ಮಹಾಶಿವರಾತ್ರಿಯಂದು ಜಗದೊಡೆಯ ಈಶ್ವರಗೆ ಗಣ್ಯರ ನಮನ
ಮಹಾಶಿವರಾತ್ರಿಯ ಸಂಭ್ರಮ ಇಂದು ದೇಶದೆಲ್ಲೆಡೆ ಮನೆಮಾಡಿದೆ. ಶಿವಭಕ್ತರು ಶಿವದೇವಾಲಯಗಳಿಗೆ ತೆರಳಿ ಶ್ರದ್ಧೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದಾರೆ. ಇಷ್ಟಾರ್ಥ ಪೂರೈಸುವಂತೆ ಜಗದೀಶನಿಗೆ ಹರಕೆ ಹೊತ್ತು ಸಾರ್ಥಕತೆ ಅನುಭವಿಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಶಿವರಾತ್ರಿ ಹಬ್ಬದ ಶುಭಕೋರಿದ್ದಾರೆ.
ದೆಶದಾದ್ಯಂತ ಭಕ್ತರು ಜಾಗರಣೆ, ಉಪವಾಸ, ವಿವಿಧ ಮನರಂಜನೀಯ ಕಾರ್ಯಕ್ರಮಗಳ ಮೂಲಕ ಶಿವರಾತ್ರಿಯನ್ನು ಆಚರಿಸುತ್ತಿದ್ದಾರೆ. ಭಕ್ತಿ-ಭಾವದಿಂದ ಪೂಜೆ ಸಲ್ಲಿಸಿ, ಜಗದೊಡೆಯ ಶಿವನ ಆಶೀರ್ವಾದ ಬೇಡುತ್ತಿದ್ದಾರೆ.
ದುಷ್ಟ ಶಕ್ತಿಗಳ ನಿರ್ಣಾಮಕ್ಕಾಗಿ ಲಯಕರ್ತನಾದ ಶಿವ ಸಕಲರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆ.
|
ಉಪರಾಷ್ಟ್ರಪತಿಗಳಿಂದ ಶುಭಾಶಯ
ಶಿವರಾತ್ರಿಯ ಶುಭಾಶಯಗಳು. ತ್ರಿಮೂರ್ತಿಗಳಲ್ಲಿ ಶಿವನೂ ಒಬ್ಬ. ಆತ ಆದಿಯೋಗಿ- ಮೊದಲ ಯೋಗ ಗುರು. ಅವನು ದಕ್ಷಿಣಮೂರ್ತಿ- ಮಹಾನ್ ಶಿಕ್ಷಕ, ಅವನು ರುದ್ರ- ದುಷ್ಟಶಕ್ತಿಗಳ ನಿರ್ಮೂಲನೆಗೆ ಕಂಕಟಬದ್ಧನಾದವನು, ಅವನು ನಟರಾಜ- ನೃತ್ಯದ ರಾಜ ಎಂದು ಟ್ವೀಟ್ ಮಾಡಿದ್ದಾರೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು.
|
ಸ್ನೇಹ-ಸೌಹಾರ್ದ ಹೊತ್ತುತರಲಿ!
ಪವಿತ್ರ ಮಹಾ ಶಿವರಾತ್ರಿಯು ನಾಡಿನ ಸಮಸ್ತ ಜನರ ಬಾಳಲ್ಲಿ ಸಂತಸ, ಸಮೃದ್ಧಿ, ಸ್ನೇಹ-ಸೌಹಾರ್ದತೆಯನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ. ತಮಗೆಲ್ಲ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ.
|
ಸಮೃದ್ಧಿ ದಯಪಾಲಿಸಲಿ...
ಶಿವರಾತ್ರಿಯ ಶುಭಕಾಮನೆಗಳು. ಭಗವಂತ ಶಿವ ನಮಗೆಲ್ಲರಿಗೂ ಆರೋಗ್ಯ, ಐಶ್ವರ್ಯ, ಸಮೃದ್ಧಿಯನ್ನು ದಯಪಾಲಿಸಲಿ ಎಂದು ಟ್ವೀಟ್ ಮಾಡಿದ್ದಾರೆ ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್.
|
ಹಾರ್ದಿಕ ಶುಭಾಶಯಗಳು
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಶಿವನ ಮೂರ್ತಿಯ ವಿಡಿಯೋವೊಂದನ್ನು ಟ್ವೀಟ್ ಮಾಡಿ ಮಹಾ ಶಿವರಾತ್ರಿಗೆ ಶುಭಹಾರೈಸಿದ್ದಾರೆ. ನಾಡು ಸಮೃದ್ಧವಾಗಿ, ಜನರೆಲ್ಲರೂ ಸಂತೋಷದಿಂದಿರಲಿ ಎಂದು ಶಿವನಲ್ಲಿ ಪ್ರಾರ್ಥಿಸಿದ್ದಾರೆ.
-
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ












Click it and Unblock the Notifications