LPG Price Hike: ಎಲ್‌ಪಿಜಿ ಸಿಲಿಂಡರ್ ಬೆಲೆ ಭಾರೀ ಏರಿಕೆ ಸಾಧ್ಯತೆ, ಕಾರಣವೇನು?
ಇನ್ನೇನು ಈ ವರ್ಷ ಮುಗಿಯಲು ಒಂದು ತಿಂಗಳಷ್ಟೇ ಬಾಕಿ ಇದೆ. ಆದರೆ ಹೊಸ ವರ್ಷಕ್ಕೂ ಮೊದಲೇ ಎಲ್‌ಪಿಜಿ ಬಳಕೆದಾರರಿಗೆ ಶಾಕ್ ಕಾದಿದೆ. ವರದಿಗಳ ಪ್ರಕಾರ ಡಿಸೆಂಬರ್ ತಿಂಗಳಿನಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಗಳು ಭಾರೀ ಏರಿಕೆ ಕಾಣುವ ಸಾಧ್ಯತೆ ಇದೆ. ಹೀಗಾಗಿ ನಿಮ್ಮ ಮನೆಯಲ್ಲಿ ಗ್ಯಾಸ್ ಖಾಲಿಯಾಗಿದ್ದಲ್ಲಿ, ತಕ್ಷಣವೇ ಮತ್ತೊಂದು ಬುಕಿಂಗ್ ಮಾಡುವುದು ಒಳ್ಳೆಯದು ಎಂದು ಹೇಳಲಾಗುತ್ತಿದೆ. ಎಲ್‌ಪಿಜಿ ದರ ಏರಿಕೆಗೆ ಕಾರಣವೇನು ಎಂಬ ಮಾಹಿತಿ ಇಲ್ಲಿದೆ.
ಕೇಂದ್ರ ಸರ್ಕಾರವು ಎಲ್‌ಪಿಜಿ ಸಿಲಿಂಡರ್ ಅನ್ನು ಸಬ್ಸಿಡಿ ಮೂಲಕ ಮನೆ ಮನೆಗೆ ವಿತರಣೆ ಮಾಡುತ್ತಿದೆ. ಈ ಸಬ್ಸಿಡಿಯಿಂದಾಗಿ ಈಗಾಗಲೇ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಭಾರಿ ಆರ್ಥಿಕ ಒತ್ತಡ ಹಾಗೂ ನಷ್ಟ ಎದುರಿಸುತ್ತಿವೆ. ಹೀಗಾಗಿ ಮುಂದಿನ ತಿಂಗಳುಗಳಲ್ಲಿ ಸಬ್ಸಿಡಿ ಹಣ ಬಿಡುಗಡೆ ಮಾಡಲು ಸಹ ಸರ್ಕಾರ ಸಜ್ಜಾಗಿದೆ.

ತೈಲ ಮಾರುಕಟ್ಟೆ ಕಂಪನಿಗಳು ಎದುರಿಸುತ್ತಿರುವ ಈ ಆರ್ಥಿಕ ನಷ್ಟ ಸರಿದೂಗಿಸಲು ಬೆಲೆಗಳು ಏರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸರ್ಕಾರವು ಈಗಾಗಲೇ 30,000 ಕೋಟಿ ರೂಪಾಯಿ ಸಬ್ಸಿಡಿ ಪರಿಹಾರ ನೀಡಲಿದೆ. ಅಲ್ಲದೆ ಇತ್ತೀಚೆಗಷ್ಟೇ ಅಮೇರಿಕಾರದಿಂದಲೂ ಎಲ್‌ಪಿಜಿ ಆಮದು ಮಾಡಿಕೊಳ್ಳಲು ಭಾರತ ಸರ್ಕಾರ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಸಿಲಿಂಡರ್‌ಗಳ ವೆಚ್ಚ ಹೆಚ್ಚಾಗಿ ಬೆಲೆಗಳು ಏರುವ ನಿರೀಕ್ಷೆ ಇದೆ. ಇದರಿಂದ ಎಲ್‌ಪಿಜಿ ಬಳಕೆದಾರರ ಜೇಬು ಸುಡುವ ಸಾಧ್ಯತೆ ಇದೆ.
ನಷ್ಟ ಸರಿದೂಗಿಸಲು ಬೆಲೆ ಹೆಚ್ಚಳ?
ಸರ್ಕಾರವು ಮುಂಬರುವ ತಿಂಗಳುಗಳಲ್ಲಿ ಸಬ್ಸಿಡಿಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿರುವ ಸಮಯದಲ್ಲೇ ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಕಡಿಮೆ ವಸೂಲಿಯಿಂದ ಭಾರೀ ಆರ್ಥಿಕ ಒತ್ತಡವನ್ನು ಎದುರಿಸುತ್ತಿವೆ ಎಂದು ನುವಾಮಾ ರಿಸರ್ಚ್‌ನ ವರದಿ ಹೇಳಿದೆ. ಈ ತೈಲ ಕಂಪನಿಗಳಿಗೆ ಎಲ್‌ಪಿಜಿ ಸಂಬಂಧಿತ ನಷ್ಟವು ಪ್ರಸ್ತುತ 53,700 ಕೋಟಿ ರೂಪಾಯಿಗೂ ಹೆಚ್ಚು ಎಂದು ವರದಿ ತಿಳಿಸಿದೆ. ಹೀಗಾಗಿ ಸರ್ಕಾರದಿಂದ 12 ಕಂತುಗಳಲ್ಲಿ 30,000 ಕೋಟಿ ರೂಪಾಯಿಗಳ ಸಬ್ಸಿಡಿ ಪಡೆಯುವ ಸಾಧ್ಯತೆಯಿದೆ. ಈ ಸಮಾನ ಮಾಸಿಕ ಕಂತುಗಳನ್ನು ನವೆಂಬರ್ ತಿಂಗಳಿನಿಂದಲೇ ಪ್ರಾರಂಭಿಸಲು ಯೋಜಿಸಲಾಗಿದೆ. ಈ ಹಣ ಬಿಡುಗಡೆಯಾದ ನಂತರ ನೇರವಾಗಿ ಆದಾಯವಾಗಿ ದಾಖಲಾಗುತ್ತದೆ.
ಸಾಮಾನ್ಯವಾಗಿ ಚಳಿಗಾಲದ ತಿಂಗಳುಗಳಲ್ಲಿ ದಿನಬಳಕೆಯ ಎಲ್‌ಪಿಜಿ ಬೆಲೆಗಳು ಹೆಚ್ಚಾಗುತ್ತವೆ. ಸಬ್ಸಿಡಿ ಅಸ್ತಿತ್ವದಲ್ಲಿರುವ ಸಂಚಿತ ನಷ್ಟಗಳಲ್ಲಿ ಕೇವಲ ಶೇಕಡಾ 56ರಷ್ಟು ಮಾತ್ರವೇ ಭರಿಸಲಿದ್ದು, ಸಬ್ಸಿಡಿ ಬೆಂಬಲದೊಂದಿಗೆ ಕಂಪನಿಗಳಿಗೆ ಹಣಕಾಸಿನ ಅಂತರವು ಹೆಚ್ಚಾಗುವ ಸಾಧ್ಯತೆಯಿದೆ. ಎಲ್‌ಪಿಜಿ ಕಡಿಮೆ ಚೇತರಿಕೆ ಎಂದರೆ ಅದನ್ನು ಆಮದು ಮಾಡಿಕೊಳ್ಳುವ ಅಥವಾ ಸೋರ್ಸಿಂಗ್ ಮಾಡುವ ವೆಚ್ಚವು ಗ್ರಾಹಕರಿಗೆ ಲಭ್ಯವಿರುವ ಚಿಲ್ಲರೆ ಬೆಲೆಗಿಂತ ಹೆಚ್ಚಾದಾಗ ಉಂಟಾಗುವ ನಷ್ಟವಾಗಿದೆ. ಈ ನಷ್ಟ ಸರಿದೂಗಿಸಲು ಎಲ್‌ಪಿಜಿ ದರಗಳನ್ನು ಕೊಂಚ ಏರಿಸಬಹುದು ಎಂದು ವರದಿಯಾಗಿದೆ.












Click it and Unblock the Notifications