ಮಧ್ಯಪ್ರದೇಶದ ಬುಡಕಟ್ಟು ವ್ಯಕ್ತಿ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ ದುಷ್ಕರ್ಮಿ: ಆರೋಪಿ ಬಿಜೆಪಿ ನಾಯಕನೆಂದ ಕಾಂಗ್ರೆಸ್
ಭೋಪಾಲ್, ಜುಲೈ 04: ಆಘಾತಕಾರಿ ಘಟನೆಯೊಂದರಲ್ಲಿ ಮಧ್ಯಪ್ರದೇಶದ ಬುಡಕಟ್ಟು ವ್ಯಕ್ತಿಯ ಮುಖದ ಮೇಲೆ ದುಷ್ಕರ್ಮಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ್ದು ಬೆಳಕಿಗೆ ಬಂದಿದೆ. ವೈರಲ್ ಆಗಿರುವ ವಿಡಿಯೊದಲ್ಲಿನ ಆರೋಪಿ ಬಿಜೆಪಿಯ ಸಕ್ರಿಯ ಮುಖಂಡನೆಂದು ಕಾಂಗ್ರೆಸ್ ಆರೋಪಿಸಿದೆ. ಆಘಾತಕಾರಿ ಕೃತ್ಯದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಜ್ ಅವರು ಟ್ವಿಟ್ಟರ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
'ಆದಿವಾಸಿಗಳ ಹಿತಾಸಕ್ತಿಗಳ ಬಗ್ಗೆ ಸುಳ್ಳು ಮಾತನಾಡುವ ಬಿಜೆಪಿ ನಾಯಕರು ಬುಡಕಟ್ಟು ಬಡವರ ಮೇಲೆ ಈ ರೀತಿಯ ಅಮಾನವೀಯ ಕೃತ್ಯ ಎಸಗಿದ್ದಾರೆ. ಇದು ಅತ್ಯಂತ ಖಂಡನೀಯ ಕೃತ್ಯ' ಎಂದು ಹಫೀಜ್ ಹೇಳಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾನ್ ಅವರನ್ನು ಹಫೀಜ್ ಟ್ಯಾಗ್ ಮಾಡಿದ್ದಾರೆ.

'ಇದು ನಿಮ್ಮ ಬುಡಕಟ್ಟು ಜನಾಂಗದವರ ಬಗೆಗಿನ ಪ್ರೀತಿಯೇ ?? ಇದನ್ನು ಜಂಗಲ್ ರಾಜ್ ಎಂದು ಕರೆಯುತ್ತಾರೆ. ನೀವು ಬಿಜೆಪಿ ಮುಖಂಡನನ್ನು ಏಕೆ ಬಂಧಿಸುತ್ತಿಲ್ಲ? ಆರೋಪಿಯ ಹೆಸರು ಪ್ರವೇಶ್ ಶುಕ್ಲಾ ಎಂದು ಹೇಳಲಾಗುತ್ತಿದೆ. ಆತ ಶಾಸಕ ಕೇದಾರ್ ನಾಥ್ ಶುಕ್ಲಾ ಅವರ ನಿಕಟವರ್ತಿ ಎಂಬುದಾಗಿ ಗೊತ್ತಾಗಿದೆ' ಎಂದು ಚೌಹಾನಂದ್ ಎಂಬುವವರು ಬರೆದುಕೊಂಡಿದ್ದಾರೆ.
ವರದಿಗಳ ಪ್ರಕಾರ, ಆರೋಪಿಯು ಸಿಧಿ ಬಿಜೆಪಿ ಶಾಸಕ ಕೇದಾರ್ ನಾಥ್ ಶುಕ್ಲಾ ಅವರ ನಿಕಟವರ್ತಿ.
ಮತ್ತೊಂದು ಟ್ವಿಟ್‌ನಲ್ಲಿ, ಆರೋಪಿ ಪ್ರವೇಶ್ ಶುಕ್ಲಾ ಕೆಲವು ಪ್ರಮುಖ ಬಿಜೆಪಿ ನಾಯಕರ ಜೊತೆ ಕುಳಿತಿರುವ ಹಲವು ಚಿತ್ರಗಳನ್ನು ಹಫೀಜ್ ಹಂಚಿಕೊಂಡಿದ್ದಾರೆ. 'ಬುಡಕಟ್ಟು ಜನಾಂಗದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಬಿಜೆಪಿ ಮುಖಂಡ ಬಿಜೆಪಿಯ ಹಿರಿಯ ನಾಯಕರೊಂದಿಗಿನ ಚಿತ್ರಗಳಲ್ಲಿದ್ದಾರೆ' ಎಂದು ಹಫೀಜ್ ಬರೆದುಕೊಂಡಿದ್ದಾರೆ.
Caste Hindu Pravesh Shukla pissed on Tribal youth. This incident happened in Madhya Pradesh. pic.twitter.com/68Re6CvsEz
— The Dalit Voice (@ambedkariteIND) July 4, 2023
ಆರಂಭಿಕ ಮಾಹಿತಿಯ ಪ್ರಕಾರ, ಒಂಬತ್ತು ದಿನಗಳ ಹಿಂದೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಕುಬರಿ ಬಜಾರ್‌ನಲ್ಲಿ ಈ ಘಟನೆ ನಡೆದಿದೆ. ಆಪಾದಿತ ಆರೋಪಿ ಪ್ರವೇಶ್ ಶುಕ್ಲಾ ಅವರು ಕುಡಿದ ಮತ್ತಿನಲ್ಲಿದ್ದಾರೆ. ಬಾಯಿಯಲ್ಲಿ ಸಿಗರೇಟು ಹಿಡಿದಿದ್ದಾರೆ. ಅಸಹಾಯಕ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡುಬಂದಿದೆ. ಮೂಲಗಳ ಪ್ರಕಾರ, ಬುಡಕಟ್ಟು ಜನಾಂಗದ ವ್ಯಕ್ತಿ ಮಾನಸಿಕ ಅಸ್ವಸ್ಥರಾಗಿದ್ದಾರೆ.
ಕುಬ್ರಿ ಗ್ರಾಮದ ನಿವಾಸಿಯಾಗಿರುವ ಶುಕ್ಲಾ ಸಕ್ರಿಯ ಬಿಜೆಪಿ ಕಾರ್ಯಕರ್ತ ಎಂದು ಹಲವರು ಬರೆದುಕೊಂಡಿದ್ದಾರೆ.
ಈ ವಿಡಿಯೊದಲ್ಲಿರುವ ವ್ಯಕ್ತಿ ಯಾರು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೆಚ್ಚುವರಿ ಎಸ್ಪಿ ಅಂಜುಲತಾ ಪಟ್ಲೆ ತಿಳಿಸಿದ್ದಾರೆ. ಏತನ್ಮಧ್ಯೆ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಅಪರಾಧಿಯನ್ನು ಬಂಧಿಸಿ ಎನ್ಎಸ್ಎ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದಾರೆ.
इक्कीसवीं शताब्दी में हमारे देश के आदिवासियों के साथ इस तरह का अमानवीय अत्याचार हो रहा हो और हम देख रहे हैं विश्वगुरु बनने का सपना!
— Pawan Khera 🇮🇳 (@Pawankhera) July 4, 2023
इस से ज़्यादा शर्मनाक हम सबके लिए और क्या हो सकता है? pic.twitter.com/Ctjqmsib8c
'ಸಿಧಿ ಜಿಲ್ಲೆಯ ವೈರಲ್ ವೀಡಿಯೊ ನನ್ನ ಗಮನಕ್ಕೆ ಬಂದಿದೆ. ಅಪರಾಧಿಯನ್ನು ಬಂಧಿಸಲು ಮತ್ತು ಕಠಿಣ ಕ್ರಮ ಕೈಗೊಳ್ಳಲು ನಾನು ಪೊಲೀಸರಿಗೆ ಸೂಚನೆ ನೀಡಿದ್ದೇನೆ' ಎಂದು ಚೌಹಾಣ್ ಟ್ವೀಟ್ ಮಾಡಿದ್ದಾರೆ.
ದೆಹಲಿಯ ಎಎಪಿ ಶಾಸಕ ನರೇಶ್ ಬಲ್ಯಾನ್ ಕೂಡ ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
'ಈ ವೀಡಿಯೋ ಮಧ್ಯಪ್ರದೇಶದ್ದು ಎಂದು ಹೇಳಲಾಗಿದ್ದು, ಈ ವ್ಯಕ್ತಿ ಬಿಜೆಪಿ ಶಾಸಕರ ನೇರ ಸಂಬಂಧಿ ಎಂಬ ಮಾಹಿತಿ ಲಭ್ಯವಾಗಿದೆ. ಮುಖ್ಯಮಂತ್ರಿ ಶಿವರಾಜ್ ಚವ್ಹಾನ್ ಅವರೇ, ಈ ದೆವ್ವವು ಆ ಬಡವನ ಮುಖದ ಮೇಲೆ ಅಲ್ಲ. ನಿಮ್ಮ ವ್ಯವಸ್ಥೆಯ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದೆ. ಆ ಬಡವನಿಗೆ ಯಾರೂ ತೊಂದರೆ ಕೊಡಬಾರದು. ಈ ಜವಾಬ್ದಾರಿ ನಿಮ್ಮ ಮೇಲಿದೆ' ಎಂದು ಬಲ್ಯಾನ್ ಟ್ವೀಟ್ ಮಾಡಿದ್ದಾರೆ.
ಮಧ್ಯಪ್ರದೇಶದಲ್ಲಿ ಬಡ ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಬಿಜೆಪಿ ಯುವ ಮುಖಂಡ ಪ್ರವೇಶ್ ಶುಕ್ಲಾ ಅವರ ಈ ಕಿಡಿಗೇಡಿತನ ಮತ್ತು ದೌರ್ಜನ್ಯ ಸಹಿಸಲಾಗದು.#ಮಧ್ಯಪ್ರದೇಶ ಸರ್ಕಾರ ಪ್ರವೇಶ ಶುಕ್ಲಾ ವಿರುದ್ಧ ಎಸ್ಸಿ ಎಸ್ಟಿ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು. #ArrestPraveshShukla pic.twitter.com/0uvD7rhCLm
— Sudarshan Jayaramu (@sudarshanunique) July 4, 2023












Click it and Unblock the Notifications