ರಾಹುಲ್ ಎಫೆಕ್ಟ್: ಸಬ್ಸಿಡಿ ಸಿಲಿಂಡರ್‌ ವರ್ಷಕ್ಕೆ 12ಕ್ಕೇರಿತು!

Subsidised LPG cylinders supply increased from 9 to 12- Veerappa Moily
ನವದೆಹಲಿ, ಜ.17:ಲೋಕಸಭೆ ಚುನಾವಣೆ ನಿಮಿತ್ತ ರಾಹುಲ್ ಗಾಂಧಿ ಅವರು ಇಂದು ಅಧಿಕೃತವಾಗಿ ಪಕ್ಷದ ಪ್ರಚಾರ ಸಾರಥ್ಯವಹಿಸುತ್ತಿದ್ದಂತೆ ಎಐಸಿಸಿ ಕಾಂಗ್ರೆಸ್ ಅಧಿವೇಶನದಲ್ಲಿ ಬೆಂಕಿ-ಬಿರುಗಾಳಿ ಭಾಷಣ ಮಾಡಿದ ಏಟಿಗೆ ಕೇಂದ್ರ ಪೆಟ್ರೋಲಿಯಂ ಸಚಿವ ಎಂ ವೀರಪ್ಪ ಮೊಯ್ಲಿ ಅವರು ರಾಹುಲ್ ಬೇಡಿಕೆಯಂತೆ ಸಬ್ಸಿಡಿ ದರದಲ್ಲಿ ಒದಗಿಸುವ ಎಲ್‌ಪಿಜಿ ಸಿಲಿಂಡರುಗಳ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ.

ಮೊನ್ನೆಯಷ್ಟೇ ಯಾವುದೇ ಕಾರಣಕ್ಕೂ ಸಬ್ಸಿಡಿ ಎಲ್‌ಪಿಜಿ ಸಿಲಿಂಡರುಗಳ ಸಂಖ್ಯೆಯನ್ನು ವರ್ಷಕ್ಕೆ 9ರಿಂದ 12ಕ್ಕೇರಿಸುವ ಸಾಧ್ಯತೆಯಿಲ್ಲ ಎಂದು ಕೇಂದ್ರ ಸಚಿವ ಮೊಯ್ಲಿ ಸ್ಪಷ್ಟಪಡಿಸಿದ್ದರು. ( ಇದನ್ನು ಓದಿ ಅಡುಗೆ ಸಿಲಿಂಡರ್‌ ಸಂಖ್ಯೆ 12ಕ್ಕೇರಿಸುವ ನಿರೀಕ್ಷೆ )

ಆದರೆ ಇಂದು ದಿಢೀರನೆ ಕೇಂದ್ರ ಯುಪಿಎ ಸರಕಾರದ ನೀತಿ ಬದಲಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಇನ್ಮುಂದೆ ವರ್ಷಕ್ಕೆ 12 ಸಬ್ಸಿಡಿ ಎಲ್‌ಪಿಜಿ ಸಿಲಿಂಡರುಗಳನ್ನು ಪೂರೈಸುವುದಾಗಿ ಹೇಳಿದ್ದಾರೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ಆದೇಶ ನೀಡುವುದಾಗಿಯೂ ತಿಳಿಸಿದ್ದಾರೆ. [ರಾಹುಲ್ ಭಾಷಣದ ಮುಖ್ಯಾಂಶಗಳು]

ಈ ಹಿಂದೆಯೂ ರಾಹುಲ್ ಗಾಂಧಿ ಅಣತಿಯಂತೆ ಕೇಂದ್ರ ಯುಪಿಎ ಸರಕಾರವು ತನ್ನ ಹಿಂದಿನ ನೀತಿಗೆ ವಿರುದ್ಧವಾಗಿ ಕೆಲವು ಮಹತ್ವದ ಮಾರ್ಪಾಡುಗಳನ್ನು ಮಾಡಿರುವುದು ಗಮನಾರ್ಹವಾಗಿದೆ. ಏನೇ ಆಗಲಿ ಇನ್ಮುಂದೆ ವರ್ಷಕ್ಕೆ 12 ಸಬ್ಸಿಡಿ ಸಿಲಿಂಡರುಗಳು ಸಿಗುತ್ತವಲ್ಲಾ ಎಂದು ಗ್ರಾಹಕರು ಸಂತುಷ್ಟರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+