Maha Kumbh Mela: ಕುಂಭ ಮೇಳದ ಮೊನಾಲಿಸಾ ಡೇರೆಗೆ ನುಗ್ಗಿ ಸೋದರನ ಮೇಲೆ ಹಲ್ಲೆ!
ಮಹಾ ಕುಂಭ ಮೇಳದಲ್ಲಿ ಒಂದೇ ಒಂದು ವಿಡಿಯೋದಿಂದ ದೇಶಾದ್ಯಂತ ಸುದ್ದಿ ಮಾಡಿರುವ ಮೊನಾಲಿಸಾಗೆ ಒಂದಲ್ಲ ಒಂದು ಸಂಕಷ್ಟ ಎದುರಾಗುತ್ತಲೇ ಇದೆ. ತನ್ನ ಆಕರ್ಷಕ ನೋಟ ಮತ್ತು ವಿಶಿಷ್ಠ ಕಣ್ಣುಗಳ ಮೂಲಕ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿರುವ ಮೊನಾಲಿಸಾ ಭೋಂಸ್ಲೆ ಇದೀಗ ತಾನು ತಂಗಿರುವ ಡೇರೆಗೆ ಕಿಡಿಗೇಡಿಗಳು ನುಗ್ಗಿದ್ದಲ್ಲದೆ ತನ್ನ ಸಹೋದರನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪುರುಷರ ಗುಂಪೊಂದು ಬಲವಂತವಾಗಿ ಡೇರೆಗೆ ನುಗ್ಗಿದ್ದು ತನ್ನ ಜೊತೆ ಫೋಟೊ ತೆಗೆಸಿಕೊಳ್ಳಲು ಪ್ರಯತ್ನಿಸಿದೆ ಎಂದು ಆರೋಪಿಸಿದ್ದಾರೆ. ತನ್ನ ಸಹೋದರ ಪುಂಡರನ್ನು ವಿರೋಧಿಸಿ ಅವರ ಮೊಬೈಲ್‌ನಿಂದ ಫೋಟೊ ಡಿಲೀಟ್ ಮಾಡಲು ಪ್ರಯತ್ನಿಸಿದಾಗ ಆತನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿರುವುದಾಗಿ ನ್ಯೂಸ್ 18 ವರದಿ ಮಾಡಿದೆ.

ಮಹಾ ಕುಂಭ ಮೇಳದಲ್ಲಿ ಸರ ಮಾಡುತ್ತಿದ್ದ ಮೊನಾಲಿಸಾ ಬೋಂಸ್ಲೆ ವಿಡಿಯೋವನ್ನು ವ್ಯಕ್ತಿಯೊಬ್ಬರು ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಬಳಿಕ ಆಕೆ ರಾತ್ರೋ ರಾತ್ರಿ ಪ್ರಖ್ಯಾತಿ ಪಡೆದರು. ಆಕೆ ಮಣಿ ಸರ ಮಾಡಲು ಕೂಡ ಬಿಡದೆ ಬೆನರು ಫೋಟೋ ತೆಗೆಸಿಕೊಳ್ಳಲು ವಿಡಿಯೋ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಜನರಿಂದ ತಪ್ಪಿಸಿಕೊಳ್ಳಲು ಈಗ ಆಕೆ ಮಾಸ್ಕ್ ಹಾಕಿಕೊಂಡು ಜನರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಆದರೂ ಜನ ಆಕೆಯ ಡೇರೆಗೆ ನುಗ್ಗಿ ಫೋಟೊ ತೆಗೆದುಕೊಳ್ಳಲು ಪ್ರಯತ್ನಿಸಿರುವುರು ಆಘಾತಕಾರಿ ವಿಚಾರವಾಗಿದೆ.
ಆತಂಕದಲ್ಲಿ ಮೊನಾಲಿಸಾ
ನನ್ನ ತಂದೆಯೇ ಫೋಟೊ ತೆಗೆಸಿಕೊಳ್ಳಲು ಕಳಿಸಿದ್ದಾರೆ ಎಂದು ಕೆಲವರು ನನ್ನನ್ನು ಸಂಪರ್ಕಿಸಿದಿರು. ನಾನು ಅದಕ್ಕೆ ಒಪ್ಪಿಕೊಳ್ಳಲಿಲ್ಲ, ನಾನು ಯಾರ ಜೊತೆಯಲ್ಲೂ ಫೋಟೊ ತೆಗೆಸಿಕೊಳ್ಳಲ್ಲ ಎಂದು ಹೇಳಿದರು.
ನನಗೆ ಭಯವಾಗುತ್ತಿದೆ ಇಲ್ಲಿ ಯಾರೂ ಇಲ್ಲ, ಯಾರಾದರೂ ನನಗೆ ಏನಾದರೂ ಮಾಡಬಹುದು. ಇಲ್ಲಿ ವಿದ್ಯುತ್ ಸಂಪರ್ಕವಿಲ್ಲ, ಅದರೂ ಜನ ಬಲವಂತವಾಗಿ ಟೆಂಟ್ ಒಳಗೆ ನುಗ್ಗುತ್ತಿದ್ದಾರೆ ಎಂದು ಹೇಳಿದ್ದಾರೆ.
ನನ್ನ ತಂದೆ ಅವರನ್ನು ಎದುರಿಸಿ ಕಳಿಸಿದರು, ಅವರು ಹೇಗೆ ಬಂದರು ನನಗೆ ಪ್ರಶ್ನೆ ಮಾಡಿದರು. ತಾನು ಯಾರನ್ನೂ ಫೋಟೊ ತೆಗೆಸಿಕೊಳ್ಳಲು ಕಳಿಸಿಲ್ಲ ಎಂದರು. ಆದರೂ ನನ್ನ ತಂದೆಯ ಹೆಸರು ಹೇಳಿಕೊಂಡು ಹಲವರು ಫೋಟೊಗಾಗಿ ಬರುತ್ತಿದ್ದಾರೆ ಎಂದರು.
ಫೋಟೊ ತೆಗೆದಿದ್ದಕ್ಕೆ ನನ್ನ ಸಹೋದರ ಸಿಟ್ಟಾಗಿದ್ದರು. ಅವರ ಮೊಬೈಲ್ ಕಿತ್ತುಕೊಂಡು ಫೋಟೊಗಳನ್ನು ಡಿಲೀಟ್ ಮಾಡಲು ಪ್ರಯತ್ನಿಸಿದರು. ಆದರೆ ಒಂಭತ್ತು ಜನ ಅವರ ಮೇಲೆ ದಾಳಿ ಮಾಡಿದರು ಎಂದು 16 ವರ್ಷದ ಮೊನಾಲಿಸಾ ಆತಂಕ ವ್ಯಕ್ತಪಡಿಸಿದ್ದಾರೆ.












Click it and Unblock the Notifications