ಎಂಪಿ: ಚುನಾವಣೇ ಕಾಲೇ ಕಾಂಗೈ ಬ್ಲೂ ಫಿಲಂ ಸ್ಫೋಟ

ಶಾಸಕ ಸತ್ಯನಾರಾಯಣ ಆಗರ್ಭ ಶ್ರೀಮಂತ ರೈತರಾಗಿದ್ದು, ಹೆಲಿಕಾಫ್ಟರ್ ಒಡೆಯರಾಗಿದ್ದಾರೆ. ನವೆಂಬರ್ 25ರಂದು ಮಧ್ಯಪ್ರದೇಶದ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
16 ಸೆಕೆಂಡುಗಳ ಬ್ಲೂ ಫಿಲಂ ಕ್ಲಿಪ್ ಸತ್ಯನಾರಾಯಣ ಪಟೇಲ್ ಅವರ ಮಾನಮರ್ಯಾದೆಯನ್ನು ಹರಾಜು ಹಾಕಿದೆ. ಶಾಸಕ ಸತ್ಯನಾರಾಯಣ ಅವರು ಮಹಿಳೆಯೊಬ್ಬಳ ಜತೆ ಅಶ್ಲೀಲ ಭಂಗಿಗಳಲ್ಲಿರುವುದು ಕಂಡುಬಂದಿದೆ.
ಮಂಗಳವಾರ ರಾತ್ರಿ ಈ ವಿಡಿಯೋ ಸ್ಫೋಟಗೊಳ್ಳುತ್ತಿದ್ದಂತೆ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ 45 ವರ್ಷದ ಶಾಸಕ ಸತ್ಯನಾರಾಯಣ ಅವರು ವಿಡಿಯೋದಲ್ಲಿರುವ ಖಂಡಿತಾ ತಾನಲ್ಲ ಎಂದು ಗೋಳಾಡಿದ್ದಾರೆ. ಪುತ್ರನನ್ನು ಪಕ್ಕದಲ್ಲಿಯೇ ಕೂಡಿಸಿಕೊಂಡು ಸುದ್ದಿಗೋಷ್ಟಿ ನಡೆಸಿದ ಅವರು ತಮ್ಮ ಪುತ್ರನಾಣೆ ಅಂತಹ ಯಾವುದೇ ಕುಕೃತ್ಯದಲ್ಲಿ ತಾವು ಭಾಗಿಯಾಗಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಆದರೂ Whatsapp ಮೂಲಕ ಮೊಬೈಲುಗಳಲ್ಲಿ ಸದರಿ ವಿಡಿಯೋ ಹರಿದಾಡುತ್ತಿದೆ.
ದೇಪಾಲಪುರ ಕ್ಷೇತ್ರದ ಹಾಲಿ ಶಾಸಕ, ಮತ್ತು ಹಾಲಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಸತ್ಯನಾರಾಯಣ ಪಟೇಲ್ ಅವರು ಇದು ಪ್ರತಿಪಕ್ಷದ ಕುತಂತ್ರ. ವಿರೋಧಿಗಳ ಕೈವಾಡ ಎಂದೆಲ್ಲಾ ಸಮಜಾಯಿಸಿ ನೀಡಿದ್ದಾರಾದರೂ ಮೂಲಗಳ ಪ್ರಕಾರ ಸದರಿ ಸೆಕ್ಸ್ ವಿಡಿಯೋ ದೆಹಲಿಯಲ್ಲಿ ಹೈಕಮಾಂಡ್ ಕೈಗೆ ತಲುಪಿದೆ ಎನ್ನಲಾಗಿದೆ.
ಮಾಧ್ಯಮಗಳ ಕಚೇರಿಗಳಿಗೂ ಸದರಿ ವಿವಾದಾತ್ಮಕ ಸಿ.ಡಿ. ತಲುಪಿವೆ. ಹಾಗಾಗಿ ದೇಪಾಲಪುರ ಕ್ಷೇತ್ರದ ಹಾಲಿ ಶಾಸಕ ಸತ್ಯನಾರಾಯಣ ಪಟೇಲ್ ಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನೀಡುವುದು ಅನುಮಾನವಾಗಿದೆ.












Click it and Unblock the Notifications