Maharashtra Assembly Election 2024: 5 ವರ್ಷದಲ್ಲಿ ಬಣ ರಾಜಕೀಯ, ಹೈಡ್ರಾಮಾ ಏನೆಲ್ಲ ಆಯ್ತು ಗೊತ್ತಾ
ಮಹಾರಾಷ್ಟ್ರ ರಾಜಕೀಯ ಭಾರತದ ಉಳಿದೆಲ್ಲ ರಾಜ್ಯಗಳಿಗಿಂತಲೂ ಭಿನ್ನ. ಇಲ್ಲಿ ಟ್ವೀಸ್ಟ್ ಮೇಲೆ ಟ್ವೀಸ್ಟ್ ಇರುತ್ತೆ. ದೇಶದ ಯಾವುದೇ ರಾಜ್ಯದಲ್ಲೂ ಆಗದಂತಹ ರಾಜಕೀಯ ಬೆಳವಣಿಗೆಗಳು ಈ ರಾಜ್ಯದಲ್ಲಿ ನಡೆಯುತ್ತವೆ. ಮಲಗಿ ಎದ್ದೇಳುವ ಮೊದಲೇ ರಾಜಕೀಯ ಪಕ್ಷಗಳು, ಮುಖ್ಯಮಂತ್ರಿಯೇ ಬದಲಾದ ಉದಾಹರಣೆ ಈ ರಾಜ್ಯಕ್ಕಿದೆ. ಇನ್ನು ವಿವಿಧ ರಾಜಕೀಯ ಪಕ್ಷಗಳು ಅದರಲ್ಲಿನ ಬಣಗಳನ್ನು ತಿಳಿದುಕೊಳ್ಳುವುದು, ಯಾವ ಬಣ ಮತ್ತು ಪಕ್ಷ ಯಾವ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಯಾವ ಪಕ್ಷ ಇನ್ನೊಂದು ಪಕ್ಷಕ್ಕೆ ಬೆಂಬಲ ಸೂಚಿಸುತ್ತಿದೆ ಎನ್ನುವುದು ಉಪೇಂದ್ರ ಮೂವಿ ನೋಡಿದ ರೀತಿ. ಒಮ್ಮೆಗೆ ಯಾವುದೂ ಅರ್ಥವಾಗುವುದಿಲ್ಲ. ಮಹಾರಾಷ್ಟ್ರ ರಾಜಕೀಯವನ್ನು ಸರಳವಾಗಿ ಪರಿಚಯಿಸುತ್ತಿದ್ದೇವೆ. ಅದರ ಚಿತ್ರಣ ಇಲ್ಲಿದೆ.
ಮಹಾರಾಷ್ಟ್ರದಲ್ಲಿ ಹಲವು ಪಕ್ಷಗಳಿವೆ. ಅದರಲ್ಲಿ ಹಲವು ಬಣಗಳಿವೆ. ಇನ್ನು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಒಟ್ಟು 288 ವಿಧಾನಸಭಾ ಕ್ಷೇತ್ರಗಳಿವೆ. ಮಹಾರಾಷ್ಟ್ರ ವಿಧಾನಸಭೆಯ ಮ್ಯಾಜಿಕ್ ನಂಬರ್ 145 ಆಗಿದೆ.

2019ರಲ್ಲಿ ಮಹಾ ವಿಕಾಸ್ ಅಘಾಡಿ ರಚನೆ
2019ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಯಾವುದೇ ಪಕ್ಷಕ್ಕೂ ಪೂರ್ಣ ಬಹುಮತ ಸಿಕ್ಕಿರಲಿಲ್ಲ. ಮಹಾರಾಷ್ಟ್ರದ ಇತಿಹಾಸದಲ್ಲೇ ಮೊದಲು ಎನ್ನುವಂತೆ ಹಲವು ಪಕ್ಷಗಳು ಸೇರಿ ಸರ್ಕಾರವನ್ನು ರಚಿಸಿದ್ದವು. ಇದಕ್ಕೆ ಮಹಾ ವಿಕಾಸ್ ಅಘಾಡಿ ಎಂದು ಹೆಸರು ನಾಮಕರಣ ಮಾಡಲಾಗಿತ್ತು. 2019ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನಾ, ಎನ್‌ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪ್ರಧಾನವಾಗಿ ಸರ್ಕಾರದ ಭಾಗವಾಗಿದ್ದವು. ಇವರಿಗೆ ಪಕ್ಷೇತರರು ಹಾಗೂ ಸ್ವತಂತ್ರ್ ಅಭ್ಯರ್ಥಿಗಳಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದಿದ್ದ ಶಾಸಕರು ಸಹ ಬೆಂಬಲ ವ್ಯಕ್ತಪಡಿಸಿದ್ದರು. ಸಿದ್ಧಾಂತ ಹಾಗೂ ರಾಜಕೀಯ ಕಾರಣಗಳಿಗಾಗಿ ಬದ್ಧವೈರಿಗಳಾಗಿದ್ದ ಶಿವಸೇನೆ ಹಾಗೂ ಕಾಂಗ್ರೆಸ್ ಪಕ್ಷ ಒಂದುಗೂಡಿ ಸರ್ಕಾರ ರಚಿಸಿದ್ದವು.
ಮೂರು ಪಕ್ಷಗಳ ಶಾಸಕರ ಸಂಖ್ಯೆ 154 ಇದ್ದರೆ, ಸಣ್ಣ ಪಕ್ಷಗಳು, ಸ್ವತಂತ್ರ್ಯ ಅಭ್ಯರ್ಥಿಗಳ ಬೆಂಬಲದಿಂದ 169 ಸೀಟುಗಳು ಅಂದರೆ ಶಾಸಕರ ಬೆಂಬಲ ವ್ಯಕ್ತವಾಗಿತ್ತು. ಮೂರು ಪ್ರಮುಖ ಪಕ್ಷಗಳಿಂದ 154 ಶಾಸಕರು ಹಾಗೂ ಸಣ್ಣ ಪಕ್ಷಗಳು, ಸ್ವತಂತ್ರ್ಯ ಅಭ್ಯರ್ಥಿಗಳು 15 ಜನ ಸೇರಿ ಒಟ್ಟು 169 ಸೀಟುಗಳು ಇದ್ದವು.
2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಫಲಿತಾಂಶ
ಪಕ್ಷ ಶಾಸಕರ ಸಂಖ್ಯೆ
ಶಿವಸೇನಾ (ಉದ್ಧವ ಠಾಕ್ರೆ ) 56
ಎನ್‌ಸಿಪಿ 54
ಕಾಂಗ್ರೆಸ್ 44
ಒಟ್ಟು 154
ಬಿಜೆಪಿ ಪಕ್ಷವೊಂದೇ 105 ಸೀಟುಗಳನ್ನು ಗೆದ್ದಿತ್ತು.
ಇತರೆ ಪಕ್ಷ, ಸ್ವತಂತ್ರ ಅಭ್ಯರ್ಥಿ 29
ಒಟ್ಟು 288

2019ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ರಿಸ್ಕ್ ತೆಗೆದುಕೊಳ್ಳಲಿಲ್ಲ. ಹೀಗಾಗಿ, ಮಹಾ ವಿಕಾಸ್ ಅಘಾಡಿ ರಚನೆಯಾಯಿತು. ಇನ್ನು 2020 ಹಾಗೂ 2021ನೇ ಸಾಲಿನಲ್ಲಿ ಒಟ್ಟು ಇನ್ನೂ ಆರು ಜನ ಶಾಸಕರು ಈ ಮಹಾ ವಿಕಾಸ್ ಅಘಾಡಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದರು. ಈ ಮೂಲಕ ಮೈತ್ರಿ ಕೂಟದ ಶಾಸಕರ ಸಂಖ್ಯೆಯು 175ಕ್ಕೆ (169 + 6) ತಲುಪಿತ್ತು. ಈ ಮೈತ್ರಿ ಒಕ್ಕೂಟಕ್ಕೆ 21 ಶಾಸಕರ ಬೆಂಬಲವಿತ್ತು. ಅದರಲ್ಲಿ ಎಐಎಂಎಎಂ, ಬಹುಜನ ವಿಕಾಸ ಅಘಾಡಿ, ಕಮ್ಯುನಿಸ್ಟ್ ಪಾರ್ಟಿ (ಮಾರ್ಕ್ಸ್), ಸ್ವತಂತ್ರ್ ಅಭ್ಯರ್ಥಿಗಳು ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದರು.
2022ರಲ್ಲಿ ಶಿವಸೇನೆ ಪಕ್ಷದ ಶಾಸಕ ಏಕನಾಥ್ ಶಿಂಧೆ ಅವರ ನೇತೃತ್ವದಲ್ಲಿ ಶಿವಸೇನೆಯ 29 ಶಾಸಕರು ಗುಜರಾತ್‌ಗೆ ಏಕಾಏಕಿ ಹೋಗಿದ್ದರು. ಅಲ್ಲಿಂದ ಮಹಾರಾಷ್ಟ್ರದಲ್ಲಿ ರೆಸಾರ್ಟ್ ರಾಜಕೀಯ ಪ್ರಾರಂಭವಾಗಿತ್ತು. ಈ ಮೂಲಕ ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಮೊದಲು 30 ಜನ ಶಾಸಕರು ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಆದರೆ, ಅದು ಕ್ರಮೇಣ 37ಕ್ಕೆ ಏರಿಕೆಯಾಗಿತ್ತು. ಇನ್ನು ಶಿವಸೇನೆಯ ಶಾಸಕ ಏಕನಾಥ್ ಶಿಂಧೆ ಅವರ ನೇತೃತ್ವದ ಶಾಸಕರ ತಂಡವು ಮಹಾರಾಷ್ಟ್ರದ ರಾಜ್ಯಪಾಲರಿಗೆ ನಮ್ಮ ನಾಯಕ ಏಕನಾಥ್ ಶಿಂಧೆ, ಉದ್ಧವ ಠಾಕ್ರೆ ಅಲ್ಲ ಎಂದು ಹೇಳಿದ್ದರು.
ಹಿಂದುತ್ವದ ಆಧರದ ಮೇಲೆ ನಿಂತಿತ್ತು ಶಿವಸೇನೆ
ಶಿವಸೇನೆಯ ಸಂಸ್ಥಾಪಕರಾದ ಬಾಳ್ ಠಾಕ್ರೆ ಅವರು ಹಿಂದುತ್ವದ ಆಧಾರದ ಮೇಲೆ ಶಿವಸೇನೆಯನ್ನು ರಚಿಸಿದ್ದರು. ಆದರೆ, ಅವರ ಮಗ ಉದ್ಧವ್ ಠಾಕ್ರೆ ಅವರು ಅದೇ ಮಾರ್ಗವನ್ನು ಮುಂದುವರಿಸಲಿಲ್ಲ. ಅವರು ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿ ಸರ್ಕಾರ ರಚಿಸಿದ್ದರು. ಮುಂದೆ ಶಿವಸೇನೆಯ ಒಂದು ಬಣ ಬಿಜೆಪಿಯೊಂದಿಗೆ ಕೈಜೋಡಿಸಿತ್ತು. ಈ ಮೂಲಕ 2022ರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಏಕನಾಥ ಶಿಂಧೆ ಆಯ್ಕೆಯಾದರೆ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಗಂಗಾಧರ್ ರಾವ್ ಫಡ್ನವೀಸ್ ಅವರು ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಒಂದು ಪಕ್ಷ ಎರಡು ಬಣ
ಇನ್ನು ಮಹಾರಾಷ್ಟ್ರದಲ್ಲಿ ಶಿವಸೇನೆ ಪಕ್ಷದ ಎರಡು ಬಣಗಳಿವೆ (ಇದರ ಮೂಲತ್ವ ಅಥವಾ ಯಾರದ್ದು ಎನ್ನುವ ಬಗ್ಗೆ ವಿಚಾರಣೆ ನಡೆಯುತ್ತಿದೆ). ಶಿವಸೇನೆ (ಶಿಂಧೆ ಬಣ) ಹಾಗೂ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಎಂದಿದೆ. ಇನ್ನು ನ್ಯಾಷನಲ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ಯಲ್ಲೂ ಎರಡು ಬಣಗಳಿವೆ. ಈ ಪಕ್ಷವೂ ಸಹ ಮಹಾರಾಷ್ಟ್ರದಲ್ಲಿ ಪ್ರಧಾನ ಪಾತ್ರವನ್ನು ನಿರ್ವಹಿಸಿದೆ. ಇದರಲ್ಲಿ ಎನ್‌ಸಿಪಿ (ಶರದ್‌ಚಂದ್ರ ಪವಾರ್ ಬಣ) ಹಾಗೂ ಎನ್‌ಸಿಪಿ (ಅಜಿತ್ ಪವಾರ್ ಬಣ) ಎಂದಾಗಿತ್ತು. ಇನ್ನು ಅಜಿತ್ ಪವಾರ್ ಬಣಕ್ಕೆ ಎನ್‌ಸಿಪಿ ಹೆಸರು ಮತ್ತು ಚಿಹ್ನೆ ಸಿಕ್ಕಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications