ಬಿಜೆಪಿ ಮೇಲೆ ಪಿಸಿ ಸರ್ಕಾರ್ ಜಾದೂ ಪ್ರಯೋಗ
ಕೋಲ್ಕತಾ,
ಮಾರ್ಚ್ 1: ಪಿಸಿ ಸರ್ಕಾರ್ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. ಅದೇ ಜಗದ್ವಿಖ್ಯಾತ ಮ್ಯಾಜಿಶಿಯನ್ ಪ್ರದೀಪ್ ಚಂದ್ರ ಸರ್ಕಾರ್. ಇವರು ಈಗ ರಾಜಕೀಯ ಜಾದೂ ಮಾಡಲು ಲೋಕಸಭಾ ಚುನಾವಣೆ ಕಣಕ್ಕಿಳಿದಿದ್ದಾರೆ. id="toptextpromo"> id='are-slot-1' class='oiad oi-axt oiadv'>ಹೌದು,
ಮೊನ್ನೆ ಶಿವರಾತ್ರಿಯಂದು ಬಿಜೆಪಿ ಬಿಡುಗಡೆ ಮಾಡಿರುವ ಮೊದಲ ಸುತ್ತಿನ ಅಭ್ಯರ್ಥಿಗಳ ಪಟ್ಟಿಯಲ್ಲಿ ಇವರೂ ಕಾಣಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ 67 ವರ್ಷದ ಪಿಸಿ ಸರ್ಕಾರ್ ಜೂನಿಯರ್ ಅವರು ಕೋಲ್ಕತಾದ ಹೊರವಲಯದಲ್ಲಿರುವ ಬರಸಾತ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.id='are-slot-2' class='oiad oi-axt oiadv'>

ಬಾರಿ ಮತದಾರರೇ ನಿಜವಾದ ಜಾದೂ ಮಾಡುತ್ತಾರೆ!:
ಇಂತಿಪ್ಪ ಪಿಸಿ ಸರ್ಕಾರ್ ಅವರನ್ನು ಯಾವ ಗುರಿ ಸಾಧನೆಗಾಗಿ, ಏನು ಮ್ಯಾಜಿಕ್ ಮಾಡಲು ರಾಜಕೀಯಕ್ಕೆ ಬರುತ್ತಿದ್ದೀರಿ? ಎಂದು ಕೇಳಿದ ಮೊದಲ ಪ್ರಶ್ನೆಗೆ 'ಕೆಟ್ಟ ರಾಜಕಾರಣಿಗಳನ್ನು ಮಾಯ ಮಾಡಿಬಿಡುವೆ. ಅಬ್ರಕ ಡಬ್ರಾ' ಎಂದು ತಮ್ಮ ಮುಖದ ಮೇಲಿನ ಮಾಸದ ನಗೆಯೊಂದಿಗೆ ಕಣ್ಮಿಟಿಕಿಸುತ್ತಾರೆ. ಆದರೆ ಅದು ಅಸಾಧ್ಯ ಎಂಬುದು ಬೇರೆ ಎಲ್ಲರಿಗಿಂತ ಅವರಿಗೇ ಚೆನ್ನಾಗಿ ಗೊತ್ತು. ಹಾಗಾಗಿಯೇ 'ಈ ಬಾರಿ ಮತದಾರರೇ ನಿಜವಾದ ಜಾದೂ ಮಾಡುತ್ತಾರೆ, ನೋಡುತ್ತಿರಿ' ಎಂದು ಮಾರ್ಮಿಕವಾಗಿ ಹೇಳುತ್ತಾರೆ.

ಮತದಾರರ ಮೇಲೆ ಸರ್ಕಾರ್ ಜಾದೂ
ಮತದಾರರ ಮೇಲೆ ಸರ್ಕಾರ್ ಜಾದೂ: ಆದರೂ ಇಂದಿನ ಕುಲಗೆಟ್ಟ ರಾಜಕೀಯದಲ್ಲಿ ಪಿಸಿ ಸರ್ಕಾರ್ ಅವರಂಥವರು ಜಾದೂ ಮಾಡಬೇಕಾಗಿದೆ. ಹಾಗಾಗಿ ಬಿಜೆಪಿ ಪಿಸಿ ಸರ್ಕಾರ್ ಗೆ ಮಣೆ ಹಾಕಿದೆ.

ಮೋದಿ ಮೇಲೆ ಸರ್ಕಾರ್ ಮೋಡಿ:
ಮೋದಿ ಮೇಲೆ ಸರ್ಕಾರ್ ಮೋಡಿ: ಮುಂದಿನ ಚುನಾವಣೆ ಬಳಿಕ ಮೋದಿ ಮತ್ತು ಮಮತಾ ಬ್ಯಾನರ್ಜಿ ಇಬ್ಬರೂ ರಾಜಕೀಯದಲ್ಲಿ ಕೈಜೋಡಿಸುವುದು ಖಂಡಿತ. ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪಶ್ಚಿಮ ಬಂಗಾಳದ ಅಭಿವೃಧಿಗೆ ನೀರೆರೆಯಲಿದ್ದಾರೆ ಎನ್ನುತ್ತಾರೆ ಪಿಸಿ ಸರ್ಕಾರ್.

ರಾಜಕೀಯಕ್ಕೆ/ ಬಿಜೆಪಿಗೆ ಸೇರಿದ್ದಾದರೂ ಏಕೆ?
ನನಗೆ ಗಾಡಾಂಧಕಾರದ ಕಾಡಿನಲ್ಲಿ ಹೋಗುತ್ತಿದ್ದ ಅನುಭವವಾಯ್ತು. ಯಾರದಾದರೂ ಊರುಗೋಲು ಸಿಗುತ್ತಾದಾ ಎಂದು ನೋಡಿದೆ. ಅನೇಕ ಸ್ನೇಹದ 'ಹಸ್ತ'ಗಳು ನನ್ನ ಕಡೆ ಚಾಚಿದ್ದವು. ಆದರೆ ಅವೇ ಕುಂಟುತ್ತಾ/ ತೆವಳುತ್ತಾ ಸಾಗುತ್ತಿರುವುದು ನನ್ನ ಗಮನಕ್ಕೆ ಬಂದಿತು. ಜನರ ಅನುಭವವೂ ಇದೇ ಆಗಿದೆ. ಬಿಜೆಪಿ ಪಕ್ಷವೊಂದೇ ನಮ್ಮೆಲ್ಲರ ಆಶಾಕಿರಣ. ಹಾಗಾಗಿ, ಬಿಜೆಪಿ ಸೇರಿದ್ದೇನೆ. ಗುಜರಾತಿನಲ್ಲಿ ಮೋದಿ ಇಂದ್ರಜಾಲಕ್ಕೆ ಮನ ಸೋತಿದ್ದೇನೆ' ಎಂದು ಮೋಡಿ ಮಾತಿನಲ್ಲಿ ಸರ್ಕಾರ್ ವಿವರಿಸಿದರು.












Click it and Unblock the Notifications