ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: 15 ಸಣ್ಣ ಪಕ್ಷ, ನಾಲ್ಕು ಬಣ, ರಾಜಕೀಯ ಪ್ರಯೋಗ ಇಂಟ್ರಸ್ಟಿಂಗ್ ಮಾಹಿತಿ!
ಕರ್ನಾಟಕದ ನೆರೆಯ ಹಾಗೂ ಸದಾ ಕಾಲು ಕೆಣಕಿಕೊಂಡು ಬರುವ ಮಹಾರಾಷ್ಟ್ರ ಚುನಾವಣೆಗೆ ಸಿದ್ಧವಾಗ್ತಿದೆ. ಮಹಾರಾಷ್ಟ್ರ ಚುನಾವಣೆಗೆ ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿವೆ. ನವೆಂಬರ್ 20ರಂದು (ಬುಧವಾರ) ಒಂದೇ ಹಂತದಲ್ಲಿ ಮಹಾರಾಷ್ಟ್ರ ಚುನಾವಣೆ ನಡೆಯಲಿದೆ. ಈ ರಾಜ್ಯದಲ್ಲಿ ಒಟ್ಟು 288 ವಿಧಾನಸಭಾ ಕ್ಷೇತ್ರಗಳಿದ್ದು, 145 ಈ ರಾಜ್ಯದ ವಿಧಾನಸಭೆಯ ಬಹುಮತದ ಸಂಖ್ಯೆಯಾಗಿದೆ. ಪ್ರಸಕ್ತ ಈ ರಾಜ್ಯದಲ್ಲಿ ಮಹಾಯುತಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇದೆ. ಮಹಾಯುತಿಯ ಭಾಗವಾಗಿ ಬಿಜೆಪಿ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಅಜಿತ್ ಪವಾರ್ ಬಣ) ಹಾಗೂ ಶಿವಸೇನೆಯ (ಏಕನಾಥ್ ಶಿಂಧೆ ಬಣ) ಅಧಿಕಾರದಲ್ಲಿ ಇವೆ. ಆದರೆ, ಈ ಬಾರಿ ಸಣ್ಣ ರಾಜಕೀಯ ಪಕ್ಷಗಳು ದೊಡ್ಡ ಪೈಪೋಟಿಯನ್ನೇ ನೀಡುತ್ತಿವೆ.
ಮಹಾರಾಷ್ಟ್ರದಲ್ಲಿ ಸಣ್ಣ ಪಕ್ಷಗಳ ಪೈಪೋಟಿ: ಮಹಾರಾಷ್ಟ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಣ್ಣ ಪಕ್ಷಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಮಹಾರಾಷ್ಟ್ರದ ಇದೀಗ ಚುನಾವಣಾ ಕಣದಲ್ಲಿ 15ಕ್ಕೂ ಹೆಚ್ಚು ಸಣ್ಣ ಪಕ್ಷಗಳು ಇವೆ. ಈ ಸಣ್ಣ ಪಕ್ಷಗಳು ಮಹಾ ವಿಧಾನಸಭೆಯ ರಾಜಕೀಯ ಲೆಕ್ಕಾಚಾರವನ್ನೇ ಬುಡ ಮೇಲು ಮಾಡುವ ಸಾಮರ್ಥ್ಯವನ್ನು ಹೊಂದಿವೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಇಲ್ಲಿ ಈ ಬಾರಿ ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಪಾತ್ರವನ್ನು ವಹಿಸುವುದಕ್ಕಿಂತ ಪ್ರಬಲ ಪಕ್ಷಗಳಿಗೆ ತಿರುಗು ಬಾಣವಾಗುವ ಸಾಧ್ಯತೆಯೇ ದಟ್ಟವಾಗಿದೆ 15ಕ್ಕೂ ಹೆಚ್ಚು ಪಕ್ಷದ ನೂರಾರು ಜನ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಇದರಿಂದ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಮತ ವಿಭಜನೆಯಾಗುವ ಸಾಧ್ಯತೆ ದಟ್ಟವಾಗಿದೆ.
ಅಲ್ಲದೇ ಎಲ್ಲಾ ಪಕ್ಷಗಳು ಗೊಂದಲ ಹಾಗೂ ಉತ್ತಡದಲ್ಲಿಯೇ ಇವೆ. ಇದಕ್ಕೆ ಕಾರಣ. ಪಕ್ಷಗಳು ಇಬ್ಭಾಗವಾಗಿದ್ದು. ಪ್ರಮುಖ ಪಕ್ಷಗಳ ಮುಖಂಡರು ಹರಿದು ಹಂಚಿ ಹೋಗಿದ್ದಾರೆ. ಹಿಂದುತ್ವ ಪರವಾದ ಪಕ್ಷ ಕಾಂಗ್ರೆಸ್‌ನಲ್ಲಿಯೂ ಎಡಪಂಥೀಯ ಚಿಂತನೆ ಇರುವ ಪಕ್ಷವು ಬಿಜೆಪಿಯೊಂದಿಗೆಯೂ ಗುರುತಿಸಿಕೊಂಡಿದೆ! ಈ ರೀತಿಯ ರಾಜಕೀಯ ಪ್ರಯೋಗ ಶಾಲೆಯಾಗಿ ಮಹಾರಾಷ್ಟ್ರ ಬದಲಾಗಿದೆ.
ಶಿವಸೇನಾ ಪಕ್ಷ ಸ್ಥಾಪನೆಯಾಗಿದ್ದೇ ಉಗ್ರ ಹಿಂದುತ್ವದ ಆಧಾರದ ಮೇಲೆ. ಆದರೆ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿಯು ಇಲ್ಲಿ ಮುಸ್ಲಿಂ ಸಮುದಾಯದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಕಳೆದ ಎರಡೂವರೆ ವರ್ಷಗಳ ಹಿಂದೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ಹಾಗೂ ಶಿವಸೇನಾ ಪಾರ್ಟಿಯು ಇಬ್ಭಾಗವಾಗಿದೆ. ಈ ಪಕ್ಷಗಳ ಒಂದು ಬಣವು ಕಾಂಗ್ರೆಸ್‌ನೊಂದಿಗೆಯೂ ಇನ್ನೊಂದು ಬಣವು ಬಿಜೆಪಿಯೊಂದಿಗೂ ಗುರುತಿಸಿಕೊಂಡಿದೆ.
ಈ ಬಾರಿ ಮಹಾರಾಷ್ಟ್ರದಲ್ಲಿ ಬಿಜೆಪಿ ಉಗ್ರ ಹಿಂದುತ್ವ ಸಿದ್ಧಾಂತವನ್ನು ಪ್ರಯೋಗಿಸುತ್ತಿದ್ದರೆ. ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಅಜಿತ್ ಪವಾರ್ ಬಣ) ಮೈತ್ರಿ ಪಕ್ಷದಿಂದ ಅಂತರ ಕಾಪಾಡಿಕೊಳ್ಳುವುದು ಮಾತ್ರವಲ್ಲ. ಈ ಪ್ರಯೋಗವೆಲ್ಲ ನಮ್ಮ ಮಹಾರಾಷ್ಟ್ರದಲ್ಲಿ ನಡೆಯುವುದೇ ಇಲ್ಲ ಬಿಡಿ ಅಂತ ನೇರವಾಗಿಯೇ ಟಾಂಗ್ ಕೊಟ್ಟಿದೆ!. ಇನ್ನೊಂದು ಕಡೆ ಶಿವಸೇನಾ (ಉದ್ಧವ್ ಠಾಕ್ರೆ ಬಣ) ಹಿಂದುತ್ವದ ಬಗ್ಗೆ ಮಾತನಾಡಲೂ ಆಗದೆ. ಹಿಂದೂ ಅಸ್ತ್ರವನ್ನು ಪ್ರಯೋಗಿಸಲಾಗದೆ ಕುಳಿತಿದೆ. ಈ ಪಕ್ಷ ಉದಯಿಸಿದ್ದೇ ಮಹಾರಾಷ್ಟ್ರದ ಅಸ್ತಿತ್ವ ಹಾಗೂ ಹಿಂದುತ್ವದ ಮೇಲೆ ಆದರೆ, ಅದನ್ನು ಬಾಳಠಾಕ್ರೆ ಅವರ (ಶಿವಸೇನಾ ಮುಖ್ಯಸ್ಥ) ಮಗ ಉದ್ಧವ್ ಠಾಕ್ರೆ ಮುಂದುವರಿಸಿಲ್ಲ.
ಶಿವಸೇನಾ ಹಲವು ವರ್ಷಗಳಿಂದ ಬಿಜೆಪಿಯೊಂದಿಗೆ ಗುರುತಿಸಿಕೊಂಡಿತ್ತು. ಆದರೆ, ಕ್ರಮೇಣ ಬಿಜೆಪಿಯಿಂದ ದೂರವಾಗಿತ್ತು. ಆದರೆ, ಅದರ ಮೂಲ ಬೇರು ಸಡಿಲಗೊಂಡಿರಲಿಲ್ಲ. ಆದರೆ, ಯಾವಾಗ ಕಾಂಗ್ರೆಸ್‌ನೊಂದಿಗೆ ಶಿವಸೇನಾ ಮೈತ್ರಿ ಮಾಡಿಕೊಂಡಿತೋ ಆಗ ಒಂದು ಬಣದಲ್ಲಿ ಅಸಮಾಧಾನ ಬಿಗಿಲೆದ್ದಿತ್ತು. ಅದೇ ಬಣ ಈಗ ಕಾಂಗ್ರೆಸ್‌ನೊಂದಿಗೆ ಇದ್ದು, ಏಕನಾಥ್ ಶಿಂಧೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾರೆ.












Click it and Unblock the Notifications