LPG Price: ಡಿಸೆಂಬರ್‌ 1ರಿಂದಲೇ ಎಲ್‌ಪಿಜಿ ಸಿಲಿಂಡರ್‌ ದರ ಹೆಚ್ಚಳ ಸಾಧ್ಯತೆ

ನವೆಂಬರ್‌ ತಿಂಗಳು ಇನ್ನೇನು ಎರಡು ದಿನಗಳಲ್ಲಿ ಮುಗಿದು ಡಿಸೆಂಬರ್‌ಗೆ ಕಾಲಿಡುತ್ತಿದ್ದೇವೆ. ಸಾಮಾನ್ಯವಾಗಿ ಪ್ರತಿ ತಿಂಗಳ ಮೊದಲ ದಿನವೇ ಎಲ್‌ಪಿಜಿ ಸಿಲಿಂಡರ್‌ ದರಗಳು ಬದಲಾಗುತ್ತವೆ. ಸದ್ಯ ಬೆಳೆ ಇಳಿಕೆಯಿಂದ ನೆಮ್ಮದಿಯಾಗಿದ್ದ ಎಲ್‌ಪಿಜಿ ಬಳಕೆದಾರರಿಗೆ ಡಿಸೆಂಬರ್‌ ಆರಂಭದಿಂದಲೇ ದೊಡ್ಡ ಶಾಕ್‌ ಕಾದಿದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರದ ತೆಗೆದುಕೊಂಡಿರುವ ಇತ್ತೀಚಿನ ಮಹತ್ವದ ನಿರ್ಣಯಗಳಿಂದಾಗಿ ಡಿಸೆಂಬರ್‌ 1ರಿಂದಲೇ ಎಲ್‌ಪಿಜಿ ದರ ಭಾರೀ ಹೆಚ್ಚಾಗುವ ಸುಳಿವು ಸಿಕ್ಕಿದೆ.

ಕೇಂದ್ರ ಸರ್ಕಾರವು ಎಲ್‌ಪಿಜಿ ಸಿಲಿಂಡರ್‌ ವಿಚಾರದಲ್ಲಿ ಮಹತ್ವದ ನಿರ್ಧಾರವೊಂದನ್ನು ಇತ್ತೀಚೆಗೆ ತೆಗೆದುಕೊಂಡಿತ್ತು. ಆದರೆ ಇದರಿಂದ ತೈಲ ಮಾರುಕಟ್ಟೆ ಕಂಪನಿಗಳಿಗೆ ಭಾರೀ ಹೊರೆಯಾಗಲಿದ್ದು, ಕ್ರಮೇಣ ಎಲ್‌ಪಿಜಿ ಗ್ರಾಹಕರ ಮೇಲೂ ಪರಿಣಾಮ ಬೀರಲಿದೆ. ಎಲ್‌ಪಿಜಿ ದರ ಹೆಚ್ಚಿಸುವುದು ಅನಿವಾರ್ಯ ಎಂದು ಹೇಳಲಾಗುತ್ತಿದೆ.

LPG Cylinder Price Big Hike Expected From December

ಹೌದು, ಭಾರತ ಸರ್ಕಾರವು ಮುಂದಿನ ಒಂದು ವರ್ಷದವರೆಗೆ ಅಮೆರಿಕದಿಂದ ಎಲ್‌ಪಿಜಿ ಆಮದು ಮಾಡಿಕೊಳ್ಳುವ ಮಹತ್ವ ಒಪ್ಪಂದ ಮಾಡಿಕೊಂಡಿದೆ. ಆದರೆ ಈ ಆಮದು ಮಾಡಿಕೊಳ್ಳುವುದರಿಂದ ತೈಲ ಮಾರುಕಟ್ಟೆ ಕಂಪನಿಗಳಿಗೆ ದುಬಾರಿಯಾಗಬಹುದು ಎನ್ನಲಾಗಿದೆ. ಅಮೆರಿಕದೊಂದಿಗೆ ದೀರ್ಘಾವಧಿಯ ಎಲ್‌ಪಿಜಿ ಖರೀದಿ ಒಪ್ಪಂದವು ಸಕಾರಾತ್ಮಕ ಕ್ರಮವಾಗಿದ್ದರೂ, ಹೆಚ್ಚಿನ ದೂರ ಹಾಗು ಸರಕು ಸಾಗಣೆ ವೆಚ್ಚಗಳು ತೈಲ ಮಾರುಕಟ್ಟೆ ಕಂಪನಿಗಳಿಗೆ ಅಲ್ಪಾವಧಿಯಲ್ಲಿ ಸ್ವಲ್ಪ ದುಬಾರಿಯಾಗಬಹುದು ಎಂದು ಹೇಳಲಾಗುತ್ತಿದೆ.

ಎಲ್‌ಪಿಜಿ ಆಮದು ವೆಚ್ಚ ಹೆಚ್ಚು

ಭಾರತವು ಸದ್ಯ ದ್ರವೀಕೃತ ಪೆಟ್ರೋಲಿಯಂ ಅನಿಲಕ್ಕಾಗಿ (ಎಲ್‌ಪಿಜಿ) ಆಮದಿನ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ. ದೇಶೀಯ ಉತ್ಪಾದನೆಯಲ್ಲಿ ಸ್ಥಿರವಾದ ಬೆಳವಣಿಗೆ ಇದ್ದರೂ ಸಾಗಣೆಗಳು ಬೇಡಿಕೆಯ ಶೇ 60ರಷ್ಟನ್ನು ಪೂರೈಸುತ್ತವೆ. ಕ್ರಿಸಿಲ್ ವರದಿಯ ಪ್ರಕಾರ ಎಲ್‌ಪಿಜಿಗಾಗಿ ಆಮದು ಅವಲಂಬನೆಯು 2025ರ ಆರ್ಥಿಕ ವರ್ಷದಲ್ಲಿ ಶೇ 66ಕ್ಕೆ ಏರಿದೆ.

ಇತ್ತೀಚಿನ ಭಾರತ-ಅಮೇರಿಕ ಒಪ್ಪಂದವು ವಾರ್ಷಿಕವಾಗಿ 2.2 ಮಿಲಿಯನ್ ಟನ್ ಎಲ್‌ಪಿಜಿ ಆಮದು ಮಾಡಿಕೊಳ್ಳಲು ಉದ್ದೇಶಿಸಿದೆ. ಒಟ್ಟಾರೆ ಇದು ಮಧ್ಯಪ್ರಾಚ್ಯ ಎಲ್‌ಪಿಜಿ ಉತ್ಪಾದಕರ ಮೇಲಿನ ಹಲವು ವರ್ಷಗಳ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಒಪ್ಪಂದದ ಕಾರ್ಯತಂತ್ರಗಳು ಅನುಕೂಲಕರವಾಗಿದ್ದರೂ ಸರಕು ಸಾಗಣೆ ವೆಚ್ಚ ಹೆಚ್ಚಾಗಲಿದೆ. ಇದು ತೈಲ ಮಾರುಕಟ್ಟೆ ಕಂಪನಿಗಳ ಆರ್ಥಿಕತೆಗೆ ತುಸು ಕಷ್ಟವೂ ಆಗಲಿದೆ ಎಂದು ಅಂದಾಜಿಸಲಾಗಿದೆ. ಈ ಹೊರೆ ತಗ್ಗಿಸಲು ಎಲ್‌ಪಿಜಿ ಮಾರಾಟದ ದರವನ್ನು ಏರಿಸುವ ಸಾಧ್ಯತೆಯೂ ಇದೆ.

ಮೂಲ ಮಾರುಕಟ್ಟೆಯ ಹೆಚ್ಚಿನ ಭಾಗವು ಈಗ ಅಮೇರಿಕಾಗೆ ಸ್ಥಳಾಂತರಗೊಳ್ಳುವುದರಿಂದ, ಇದು ಸಾಂದ್ರತೆಯ ಅಪಾಯಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಆಮದು ಅವಕಾಶವನ್ನು ಮತ್ತಷ್ಟು ವಿಸ್ತರಿಸುತ್ತದೆ. ಸೌದಿ ಅರೇಬಿಯಾದ ಎಲ್‌ಪಿಜಿ ಒಪ್ಪಂದದ ಬೆಲೆ ಕೂಡ ಕಡಿಮೆಯಾಗುತ್ತಿದ್ದು, ಜಾಗತಿಕ ಬೇಡಿಕೆ ಕುಸಿಯುತ್ತಿರುವುದರಿಂದ ಕನಿಷ್ಠ ಮಟ್ಟ ತಲುಪಿದೆ. ಇದು ಭಾರತ ಸೇರಿದಂತೆ ಏಷ್ಯಾ-ಪೆಸಿಫಿಕ್ ಪ್ರದೇಶದ ಎಲ್‌ಪಿಜಿ ಆಮದುದಾರರಿಗೆ ಎರಡು ಸ್ಪರ್ಧಾತ್ಮಕ ಬೆಲೆ ಆಯ್ಕೆಗಳ ಅವಕಾಶ ನೀಡಿದೆ. ಹೀಗಾಗಿ ಎಲ್‌ಪಿಜಿ ದರಗಳು ಏರಲಿದೆಯೇ ಎಂಬುದು ಇನ್ನೆರಡು ದಿನಗಳಲ್ಲಿ ತಿಳಿಯಲಿದೆ. ಸದ್ಯ ಎಲ್‌ಪಿಜಿ ಗ್ರಾಹಕರಿಗೆ ಢವಢವ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+