್ವಗಳು ಅಂದಿನಂತೆಯೇ ಇಂದಿಗೂ ಪ್ರಸ್ತುತವಾಗಿವೆ. ಪ್ರಾಚೀನ ಗ್ರಂಥಗಳ ಸನಾತನ ತತ್ವಗಳನ್ನು ಪ್ರಸ್ತುತ ದೃಷ್ಟಿಕೋನದಲ್ಲಿ ನೋಡಲಾಗುತ್ತದೆ.

ಭಾರತೀಯ ಸಮಾಜದಲ್ಲಿ ಒಂದು ವಿಶಿಷ್ಟವಾದ ಚಳುವಳಿಯನ್ನು ಭಗವಾನ್ ಮಹಾವೀರನು ಕ್ರಿಸ್ತಪೂರ್ವ 6 ನೇ ಶತಮಾನದಲ್ಲಿ ಪ್ರಾರಂಭಿಸಿದರು. ಆ ಅಭಿಯಾನವನ್ನು ಶುದ್ಧತೆಯ ಅಭಿಯಾನ ಎಂದು ಕರೆಯಲಾಗಿದೆ. ಭಗವಾನ್ ಮಹಾವೀರರು ಎರಡು ರೀತಿಯ ಶುದ್ಧತೆಯ ಬಗ್ಗೆ ಮಾತನಾಡಿದ್ದಾರೆ. ಭಗವಾನ್ ಮಹಾವೀರರು ಕ್ರಿಸ್ತಪೂರ್ವ 599 ರಲ್ಲಿ ಹಿಂದೂ ಕ್ಯಾಲೆಂಡರ್‌ನ ಚೈತ್ರ ಮಾಸದ 13 ನೇ ದಿನದಂದು ಜನಿಸಿದರು ಎಂದು ಹೇಳಲಾಗುತ್ತದೆ. ಅವರ ಜನ್ಮಸ್ಥಳ ಕುಂಡಲಗ್ರಾಮ, ಬಿಹಾರದಲ್ಲಿದೆ. ಇಲ್ಲಿ ಭಗವಾನ್ ಮಹಾವೀರನ ಹಲವಾರು ದೇವಾಲಯಗಳು ಇಂದು ಅಸ್ತಿತ್ವದಲ್ಲಿವೆ. ಅವರನ್ನು ಜೈನ ಧರ್ಮದ ಸ್ಥಾಪಕ ಎಂದು ಪರಿಗಣಿಸಲಾಗಿದೆ. ಇವರು ಧಾರ್ಮಿಕ ಜ್ಞಾನವನ್ನು ನೀಡುವ ಗುರು.

English summary
Mahavir Jayanti 2022: Narendra Modi and Other Leaders Greets Nation on Mahavir Jayanti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X