ಮ್ಯಾಗಿ ಪ್ರಸಾದ ವೀಡಿಯೋ ವೈರಲ್: ಎಂಥದ್ದೋ ಎಣ್ಣೆ ಹಾಕಿ ಮಾಡಿದ ನೂಡಲ್ಸ್ ಪ್ರಸಾದ ಹೇಗಾಗುತ್ತೆ ಕೇಳ್ತಿದ್ದಾರೆ ನೆಟ್ಟಿಗರು

Maggi Prasada Viral Video : ಮ್ಯಾಗಿ ಬಹುತೇಕ ಮಕ್ಕಳ ಇಷ್ಟದ ಸ್ನಾಕ್‌. ಇಡ್ಲಿ ದೋಸೆ ಎಂದ ಕೂಡಲೇ ಸಪ್ಪೆಯಾಗುವ ಮಕ್ಕಳ ಮುಖ ಮ್ಯಾಗಿ ಎಂದರೆ ಸಾಕು ಅರಳಿ ಬಿಡುತ್ತದೆ. ಇದನ್ನು ಮಾಡುವುದು ಕೂಡಾ ಬಹಳ ಸುಲಭ. ಏನೋ ಚಟ್‌ಪಟಾ ತಿನ್ನಬೇಕು ಆದರೆ ಜಾಸ್ತಿ ಟೈಂ ಆಗಬಾರದು ಎನ್ನುವವರ ಸುಲಭ ಆಯ್ಕೆ ಈ ಮ್ಯಾಗಿ. ಒಂದು ಕಾಲದಲ್ಲಿ ಟೇಸ್ಟ್‌ ಮೇಕರ್‌, ಪ್ರಿಸರ್ವೇಟಿವ್‌ ಎನ್ನುವ ಕಾರಣಕ್ಕೆ ಸುದ್ದಿಯಾಗಿದ್ದ ಮ್ಯಾಗಿ ಈಗ ಮತ್ತೆ ಚರ್ಚೆ ಆಗ್ತಾ ಇದೆ. ಆದ್ರೆ ಈಗ ಸುದ್ದಿಯಾಗ್ತಾ ಇರೋದು ಮಾತ್ರ ಬೇರೆಯೇ ಕಾರಣಕ್ಕೆ.

Maggi Prasada Viral Video On Noodles Langar In Amritsar People Preparing Maggi With Vegetable And Paneer For Prasada

ಲಂಗರ್‌ನಲ್ಲಿ Maggi Prasada

ಅಮೃತಸರದಲ್ಲಿ 1,000 ಪ್ಯಾಕೇಟ್‌ ಮ್ಯಾಗಿ ತಯಾರಿಸುವ ವಿಡಿಯೋ ಇದೀಗ ಸಖತ್‌ ವೈರಲ್‌ ಆಗ್ತಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮ್ಯಾಗಿ ರೆಡಿ ಆಗ್ತಾ ಇರೋದನ್ನು ನೋಡಿ ಆಶ್ಚರ್ಯಪಟ್ಟವರೇ ಜಾಸ್ತಿ. ಅಷ್ಟಕ್ಕೂ ಈ ಮ್ಯಾಗಿ ತಯಾರಾದದ್ದು ಲಂಗರ್‌ನಲ್ಲಿ ಹಂಚುವುದಕ್ಕೆ. ಲಂಗರ್‌ ಎಂದರೆ ಒಂದು ರೀತಿಯಲ್ಲಿ ಅನ್ನದಾನ ಇದ್ದ ಹಾಗೆ. ನಮ್ಮಲ್ಲಿ ದೇವಸ್ಥಾನಗಳಲ್ಲಿ ಅನ್ನದಾನ ಇರುತ್ತಲ್ಲ, ಹಾಗೆಯೇ ಉತ್ತರ ಭಾರತದಲ್ಲಿ ಭಕ್ತರಿಗೆ ವಿತರಿಸುವ ಪ್ರಸಾದ. ಇದು ಅನ್ನವೇ ಆಗಿರಬೇಕು ಎನ್ನುವುದು ಕಡ್ಡಾಯ ಅಲ್ಲ. ಪೂರಿ ಪಲ್ಯ, ಪೂರಿ ಹಲ್ವ, ಕಿಚಡಿ, ಹೀಗೆ ಲಂಗರ್‌ ಮಾಡುವವರ ಅನುಕೂಲ ಇಚ್ಚೇಗೆ ತಕ್ಕಂತೆ ಏನು ಬೇಕಾದರೂ ಇರಬಹುದು.

ವೈರಲ್‌ ಆಗುತ್ತಿದೆ ಮ್ಯಾಗಿ ವಿಡಿಯೋ :

ಈ ವಿಡಿಯೋ ಮ್ಯಾಗಿ ಪ್ಯಾಕೆಟ್‌ ಓಪನ್‌ ಮಾಡುವ ಮೂಲಕ ಶುರುವಾಗುತ್ತದೆ. ಒಂದು ದೊಡ್ಡ ಪಾತ್ರೆಯನ್ನು ಒಲೆಯ ಮೇಲೆ ಇರಿಸಿ, ಎಣ್ಣೆ, ಬೆಣ್ಣೆಯನ್ನು ಸೇರಿಸಲಾಗುತ್ತದೆ. ನಂತರ, ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೆಟ್, ಬಟಾಣಿ, ಸ್ವೀಟ್‌ಕಾರ್ನ್, ಮಶ್ರೂಮ್‌ ಟೊಮೆಟೊ ಹೀಗೆ ಬೇರೆ ಬೇರೆ ತರಕಾರಿ ಹಾಕುವುದನ್ನು ನೋಡಬಹುದು. ಇಲ್ಲಿ ಹಾಕುವ ತರಕಾರಿ, ಮ್ಯಾಗಿಯನ್ನು ನೋಡಿದ್ರೆ ಎಷ್ಟು ಜನರಿಗೋಸ್ಕರ ಊಟದ ಸಿದ್ದತೆ ಆಗ್ತಾ ಇದೆ ಎನ್ನುವುದನ್ನು ಅಂದಾಜು ಮಾಡಬಹುದು.

ಮ್ಯಾಗಿ ತರಕಾರಿ ಪನ್ನೀರ್‌ :

ತರಕಾರಿಗಳನ್ನು ಚೆನ್ನಾಗಿ ಬೇಯಿಸಿದ ನಂತರ, ನೀರು ಮತ್ತು ಮ್ಯಾಗಿ ಮಸಾಲವನ್ನು ಒಂದು ದೊಡ್ಡ ಪಾತ್ರೆಯಲ್ಲಿ ಸುರಿಯಲಾಯಿತು. ನಂತರ ಇದಕ್ಕೆ 1,000 ಪ್ಯಾಕೆಟ್ ಮ್ಯಾಗಿ ಸೇರಿಸಲಾಯಿತು. ಮ್ಯಾಗಿ ಬೇಯಿಸಿದ ನಂತರ, ಹಲವಾರು ಕಿಲೋಗ್ರಾಂಗಳಷ್ಟು ಪನೀರ್ ತುಂಡುಗಳನ್ನು ಕೂಡಾ ಹಾಕಿದ್ದಾರೆ. ಹೀಗೆ ತಯಾರಾದ ಮ್ಯಾಗಿಯನ್ನು ಪ್ರಸಾದದ ರೂಪದಲ್ಲಿ ಜನರಿಗೆ ಬಡಿಸಿದ್ದಾರೆ.

ಮ್ಯಾಗಿ ಪ್ರಸಾದಕ್ಕಾಗಿ ಸಾಲು ಸಾಲು ಜನ :

ಮ್ಯಾಗಿ ರೆಡಿಯಾಗಿ ವಿತರಣೆ ಆರಂಭವಾದ ತಕ್ಷಣ ಜನ ಸಾಲಿನಲ್ಲಿ ನಿಂತು ಪ್ರಸಾದ ತೆಗೆದು ಕೊಂಡಿದ್ದಾರೆ. ಈ ಮ್ಯಾಗಿ (maggi) ಪ್ರಸಾದ ತಿಂದವರಿಗೆ ಮನೆಯಲ್ಲಿ ಮಾಡುವ ಮ್ಯಾಗಿ, ಅಂಗಡಿಗಳಲ್ಲಿ ಸಿಗುವ ಮ್ಯಾಗಿಗಿಂತ ಇದು ಸ್ವಲ್ಪ ಡಿಫರೆಂಟ್‌ ಅನ್ನಿಸಿದ್ದಂತರೂ ಸುಳ್ಳಲ್ಲ. ತುಂಬಾ ಜನ ಇಲ್ಲಿ ಮ್ಯಾಗಿ ತಿನ್ನುತ್ತಾ ಇರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದೀಗ ಈ ವಿಡಿಯೋ ವೈರಲ್‌ (viral video) ಆಗುತ್ತಿದ್ದ ಹಾಗೆಯೇ ಬೇರೆ ಬೇರೆ ರೀತಿಯ ಚರ್ಚೆ ಕೂಡಾ ಹುಟ್ಟಿಕೊಂಡಿದೆ. ಕೆಲವರು ಆಹಾರ ವಿತರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನು ಕೆಲವರು ಲಂಗರ್‌ನಲ್ಲಿ ಮ್ಯಾಗಿ ವಿತರಣೆ ಮಾಡಿದ್ದನ್ನು ಪ್ರಶ್ನಿಸಿದ್ದಾರೆ. ಇಲ್ಲಿ ಮ್ಯಾಗಿ ಎನ್ನುವುದು ಊಟದ ಅಂಶವನ್ನು ಮೀರಿ ಸಂಪ್ರದಾಯ ಮತ್ತು ಆದ್ಯತೆಯ ಮೇಲಿನ ಚರ್ಚೆಯನ್ನು ಹುಟ್ಟುಹಾಕಿದೆ.

ಹೊಗಳಿಕೆಯ ಜೊತೆಗೆ, ಪ್ರಶ್ನೆಗಳು :

ಈ ವೈರಲ್‌ ವಿಡಿಯೋಗೆ ಜನ ತಮ್ಮದೇ ಆದ ರೀತಿಯಲ್ಲಿ ರಿಯಾಕ್ಟ್‌ ಮಾಡ್ತಾ ಇದ್ದಾರೆ. ಕೆಲವರಿಗೆ ಈ ಮ್ಯಾಗಿ ಪ್ರಸಾದದ ಯೋಚನೆ ಇಷ್ಟವಾದರೆ ಇನ್ನು ಕೆಲವರಿಗೆ ಅಷ್ಟೊಂದು ಹಿಡಿಸಲಿಲ್ಲ. ಲಂಗರ್‌ನಲ್ಲಿ ಮ್ಯಾಗಿ ಮಾಡಿ ಬಡಿಸುವುದು ಬೇಕಿತ್ತಾ ಎಂದು ಬಹಳ ಮಂದಿ ಪ್ರಶ್ನಿಸಿದ್ದಾರೆ.

ಈ ಘಟನೆಯು ಹತ್ತು ಹಲವು ಕುತೂಹಲಕಾರಿ ಪ್ರಶ್ನೆಯನ್ನೂ ಹುಟ್ಟು ಹಾಕಿದೆ. ಲಂಗರ್‌ ಅಂದ್ರೆ ಭಕ್ತರಿಗೆ ನೀಡುವ ಆಹಾರ ಅಷ್ಟೆನಾ? ಇಲ್ಲಿ ಒಂದು ನಿರ್ದಿಷ್ಟವಾದ ಆಹಾರವನ್ನೇ ನೀಡಬೇಕಾ ಅಥವಾ ಜನರಿಗೆ ಇಷ್ಟವಾಗುವ ಹೊಟ್ಟೆ ತುಂಬುವ ಯಾವ ಆಹಾರ ಬೇಕಾದರೂ ಕೊಡಬಹುದಾ? ಎನ್ನುವ ಹಲವು ಪ್ರಶ್ನೆಗಳು ಹರಿದಾಡ್ತಾ ಇದೆ. ಸೋಶಿಯಲ್‌ ಮಿಡಿಯಾದಲ್ಲೂ ಈ ಪ್ರಶ್ನೆಗೆ ಬೇರೆ ಬೇರೆ ರೀತಿಯ ಉತ್ತರ ಕೂಡಾ ಬರುತ್ತಿದೆ. ಕೆಲವರು ಸೇವೆಯ ಬಗ್ಗೆ ಮಾತನಾಡಿದರೆ ಇನ್ನು ಕೆಲವರು ಜನರಿಗೆ ಕೊಡುವ ಆಹಾರವೇ ಇಲ್ಲಿ ಮುಖ್ಯ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಈ ಟು ಮಿನಿಟ್‌ ಮ್ಯಾಗಿ ಈಗ ಎಲ್ಲಾ ಕಡೆ ಸುದ್ದಿಯಾಗಿದೆ.

ಎತ್ತ ಸಾಗುತ್ತಿದೆ ಸಂಪ್ರದಾಯ :

ಈ ಲಂಗರ್‌ ಎನ್ನುವುದು ಸಂಪ್ರದಾಯವನ್ನು ಬಿಟ್ಟು ಬೇರೆಯೇ ಟ್ರ್ಯಾಕ್‌ ಹಿಡಿದಿರೋದು ಮಾತ್ರ ಸ್ಪಷ್ಟ. ಇತ್ತೀಚೆಗಷ್ಟೇ ಚಂಡೀಗಢದಲ್ಲಿ ವ್ಯಕ್ತಿಯೊಬ್ಬ ಲಂಗರ್‌ನಲ್ಲಿ ಈ ಐ ಫೋನ್‌ ವಿತರಣೆ ಮಾಡೋದಾಗಿ ಹೇಳಿದ್ದರು. ಬದಲಾವಣೆ ಅನ್ನೋದು ದೇವರು, ಪೂಜೆ, ದಾನ ಎಲ್ಲಾ ಕಡೆ ಕಾಣ್ತಾ ಇದೆ. ಇದು ಒಳ್ಳೆಯದಕ್ಕೋ, ಕೆಟ್ಟದ್ದಕ್ಕೋ ಕಾಲವೇ ಹೇಳಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+