ಪ್ರಯಾಗರಾಜ್‌ಗೆ ಹೋಗುವ ಯಾತ್ರಿಕರಿಗೆ ಉಚಿತ ವಿಮಾನ ಪ್ರಯಾಣ ಸೇವೆ ನೀಡಿದ ಮಧ್ಯಪ್ರದೇಶ

ಭೋಪಾಲ್, ಮೇ. 21: ಮಧ್ಯಪ್ರದೇಶ ಸರ್ಕಾರವು ಪ್ರಯಾಗರಾಜ್‌ಗೆ ಯಾತ್ರಿಕರಾಗಿ ಹೋಗುವ ಹಿರಿಯ ನಾಗರಿಕರಿಗೆ ಉಚಿತ ವಿಮಾನ ಪ್ರಯಾಣ ಸೌಲಭ್ಯವನ್ನು ಆಯೋಜಿಸಿದೆ. ಭಾನುವಾರ, ಮಧ್ಯಪ್ರದೇಶ ಸರ್ಕಾರವು ಸರ್ಕಾರದ ಯೋಜನೆಯಡಿಯಲ್ಲಿ 32 ಹಿರಿಯ ನಾಗರಿಕರನ್ನು ವಿಮಾನದ ಮೂಲಕ ಉಚಿತ ತೀರ್ಥಯಾತ್ರೆಗೆ ಕಳುಹಿಸಿದೆ.

ಇದು ಮೊದಲ ಬಾರಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆಯ ಫಲಾನುಭವಿಗಳು ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಈ ಬಗ್ಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ತಾವೇ ಖುದ್ದಾಗಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಹಿರಿಯ ನಾಗರಿಕರಿಗೆ ಶುಭ ಹಾರೈಸಿದ್ದಾರೆ.

Madhya Pradesh Government Provides Free air Travel to Senior Citizens

ಭೋಪಾಲ್‌ನ ರಾಜಾ ಭೋಜ್ ವಿಮಾನ ನಿಲ್ದಾಣವನ್ನು ತಲುಪಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಎಲ್ಲಾ 32 ಹಿರಿಯ ನಾಗರಿಕರು ಅದರಲ್ಲಿ 24 ಮಂದಿ ಪುರುಷರು ಮತ್ತು ಎಂಟು ಮಹಿಳೆಯರಿಗೆ ಶುಭ ತಿಳಿಸಿದ್ದಾರೆ.

2012 ರಲ್ಲಿ ಬಿಜೆಪಿ ಆಡಳಿತವು ತೀರ್ಥಯಾತ್ರೆಗಳಿಗೆ ರೈಲುಗಳ ಮೂಲಕ ಉಚಿತ ಪ್ರಯಾಣವನ್ನು ಪ್ರಾರಂಭಿಸಿದರೆ, ಈಗ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಉಚಿತ ವಿಮಾನ ಪ್ರಯಾಣಕ್ಕೂ ಅವಕಾಶ ನೀಡುವ ಯೋಜನೆಯನ್ನು ವಿಸ್ತರಿಸಿದ್ದಾರೆ. ಅಧಿಕೃತ ಹೇಳಿಕೆಯ ಪ್ರಕಾರ, ಈ ಯೋಜನೆಯಡಿಯಲ್ಲಿ ಇದುವರೆಗೆ 7, 82,000 ವೃದ್ಧರು 782 ವಿಶೇಷ ರೈಲುಗಳಲ್ಲಿ ತೀರ್ಥಯಾತ್ರೆ ಕೈಗೊಂಡಿದ್ದಾರೆ.

ಮುಖ್ಯಮಂತ್ರಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮೇ 21 ರಂದು ಭೋಪಾಲ್‌ನಿಂದ ಪ್ರಯಾಗ್‌ರಾಜ್‌ವರೆಗೆ ಪ್ರಾರಂಭವಾಗಿರುವ ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆಯ ಪ್ರಯೋಜನಗಳನ್ನು ರಾಜ್ಯದ ಹಿರಿಯರಿಗೆ ತಲುಪುವಂತೆ ನೋಡಿಕೊಳ್ಳುತ್ತಿದ್ದಾರೆ. ಮೇ ನಿಂದ ಜುಲೈ ತಿಂಗಳವರೆಗೆ ಈ ವಿಮಾನ ಪ್ರಯಾಣದ ಯೋಜನೆ ಇರಲಿದೆ.

Madhya Pradesh Government Provides Free air Travel to Senior Citizens

ಅದೇ ಯೋಜನೆಯಲ್ಲಿ, ಮೇ 23 ರಂದು ಅಗರ್ - ಮಾಲ್ವಾ ಜಿಲ್ಲೆಯ ಯಾತ್ರಿಕರು ಇಂದೋರ್ ವಿಮಾನ ನಿಲ್ದಾಣದಿಂದ ಶಿರಡಿಗೆ ತೆರಳುತ್ತಾರೆ. ಮೇ 25 ರಂದು, ಬೇತುಲ್ ಜಿಲ್ಲೆಯ ಯಾತ್ರಾರ್ಥಿಗಳು ಭೋಪಾಲ್ ವಿಮಾನ ನಿಲ್ದಾಣದಿಂದ ಆಗ್ರಾ ವಿಮಾನ ನಿಲ್ದಾಣದ ಮೂಲಕ ಮಥುರಾ - ವೃಂದಾವನಕ್ಕೆ ತೆರಳುತ್ತಾರೆ.

ಮೇ 26 ರಂದು, ದೇವಾಸ್‌ನ ಯಾತ್ರಿಕರು ಇಂದೋರ್ ವಿಮಾನ ನಿಲ್ದಾಣದಿಂದ ಶಿರಡಿಗೆ ಮತ್ತು ಜೂನ್ 3 ರಂದು ಖಾಂಡ್ವಾದ ಯಾತ್ರಿಕರು ಇಂದೋರ್ ವಿಮಾನ ನಿಲ್ದಾಣದಿಂದ ಕೋಲ್ಕತ್ತಾ ಮೂಲಕ ಗಂಗಾಸಾಗರ್‌ಗೆ ತೆರಳುತ್ತಾರೆ.ಪ್ರಯಾಣಿಕರ ಅನುಕೂಲಕ್ಕಾಗಿ ವಿಮಾನ ನಿಲ್ದಾಣದಲ್ಲಿ ಸಹಾಯ ಕೇಂದ್ರವನ್ನು ಸ್ಥಾಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+