Breaking; ಸಿಲಿಂಡರ್‌ ದರ ಏರಿಕೆ, ಕೇಂದ್ರಕ್ಕೆ ರಾಹುಲ್ ಟ್ವೀಟ್ ಬಾಣ

ನವದೆಹಲಿ, ಮೇ 08; ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ದರ ಶನಿವಾರ ಏರಿಕೆಯಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ಸಿಲಿಂಡರ್‌ ದರದ ಏರಿಕೆಯ ವಿಚಾರದಲ್ಲಿ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡುತ್ತಿದೆ.

ಭಾನುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಲಿಂಡರ್ ದರ ಏರಿಕೆಯ ವಿಚಾರದಲ್ಲಿ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

2014ರಲ್ಲಿ ಕಾಂಗ್ರೆಸ್ ಇದ್ದಾಗ ಸಿಲಿಂಡರ್ ದರ 410 ರೂ. ಇತ್ತು. 827 ಸಬ್ಸಿಡಿ ಇತ್ತು. 2022ರಲ್ಲಿ ಬಿಜೆಪಿ ಇರುವಾಗ 999 ರೂ. ಇದೆ. ಸಬ್ಸಿಡಿ ಸೊನ್ನೆಯಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

LPG Price Hike Rahul Gandhi Attack On Modi Govt

2 ಸಿಲಿಂಡರ್‌ಗಳ ಬೆಲೆಗೆ ಈಗ 1 ಸಿಲಿಂಡರ್ ಸಿಗುತ್ತಿದೆ. ಕೇವಲ ಕಾಂಗ್ರೆಸ್‌ ಪಕ್ಷ ಬಡವರು & ಮಧ್ಯಮ ವರ್ಗದವರ ಹಿತ ಕಾಪಾಡಲಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಶನಿವಾರ ಗೃಹ ಬಳಕೆಯ ಸಿಲಿಂಡರ್‌ಗಳ ದರದಲ್ಲಿ 50 ರೂ. ಹೆಚ್ಚಳ ಮಾಡಲಾಗಿದೆ. ಹೊಸ ದರದ ಬಳಿಕ ಗೃಹ ಬಳಕೆ ಸಿಲಿಂಡರ್‌ಗಳ ಬೆಲೆ 999.50 ರೂ. ಆಗಿದೆ.

LPG Price Hike Rahul Gandhi Attack On Modi Govt

ಕಳೆದ ಭಾನುವಾರ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ದರವನ್ನು ಏರಿಕೆ ಮಾಡಲಾಗಿತ್ತು. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಇದರಿಂದ ಮತ್ತಷ್ಟು ಹೊರೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+