ಮುಂಬೈ ಡಿಸೆಂಬರ್ 16: ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾ ರಿಲೀಸ್ಗೆ ಸಜ್ಜಾಗಿರುವಾಗ ಚಿತ್ರದ ಬೇಷರಂ ರಂಗ್ ಹಾಡು ಸದ್ಯ ವಿವಾದಕ್ಕೀಡಾಗಿದೆ. ವಿವಾದದ ಸುಳಿಯಲ್ಲಿ ಸಿಲುಕಿರುವ ಬೇಷರಂ ರಂಗ್ ಸಾಂಗ್ ಅನ್ನು ಡಿಲೀಟ್ ಮಾಡುವಂತೆ ಒತ್ತಾಯಗಳು ಕೇಳಿ ಬಂದಿವೆ. ಬಿಜೆಪಿ ಕಾರ್ಯಕರ್ತರು, ನಾಯಕರು ಹಾಗೂ ಹಿಂದೂ ಸಂಘಟನೆಗಳು ಹಾಡನ್ನು ಡಿಲೀಟ್ ಮಾಡಲು ಒತ್ತಾಯಿಸಿವೆ.
ಜೊತೆಗೆ ಮಹಾರಾಷ್ಟ್ರದ ಆಡಳಿತಾರೂಢ ಬಿಜೆಪಿಯ ನಾಯಕರೊಬ್ಬರು ಮುಂಬರುವ ಶಾರುಖ್ ಖಾನ್-ದೀಪಿಕಾ ಪಡುಕೋಣೆ ಚಿತ್ರ ಪಠಾಣ್ ಸಿನಿಮಾವನ್ನು ಗುರಿಯಾಗಿಸಿಕೊಂಡು ಎಚ್ಚರಿಕೆ ನೀಡಿದ್ದಾರೆ. ಯಾವುದೇ ಧಾರವಾಹಿ ಅಥವಾ ಸಿನಿಮಾಗಳಿಗೆ ಹಿಂದುತ್ವವನ್ನು ಅವಮಾನಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
#पठाण फिल्म को देश के कई #साधू#संत#महात्मा सहित social media पर भी कई #हिंदू संघटन तथा करोडो लोग इस फिल्म को कडा विरोध कर …
ಮುಂದಿನ ತಿಂಗಳ ಬಿಡುಗಡೆಗೆ ಮುನ್ನ ಪ್ರಚಾರದ ಭಾಗವಾಗಿ ಪಠಾಣ್ ಸಿನಿಮಾದ ಹಾಡು ಬಿಡುಗಡೆಯಾಗಿದೆ. ಈ ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರ ಅಶ್ಲೀಲ ಬಿಕಿನಿಯಲ್ಲಿ ಪವಿತ್ರ ಬಣ್ಣದ ಕೇಸರಿಯ ಬಟ್ಟೆಯನ್ನು ತೊಟ್ಟಿರುವುದನ್ನು ಹಿಂದುತ್ವವಾದಿಗಳು ಮತ್ತು ಬಿಜೆಪಿ ನಾಯಕರು ಕೋಮುವಾದ ಕೋನದಲ್ಲಿ ನೋಡುತ್ತಿದ್ದಾರೆ.
ಬೇಷರಂ ರಂಗ್ ಹಾಡಿನ ವಿವಾದ
ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್ ಅವರು ಇಂದು ಟ್ವೀಟ್ಗಳಲ್ಲಿ, ಪಠಾಣ್ ಸಿನಿಮಾದಲ್ಲಿ ಅಭಿನಯಿಸಿದ ದೀಪಿಕಾ ಪಡುಕೋಣೆ ಅವರ ಬಗ್ಗೆ ಪ್ರಸ್ತಾಪಿಸಿದ್ದಾರೆ. "ಜೆಎನ್ಯು-ಧಾರಿ" (ಜೆಎನ್ಯು ಜೊತೆ ನಿಂತಿರುವ ಜನರು) "ಜಾನೆಯು-ಧಾರಿ" (ಪವಿತ್ರವಾದ ಬ್ರಾಹ್ಮಣ ದಾರವನ್ನು ಧರಿಸಿರುವ ಹಿಂದೂಗಳು) ಭಾವನೆಗಳನ್ನು ನೋಯಿಸುತ್ತಿದ್ದಾರೆ ಎಂದು ಅವರು ಹಿಂದಿ ಮತ್ತು ಮರಾಠಿಯಲ್ಲಿ ಟ್ವೀಟ್ಗಳಲ್ಲಿ ಹೇಳಿದ್ದಾರೆ. "ಹಿಂದುತ್ವವನ್ನು ಅವಮಾನಿಸುವ ಯಾವುದೇ ಚಲನಚಿತ್ರ ಅಥವಾ ಧಾರಾವಾಹಿಯನ್ನು ಮಹಾರಾಷ್ಟ್ರದಲ್ಲಿ ಅನುಮತಿಸಲಾಗುವುದಿಲ್ಲ" ಎಂದ ಅವರು ಜೈ ಶ್ರೀ ರಾಮ್ ಎಂದು ಬರೆದಿದ್ದಾರೆ.
ಶಾರುಖ್ ಖಾನ್ ಪ್ರತಿಕೃತಿ ದಹನ
ಹಿಂದಿ ಚಿತ್ರೋದ್ಯಮದ ತವರು ಮಹಾರಾಷ್ಟ್ರದಲ್ಲಿ ಹಿಂದುತ್ವ ಸಿದ್ಧಾಂತವಿರುವ ಸರ್ಕಾರ ಇರುವುದರಿಂದ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು 'ಸಂತರು, ಮಹಾತ್ಮರು, ಹಿಂದೂ ಸಂಘಟನೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿರುವ ಕೋಟ್ಯಂತರ ಜನರ ಮುಂದೆ ವಿವರಣೆ ನೀಡಬೇಕು' ಎಂದು ಆಗ್ರಹಿಸಿದರು.
ಬಿಜೆಪಿ ನಾಯಕರು ಸೇರಿದಂತೆ ಪ್ರತಿಭಟನೆ ನಡೆಸುತ್ತಿರುವವರಲ್ಲಿ ಹಲವರು ಲವ್ ಜಿಹಾದ್ ಎಂದು ಕರೆದಿದ್ದಾರೆ. ಹಿಂದೂ ನಟಿ ಮತ್ತು ಮುಸ್ಲಿಂ ನಟರ ಜೋಡಿ ಕೇಸರಿ ಮತ್ತು ಹಸಿರು ಉಡುಪನ್ನು 'ಬೇಷರಂ ರಂಗ್' ಹಾಡಿನಲ್ಲಿ ತೋರಿಸಿದ್ದಾರೆ. ಹೀಗಾಗಿ ಅವರ ಚಲನಚಿತ್ರವನ್ನು ಬಹಿಷ್ಕರಿಸುವಂತೆ ಆಗ್ರಹಿಸಿ ಎಲ್ಲಾ ಬಾಲಿವುಡ್ಗೆ ಕರೆ ನೀಡಿದ್ದಾರೆ. ಶಾರುಖ್ ಖಾನ್ ಅವರ ಪ್ರತಿಕೃತಿ ದಹಿಸಿದ ಮಧ್ಯಪ್ರದೇಶದ ಇಂದೋರ್ನಂತಹ ಸ್ಥಳಗಳಲ್ಲಿ ಪ್ರತಿಭಟನೆಗಳು ನಡೆದಿದ್ದರೂ ಚಿತ್ರದ ನಿರ್ಮಾಪಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪಠಾಣ್ ಗಲಾಟೆ ಮಧ್ಯೆ ಶಾರುಖ್ ಪ್ರತಿಕ್ರಿಯೆ
ಕೋಲ್ಕತ್ತಾದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ 28ನೇ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಖಾನ್ ಮಾತನಾಡಿದರು. ಹಲವಾರು ವಿಚಾರಣಗಳನ್ನು ಪ್ರಸ್ತಾಪಿಸಿದ ಅವರು, ಏನೇ ಆಗಲಿ ನಮ್ಮಂಥವರು ಸಕಾರಾತ್ಮಕವಾಗಿಯೇ ಇರುತ್ತಾರೆ ಎಂದು ಹೇಳಿದ್ದಾರೆ. ಜಗತ್ತು ಏನೇ ಮಾಡಿದರೂ ನಾನು, ನೀವೆಲ್ಲರೂ ಮತ್ತು 'ಧನಾತ್ಮಕ' ಜನರೆಲ್ಲರೂ ಜೀವಂತವಾಗಿದ್ದೇವೆ ಎಂದು ಹೇಳುತ್ತದೆ.
"ಸಿನಿಮಾ ಮಾನವ ಸ್ವಭಾವದ ದುರ್ಬಲತೆಯನ್ನು ಅವರು ಬದುಕಿರುವಂತೆಯೇ ಸರಳ ರೂಪಗಳಲ್ಲಿ ಹೇಳುವ ಮೂಲಕ ಬಹಿರಂಗಪಡಿಸುತ್ತದೆ. ಇದು ನಮಗೆ ಪರಸ್ಪರ ಚೆನ್ನಾಗಿ ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ಮಾನವೀಯತೆಯ ಸಹಾನುಭೂತಿ, ಏಕತೆ ಮತ್ತು ಭ್ರಾತೃತ್ವದ ಅಪಾರ ಸಾಮರ್ಥ್ಯವನ್ನು ಮುನ್ನೆಲೆಗೆ ತರುತ್ತದೆ" ಎಂದು ಖಾನ್ ಹೇಳಿದರು.
ಅಮಿತಾಬ್ ಬಚ್ಚನ್ಗೆ ಭಾರತ ರತ್ನ
80 ನೇ ವರ್ಷಕ್ಕೆ ಕಾಲಿಟ್ಟಿರುವ ಬಚ್ಚನ್, ಕಳೆದ ದಿನ ನಗರದ 28 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಘೋಷಿಸಲು ಕೋಲ್ಕತ್ತಾಕ್ಕೆ ತೆರಳಿದ್ದರು. ಈ ವೇಳೆ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡುವುದು ಸೂಕ್ತ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಆದರೂ ಅದು ಅಧಿಕೃತವಾಗಿ ಮಂಡಿಸಲಾಗಿಲ್ಲ. ಆದರೆ ನಾವು ಬಂಗಾಳದಿಂದ ಧ್ವನಿ ಎತ್ತುತ್ತೇವೆ. ಅಮಿತಾಬ್ ಬಚ್ಚಂಜಿಗೆ ಭಾರತ ರತ್ನ ನೀಡಲು ಒತ್ತಾಯಿಸುತ್ತೇವೆ' ಎಂದು ಬ್ಯಾನರ್ಜಿ ಹೇಳಿದರು.