ಮಧ್ಯಪ್ರದೇಶ: ಭಿಂಡ್‌ನಲ್ಲಿ ಯುದ್ಧ ಹೆಲಿಕಾಪ್ಟರ್ ಅಪಾಚೆ ತುರ್ತು ಭೂಸ್ಪರ್ಶ
ಭಾರತೀಯ ವಾಯುಪಡೆಯ ಅಪಾಚೆ ಹೆಲಿಕಾಪ್ಟರ್ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಹಳ್ಳಿಯೊಂದರಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಸದ್ಯ ಹೆಲಿಕಾಪ್ಟರ್ ನಲ್ಲಿದ್ದ ಎಲ್ಲಾ ಜನರು ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಭಾರತೀಯ ವಾಯುಸೇನೆ ಮತ್ತು ಜಿಲ್ಲಾಡಳಿತ ತಂಡ ಸ್ಥಳಕ್ಕೆ ತಲುಪಿದೆ.
ಮಾಹಿತಿಯ ಪ್ರಕಾರ, ಹೆಲಿಕಾಪ್ಟರ್ ನಿಯಮಿತ ಹಾರಾಟದಲ್ಲಿ ಕೆಲವು ದೋಷಗಳನ್ನು ಕಂಡು ಬಂದಿವೆ. ಹೀಗಾಗಿ ಅದನ್ನು ಭಿಂಡ್ ಜಿಲ್ಲೆಯ ಹಳ್ಳಿಯೊಂದರ ಜಮೀನಿನಲ್ಲಿ ಇಳಿಸಲಾಗಿದೆ. ಘಟನೆ ನಡೆದ ಕೂಡಲೇ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಜಮಾಯಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಪೈಲಟ್‌ನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಲಿಕಾಪ್ಟರ್ ಅನ್ನು ಶೀಘ್ರದಲ್ಲೇ ಹಾರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
AH-64 ಅಪಾಚೆ ವಿಶ್ವದ ಅತ್ಯಂತ ಸುಧಾರಿತ ಬಹು-ಪಾತ್ರ ಯುದ್ಧ ಹೆಲಿಕಾಪ್ಟರ್ ಆಗಿದೆ. ಭಾರತೀಯ ವಾಯುಪಡೆಯು 22 AH-64E ಅಪಾಚೆ ದಾಳಿ ಹೆಲಿಕಾಪ್ಟರ್‌ಗಳನ್ನು ಹೊಂದಿದೆ. 2020 ರಲ್ಲಿ ಬೋಯಿಂಗ್ ಭಾರತೀಯ ಸೇನೆಗಾಗಿ ಇನ್ನೂ ಆರು ಅಪಾಚೆ ಹೆಲಿಕಾಪ್ಟರ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದೆ.
An Apache AH-64 helicopter of the IAF carried out a precautionary landing near Bhind, during routine operational training. All crew and the aircraft are safe. The rectification party has reached the site. pic.twitter.com/hhd6wSNgT2
— Indian Air Force (@IAF_MCC) May 29, 2023
"ಐಎಎಫ್‌ನ ಅಪಾಚೆ ಎಹೆಚ್-64 ಹೆಲಿಕಾಪ್ಟರ್ ವಾಡಿಕೆಯ ಕಾರ್ಯಾಚರಣೆಯ ತರಬೇತಿಯ ಸಮಯದಲ್ಲಿ ಭಿಂಡ್ ಬಳಿ ಮುನ್ನೆಚ್ಚರಿಕೆಯಾಗಿ ಲ್ಯಾಂಡಿಂಗ್ ಮಾಡಿತು. ಎಲ್ಲಾ ಸಿಬ್ಬಂದಿ ಹಾಗೂ ವಿಮಾನ ಸುರಕ್ಷಿತವಾಗಿದೆ. ವಿಮಾನ ಸರಿಪಡಿಸುವ ತಂಡ ಸ್ಥಳಕ್ಕೆ ತಲುಪಿದೆ" ಎಂದು ಭಾರತೀಯ ವಾಯುಪಡೆ ಟ್ವೀಟ್‌ನಲ್ಲಿ ತಿಳಿಸಿದೆ.












Click it and Unblock the Notifications