ಈ ಸಚಿನ್ ಸಾಮಾಜಿಕ ಜಾಲ ತಾಣಗಳಲ್ಲಿ ಸಕತ್ ಜನಪ್ರಿಯ

Posted By:
Subscribe to Oneindia Kannada

ಭೋಪಾಲ್, ಆಗಸ್ಟ್ 08: ಯಾರಿಗೆ ಆಗಲಿ ಇವರ ಫೋಟೋ ನೋಡಿದಾಕ್ಷಣ ಹುಬ್ಬೇರುತ್ತದೆ. ನೋಡಲು ಹಾಲಿವುಡ್ ಹೀರೋನಂತೆ ಕಾಣುವ ಈ ಸುಂದರ ಮೈಕಟ್ಟಿನ ಯುವಕ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ತುಂಬಾ ಜನಪ್ರಿಯ. ಇವರ ಹೆಸರು ಸಚಿನ್, ಸಚಿನ್ ಅತುಲ್ಕರ್ ಐಪಿಎಸ್.

ಹೌದು, 22 ವರ್ಷ ವಯಸ್ಸಿಗೆ ಭಾರತೀಯ ಪೊಲೀಸ್ ಸೇವೆಗೆ ಸೇರಿಕೊಂಡ ಸಚಿನ್ ಅವರು ಮಧ್ಯಪ್ರದೇಶದ ಉಜ್ಜಯಿನಿಯ ಎಸ್ಪಿಯಾಗಿದ್ದಾರೆ. ಇದಕ್ಕೂಮುನ್ನ ಸಾಗರ್ ನಲ್ಲಿ ಕಾರ್ಯನಿರ್ವಹಿಸಿದ್ದರು.

Madhya Pradesh's handsome IPS Officer Sachin Atulkar

2007ರಲ್ಲಿ ಸಚಿನ್ ಐಪಿಎಸ್ ತೇರ್ಗಡೆಯಾದ ಸಚಿನ್ ಅವರ ಫೇಸ್ ಬುಕ್ ಪುಟದಲ್ಲಿರುವ ಚಿತ್ರಗಳನ್ನು ನೋಡಿದ ಸಾರ್ವಜನಿಕರು, ಸಾರ್ ನಿಮ್ಮೊಂದಿಗೆ ಒಂದು ಸೆಲ್ಫಿ ಫೋಟೋ ಬೇಕು ಎಂದಿದ್ದಾರೆ. ಉಜ್ಜಯಿನಿಯಲ್ಲಿ ಎಲ್ಲೇ ಹೋದ್ರೂ ಜನರು ಸೆಲ್ಫಿಗಾಗಿ ಅವರ ಹಿಂದೆ ಬೀಳ್ತಾರೆ. ಹುಡುಗಿಯರಿಗಂತೂ ಈ ಪೊಲೀಸ್ ಅಧಿಕಾರಿಯನ್ನು ಒಮ್ಮೆಯಾದ್ರೂ ಭೇಟಿ ಮಾಡಬೇಕು ಎನ್ನುತ್ತಾರೆ.

Madhya Pradesh's handsome IPS Officer Sachin Atulkar
Bengaluru Traffic Police, PSI S Nijalingappa Proves Humanity | Oneindia Kannada

ಇನ್ನೂ ಹಲವಾರು ಮಂದಿ ಚಿಕ್ಕ ವಯಸ್ಸಿನಲ್ಲೇ ಪೊಲೀಸ್ ಇಲಾಖೆ ಸೇರಿದ್ದಕ್ಕೆ ಹೊಗಳಿದ್ದಾರೆ. ಯೋಗ, ಜಿಮ್, ವರ್ಕೌಟ್ ಅಂತಾ ಫಿಟ್ನೆಸ್ ಗೆ ಬೇಕಾದ ಎಲ್ಲಾ ಕಸರತ್ತನ್ನೂ ಈ ಪೊಲೀಸ್ ಅಧಿಕಾರಿ ಮಾಡ್ತಾರೆ. ಜತೆಗೆ ಮಹಾಕಾಳೇಶ್ವರನ ಸನ್ನಿಧಿಯಲ್ಲಿ ಧ್ಯಾನ, ಪೂಜೆ ಮಾಡುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಸಚಿನ್ ಅವರ ಫೇಸ್ ಬುಕ್ (ಸಚಿನ್ ಅತುಲ್ಕರ್) ಪುಟದಲ್ಲಿ ಇನ್ನಷ್ಟು ಚಿತ್ರಗಳಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An IPS officer from Madhya Pradesh has caught the Internet's attention for his dapper look that would give Bollywood stars a run for their money.
Please Wait while comments are loading...