ಮೆಟ್ರೋ ನಿಲ್ದಾಣದಲ್ಲಿ ಪ್ರೇಮಿಗಳ ಲಿಪ್‌ಲಾಕ್; ವಿಡಿಯೋ ಭಾರೀ ವೈರಲ್
Metro Station: ಮೆಟ್ರೋ ವಿಚಾರ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಇದೀಗ ಪ್ರೇಮಿಗಳಿಬ್ಬರು ತಮಗೇ ಅರಿವಿಲ್ಲದಂತೆ ಮೆಟ್ರೋ ನಿಲ್ದಾಣದಲ್ಲೇ ಒಬ್ಬರಿಗೊಬ್ಬರು ಲಿಪ್ ಕಿಸ್ ಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಹಾಗಾದರೆ ಈ ಘಟನೆ ನಡೆದಿರುವುದು ಎಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಒಂದು ಕಡೆ ನಿಜವಾದ ಪ್ರೇಮಕ್ಕೆ ಕಣ್ಣಿಲ್ಲ ಕುರುಡು ಅಂತೆಲ್ಲ ಹೇಳುತ್ತಾರೆ. ಮತ್ತೊಂದೆಡೆ ಇನ್ನೂ ಕೆಲವರು ತಮಗೇ ಸರಿವಿಲ್ಲದೇ ಎಲ್ಲೆದರಲ್ಲೇ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ತೋರುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಕೆಲ ಅಂಧ ಪ್ರೇಮಿಗಳು, ರೈಲು, ಮೆಟ್ರೋ, ಬಸ್, ಪಾರ್ಕ್ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಯಾರೇ ಇದ್ದರೂ ತಲೆಕೆಡಸಿಕೊಳ್ಳದೇ ತಮಗೆಷ್ಟಬಂದಂತೆ ಅಸಭ್ಯ ವರ್ತನೆ ತೋರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿಬಿಟ್ಟಿದೆ.

ಇದೀಗ ಮೆಟ್ರೋ ನಿಲ್ದಾಣದಲ್ಲಿ ಪ್ರೇಮಿಗಳಿಬ್ಬರು ಯಾವುದಕ್ಕೂ ಕ್ಯಾರೆ ಅನ್ನದೇ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೆದುರೇ ಪರಸ್ಪರ ಬಿಗಿಯಾಗಿ ತಬ್ಬಿಕೊಂಡು ರೊಮ್ಯಾನ್ಸ್ ಮಾಡುವ ಮೂಲಕ ಒಬ್ಬರಿಗೊಬ್ಬರು ಕಿಸ್ ಕೊಟ್ಟುಕೊಳ್ಳುತ್ತಿರುವ ಘಟನೆ ಕೋಲ್ಕತ್ತಾದ ಕಾಳಿಘಾಟ್ ಮೆಟ್ರೋ ನಿಲ್ದಾಣದಲ್ಲಿ ನಡೆಸಿದೆ. ಇನ್ನು ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಈ ಪ್ರೇಮಿಗಳಿಬ್ಬರ ಅಸಭ್ಯ ವರ್ತನೆಗೆ ನೆಟ್ಟಿಗರು ಕೆಂಡಕಾರುತ್ತಿದ್ದಾರೆ.
ಶುಭಾಂಗಿ ಪಂಡಿತ್ (Babymishra_) ಪಂಡಿತ್ ಎಂಬವರು ಈ ವಿಡಿಯೋವನ್ನು ತಮ್ಮ ಟ್ವೀಟ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೆಟ್ರೋ ನಿಲ್ದಾಣದಲ್ಲಿದ್ದ ಪ್ರಯಾಣಿಕರ ಎದುರಲ್ಲೇ ಪ್ರೇಮಿಗಳಿಬ್ಬರು ಪರಸ್ಪರ ತಬ್ಬಿಕೊಂಡು ರೊಮ್ಯಾನ್ಸ್ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದಾಗಿದೆ.
ಇನ್ನು ಈ ವಿಡಿಯೋವನ್ನು ಡಿಸೆಂಬರ್ 15ರಂದು ಹಂಚಿಕೊಳ್ಳಲಾಗಿದ್ದು, ಇದನ್ನು ವೀಕ್ಷಣೆ ಮಾಡಿದಂತಹ ನೆಟ್ಟಿಗರು ಆ ಅಂಧ ಪ್ರೇಮಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಒಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ವರ್ತಿಸುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಮತ್ತೊಬ್ಬ ಬಳಕೆದಾರರು ಸಾರ್ವಜನಿಕ ಸ್ಥಳಗಳಲ್ಲಿ ಸಭ್ಯ ರೀತಿಯಲ್ಲಿ ವರ್ತಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಎಂಬ ಕಾಮೆಂಟ್ ಬಾಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೆಲವು ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ತೋರುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಲೇ ಇದ್ದಾರೆ. ಅಲ್ಲದೆ, ಇಂತಹ ವಿಡಿಯೋಗಳನ್ನು ಗಮನಿಸಿದಂತಹ ಕೆಲ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಸವನ್ನು ಅರ್ಧಕ್ಕೆ ನಿಲ್ಲಿಸಿದ ಉದಾಹರಣೆಗಳಿವೆ. ಹೀಗೆ ಯಾರೋ ಒಬ್ಬರು ಮಾಡಿದ ಇಂತಹ ಕೆಲವರ ಅಸಭ್ಯದ ಕೆಲಸಗಳು ಏನೂ ತಪ್ಪು ಮಾಡದ ಬೇರೆ ವಿದ್ಯಾರ್ಥಿಗಳ ಭವಿಷ್ಯದ ಮೇಲೂ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಮಕ್ಕಳು ಏನೇ ಕೆಟ್ಟ ಕೆಲಸ ಮಾಡಿದರೂ ಕೂಡ ಕೊನೆಗೆ ಕಪ್ಪು ಚುಕ್ಕಿ ಬರುವುದೇ ಪೋಷಕರ ಬುಡಕ್ಕೆ.
ಇಂತಹ ಘಟನೆಗಳನ್ನು ಕಂಡಂತಹ ಕೆಲ ಪೋಷಕರು ತಮ್ಮ ಏನೂ ತಪ್ಪು ಮಾಡದಂತಹ ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನೂ ಕೂಡ ಅರ್ಧಕ್ಕೆ ನಿಲ್ಲಿಸುವ ಮಟ್ಟಕ್ಕೆ ಇಳಿದಿರುವ ಉದಾಹರಣೆಗಳಿವೆ. ಈ ದೃಷ್ಟಿಯಲ್ಲಾದರೂ ವಿದ್ಯಾರ್ಥಿಗಳು ಎಚ್ಚೆತ್ತುಕೊಂಡು ತಮ್ಮ ತಂದೆ-ತಾಯಂದಿರ ಆಸೆಯಂತೆ ಕೆಟ್ಟ ದಾರಿ ಹಿಡಿಯದೇ ಉತ್ತಮ ವಿದ್ಯಾಭ್ಯಾಸ ಮಾಡುವ ಉನ್ನತ ಮಟ್ಟಕ್ಕೆ ಸಾಗಬೇಕೆನ್ನುವುದೇ ನಮ್ಮ ಆಶಯ.
-
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Viral Video: ಕಡಿಮೆ ಹಣದಲ್ಲಿ ಬದುಕೋದು ಹೇಗೆ ? ಬೆಂಗಳೂರು ಇಂಟರ್ನ್ ಹೇಳಿದ ಟ್ರಿಕ್ಗಳು -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ












Click it and Unblock the Notifications