LPG-Aadhar linking: ಎಲ್‌ಪಿಜಿ-ಆಧಾರ್ ಜೋಡಣೆಗೆ ಯಾವುದೇ ಗಡುವು ಇಲ್ಲ ಎಂದ ಪೆಟ್ರೋಲಿಯಂ ಸಚಿವ
ನವದೆಹಲಿ, ಜುಲೈ. 10: ಎಲ್‌ಪಿಜಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಆದೇಶಿಸಲಾಗಿದೆ. ಹೀಗಾಗಿ ಇ-ಕೆವೈಸಿ ದೃಢೀಕರಣಕ್ಕಾಗಿ ಗ್ಯಾಸ್ ಏಜೆನ್ಸಿಗಳಲ್ಲಿ ಉದ್ದನೆಯ ಸರತಿ ಸಾಲುಗಳಲ್ಲಿ ನಿಂತು ನಿಂತು ಜನ ಹಿಂಸೆ ಅನುಭವಿಸುತ್ತಿದ್ದಾರೆ. ಇ ಕೆವೈಸಿ ಮಾಡಲು ತಿಳಿಸಿದ ಸರ್ಕಾರಕ್ಕೆ ಗ್ರಾಹಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಇದರ ಬೆನ್ನಲ್ಲೆ ಎಚ್ಚೆತ್ತಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ಗ್ರಾಹಕರು ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸಿಕೊಂಡು ಇ ಕೆವೈಸಿ ಮಾಡಬಹುದು ಎಂದು ಹೇಳಿದ್ದಾರೆ. ಇದಲ್ಲದೆ ಕೇಂದ್ರ ಸರ್ಕಾರವು ಇ-ಕೆವೈಸಿ ದೃಢೀಕರಣಕ್ಕೆ ಯಾವುದೇ ಗಡುವನ್ನು ನಿಗದಿಪಡಿಸಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಇ-ಕೆವೈಸಿ ದೃಢೀಕರಣಕ್ಕೆ ಯಾವುದೇ ಗಡುವನ್ನು ನಿಗದಿಪಡಿಸಿಲ್ಲ ಎಂದು ಹೇಳಿರುವ ಸಚಿವ ಹರ್ದೀಪ್ ಸಿಂಗ್ ಪುರಿ, ಗ್ಯಾಸ್ ಏಜೆನ್ಸಿಗಳಲ್ಲಿ ಗ್ರಾಹಕರನ್ನು ಮಸ್ಟರಿಂಗ್ ಮಾಡದಂತೆ ನೋಡಿಕೊಳ್ಳಲು ತೈಲ ಮಾರುಕಟ್ಟೆ ಕಂಪನಿಗಳಿಗೆ ನಿರ್ದೇಶನ ನೀಡಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಅವರು, "ಈ ಚಟುವಟಿಕೆಗೆ ತೈಲ ಮಾರುಕಟ್ಟೆ ಕಂಪನಿಗಳು ಅಥವಾ ಕೇಂದ್ರ ಸರ್ಕಾರದಿಂದ ಯಾವುದೇ ಗಡುವು ಇಲ್ಲ. ಎಲ್‌ಪಿಜಿ ವಿತರಕರ ಶೋರೂಮ್‌ಗಳಲ್ಲಿ ಗ್ರಾಹಕರನ್ನು ತಪ್ಪ ದಾರಿಗೆ ಎಳೆಯುತ್ತಿಲ್ಲ ಎಂಬುದನ್ನು ಕಂಪನಿಗಳು ನೋಡಿಕೊಳ್ಳಬೇಕು" ಎಂದು ತಿಳಿಸಿದ್ದಾರೆ.
ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಅವರು ಬರೆದ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಹರ್ದೀಪ್ ಸಿಂಗ್ ಪುರಿ ಅವರ ಪೋಸ್ಟ್ ಬಂದಿದೆ. ಆಯಾ ಗ್ಯಾಸ್ ಏಜೆನ್ಸಿಗಳಲ್ಲಿ ಮಾಡಬೇಕಾದ ಮಸ್ಟರಿಂಗ್ ನಿಯಮಿತ ಎಲ್‌ಪಿಜಿ ಹೊಂದಿರುವವರಿಗೆ ಅನಾನುಕೂಲತೆಯನ್ನು ಉಂಟುಮಾಡಿದೆ ಎಂದು ಸತೀಶನ್ ಆರೋಪಿಸಿದ್ದಾರೆ.

ಇ-ಕೆವೈಸಿ ಆಧಾರ್ ದೃಢೀಕರಣವನ್ನು ಜಾರಿಗೊಳಿಸುವ ಹಿಂದಿರುವ ಉದ್ದೇಶವನ್ನು ಕೇಂದ್ರ ಸಚಿವ ಹರ್ದೀಪ್ ಸಿಂಗ್ ವಿವರಿಸಿದ್ದಾರೆ. ಇದು ಎಲ್‌ಪಿಜಿ ಪಡೆಯಲು ಸುಳ್ಳು ಮಾಹಿತಿ ನೀಡಿದ ನಕಲಿ ಗ್ರಾಹಕರನ್ನು ತೆಗೆದುಹಾಕುವ ಗುರಿಯನ್ನು ಹೊಂದಿದೆ ಎಂದಿದ್ದಾರೆ. "ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಎಲ್‌ಪಿಜಿ ಗ್ರಾಹಕರಿಗೆ ಇ-ಕೆವೈಸಿ ಆಧಾರ್ ದೃಢೀಕರಣವನ್ನು ಕೈಗೊಳ್ಳುತ್ತಿವೆ. ಅವರ ಹೆಸರಿನ ವಾಣಿಜ್ಯ ಸಿಲಿಂಡರ್‌ಗಳನ್ನು ಕೆಲವು ಗ್ಯಾಸ್ ವಿತರಕರು ಹೆಚ್ಚಾಗಿ ಬುಕ್ ಮಾಡುತ್ತಾರೆ. ನಕಲಿ ಗ್ರಾಹಕರನ್ನು ತೆಗೆದುಹಾಕಲು ಈ ಪ್ರಕ್ರಿಯೆಯು ಈಗ 8 ತಿಂಗಳಿಗೂ ಹೆಚ್ಚು ಕಾಲ ಜಾರಿಯಲ್ಲಿದೆ" ಎಂದು ಹೇಳಿದ್ದಾರೆ.
ಎಲ್‌ಪಿಜಿ e-KYC ದೃಢೀಕರಣಕ್ಕಾಗಿ ಗ್ರಾಹಕರು OMC ಅಪ್ಲಿಕೇಶನ್ ಅನ್ನು ಬಳಸಬಹುದು ಅಥವಾ ಅಂಗಡಿಗೆ ಭೇಟಿ ನೀಡಬಹುದು. "ಈ ಪ್ರಕ್ರಿಯೆಯಲ್ಲಿ, LPG ವಿತರಣಾ ಸಿಬ್ಬಂದಿ, ಗ್ರಾಹಕರಿಗೆ LPG ಸಿಲಿಂಡರ್‌ಗಳನ್ನು ತಲುಪಿಸುವಾಗ, ರುಜುವಾತುಗಳನ್ನು ಪರಿಶೀಲಿಸುತ್ತಾರೆ. ವಿತರಣಾ ಸಿಬ್ಬಂದಿ ತಮ್ಮ ಮೊಬೈಲ್ ಫೋನ್ ಬಳಸಿ ಗ್ರಾಹಕರ ಆಧಾರ್ ರುಜುವಾತುಗಳನ್ನು ಅಪ್ಲಿಕೇಶನ್ ಮೂಲಕ ಸೆರೆಹಿಡಿಯುತ್ತಾರೆ. ಗ್ರಾಹಕರಿಗೆ ಒಟಿಪಿ ಬರರುತ್ತದೆ. ಇದನ್ನು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಳಸಲಾಗುತ್ತದೆ" ಎಂದು ಇ ಕೆವೈಸಿ ಮಾಡಿಸುವ ಬಗ್ಗೆ ತಿಳಿಸಿದ್ದಾರೆ.












Click it and Unblock the Notifications