ಪ್ರಧಾನಿ ಮೋದಿಗೆ ಲೋಕಮಾನ್ಯ ತಿಲಕ್ ಪ್ರಶಸ್ತಿ ನೀಡಲು ಎನ್‌ಸಿಪಿ ವಿರೋಧ: ಶರದ್ ಪವಾರ್ ಮುಖ್ಯ ಅತಿಥಿ! ವಿಪಕ್ಷಗಳಲ್ಲಿ ಗೊಂದಲ
ಲೋಕಸಭಾ ಚುನಾವಣೆ ಹತ್ತಿರ ಬರುತ್ತಇರುವ ಸಂದರ್ಭದಲ್ಲಿ ರಾಷ್ಟ್ರರಾಜಕಾರಣ ರಂಗೇರುತ್ತಿದೆ. ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಬಣವನ್ನು ಸೋಲಿಸಲು ವಿಪಕ್ಷಗಳು ಇಂಡಿಯಾ (INDIA) ಹೆಸರಿನಲ್ಲಿ ಒಂದಾಗಿದ್ದು, ಒಗ್ಗಟ್ಟಾಗಿ ಚುನಾವಣೆ ಎದುರಿಸಲು ರಣತಂತ್ರ ರೂಪಿಸುತ್ತಿವೆ.
ಈಗಾಗಲೇ ವಿಪಕ್ಷಗಳೂ ಎರಡು ಬಾರಿ ಸಭೆ ನಡೆಸಿದ್ದು ಹಲವು ಪ್ರಮುಖ ವಿಚಾರಗಳ ಚರ್ಚೆ ನಡೆಸಿವೆ. ಮೂರನೇ ಸುತ್ತಿನ ಸಭೆ ಮುಂಬೈನಲ್ಲಿ ನಡೆಯಲಿದೆ. ಇದೆಲ್ಲದರ ನಡುವೆ ಎನ್‌ಸಿಪಿ ಮುಖ್ಯಸ್ತ ಶರದ್ ಪವಾರ್ ಅವರ ನಡೆ ಈಗ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ಲೋಕಮಾನ್ಯ ತಿಲಕ್ ಪ್ರಶಸ್ತಿ ನೀಡಲಾಗುತ್ತಿದೆ ಈ ಸಮಾರಂಭಕ್ಕೆ ಎಸ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮುಖ್ಯ ಅತಿಥಿಯಾಗಿದ್ದಾರೆ. ವಿಚಿತ್ರ ಎಂದರೆ ನರೇಂದ್ರ ಮೋದಿಯವರಿಗೆ ಈ ಪ್ರಶಸ್ತಿ ನೀಡುವುದನ್ನು ವಿರೋಧಿಸಿ ಎನ್‌ಸಿಪಿ ಶರದ್ ಪವಾರ್ ಬಣ ಪ್ರತಿಭಟನೆ ಮಾಡುತ್ತಿದೆ.
ಇನ್ನು ಕಾಂಗ್ರೆಸ್ ಕೂಡ ಮೋದಿಗೆ ಲೋಕಮಾನ್ಯ ತಿಲಕ್ ಪ್ರಶಸ್ತಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದೆ ಇದರಲ್ಲಿ ಆಸಕ್ತಿದಾಯಕ ವಿಚಾರ ಎಂದರೆ ಈ ಪ್ರಶಸ್ತಿ ನೀಡುವ ತಿಲಕ್ ಸ್ಮಾರಕ ಮಂದಿರ ಟ್ರಸ್ಟ್‌ಗೆ ಕಾಂಗ್ರೆಸ್‌ನವರಾದ ರೋಹಿತ್ ತಿಲಕ್ ಅವರು ಉಪಾಧ್ಯಕ್ಷ ಎನ್ನುವುದು.
ಈ ಬಗ್ಗೆ ಟ್ವೀಟ್ ಮಾಡಿರುವ ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಇದನ್ನು ವಿಚಿತ್ರ ರಾಜಕೀಯ ಎಂದು ಕರೆದಿದ್ದಾರೆ. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರು ಅಲ್ಲ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ.
ರಾಜಕೀಯದಲ್ಲಿ ತಿರುವು?
ಇನ್ನು ಶರದ್ ಪವಾರ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಪಕ್ಷಗಳ ಕೋಪಕ್ಕೆ ಕಾರಣವಾಗಿದೆ. ಅವರೇ ಪಕ್ಷ ಪ್ರಶಸ್ತಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದಾಗ ಪವಾರ್ ಯಾಕೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎನ್ನುವುದು ಸದ್ಯ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಕೆಲವು ರಾಜಕೀಯ ಮೂಲಗಳ ಪ್ರಕಾರ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಎರಡೂ ಬಣಗಳು ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರಗಳನ್ನು ಸೇರಲಿವೆ ಎನ್ನುವ ವದಂತಿಗಳು ಕೂಡ ಹಬ್ಬಿವೆ. ಇನ್ನೂ ಆಸಕ್ತಿದಾಯಕ ವಿಚಾರ ಎಂದರೆ, ಈ ಕಾರ್ಯಕ್ರಮಕ್ಕೆ ಮೋದಿ ಅವರನ್ನು ಆಹ್ವಾನಿಸಲು, ಒಪ್ಪಿಗೆ ಪಡೆಯಲು ಸಹಾಯ ಮಾಡಿದ್ದು ಶರದ್ ಪವಾರ್ ಎಂದು ರೋಹಿತ್ ತಿಲಕ್ ಹೇಳಿದ್ದಾರೆ.
ಮಹಾರಾಷ್ಟ್ರ ವಿಕಾಸ್ ಅಘಡಿ ಅಸಮಾಧಾನ
ಕಾರ್ಯಕ್ರಮಕ್ಕೆ ಹಾಜರಾಗುವ ಶರದ್ ಪವಾರ್ ಅವರ ನಿರ್ಧಾರವು ಸರಿಯಲ್ಲ ಎಂದು ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಹೇಳಿದೆ. ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಹಲವು ಗೊಂದಲಗಳು ಉಂಟಾಗುತ್ತವೆ, ಆದ್ದರಿಂದ ಶರದ್ ಪವಾರ್ ಈ ಕಾರ್ಯಕ್ರಮಕ್ಕೆ ಹಾಜರಾಗಬಾರದು ಎಂದು ಹೇಳಿದೆ.
"ವಿಪಕ್ಷಗಳ ಒಕ್ಕೂಟದ ನಾಯಕರೊಬ್ಬರು ಅಂತಹ ಸಮಾರಂಭದಲ್ಲಿ ಭಾಗವಹಿಸಲು ಆಯ್ಕೆ ಮಾಡಿದಾಗ, ಗೊಂದಲ ಉಂಟಾಗುತ್ತದೆ. ಪವಾರ್ ಒಬ್ಬ ಅನುಭವಿ ನಾಯಕ, ನಾವು ಅವರಿಗೆ ಇದನ್ನೆಲ್ಲ ಹೇಳಬೇಕಾಗಿಲ್ಲ" ಎಂದು ಶಿವಸೇನೆ (ಯುಬಿಟಿ) ವಕ್ತಾರ ಸಂಜಯ್ ರಾವುತ್ ಹೇಳಿದ್ದಾರೆ.
ಶರದ್ ಪವಾರ್ ಅವರ ನಿಲುವಿನ ಬಗ್ಗೆ ಗೊಂದಲವಿರಬಹುದು. ಅವನು ಗಾಳಿಯನ್ನು ತೆರವುಗೊಳಿಸಬೇಕಾಗುತ್ತದೆ ಆದರೆ ನಾವು ಒಟ್ಟಿಗೆ ಇದ್ದೇವೆ. ವಿಪಕ್ಷಗಳ ಒಕ್ಕೂಟ ಪ್ರಬಲವಾಗಿದೆ ಎಂದು ಅವರು ಹೇಳಿದರು. ಶರದ್ ಪವಾರ್ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರ್ಧಾರವನ್ನು ಅವರು ಮರುಪರಿಶೀಲಿಸಬೇಕು ಎಂದು ಕಾಂಗ್ರೆಸ್ ಕೂಡ ಒತ್ತಾಯಿಸಿದೆ.












Click it and Unblock the Notifications