ಜೂನ್ 17 ರಿಂದ ಹದಿನಾರನೇ ಲೋಕಸಭೆ ಮುಂಗಾರು ಅಧಿವೇಶನ
ನವದೆಹಲಿ, ಮೇ 31 : 16ನೇ ಲೋಕಸಭೆಯ ಮುಂಗಾರು ಅಧಿವೇಶನ ಜೂನ್ 17 ರಿಂದ ಆರಂಭವಾಗಲಿದೆ. 2019ರ ಲೋಕಸಭಾ ಚುನಾವಣೆ ಮುಗಿದು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನವಿದು.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಮುಂಗಾರು ಅಧಿವೇಶದನ ದಿನಾಂಕವನ್ನು ನಿಗದಿ ಮಾಡಲಾಗಿದೆ. ಜೂನ್ 17ರಿಂದ ಅಧಿವೇಶನ ಆರಂಭವಾಗಲಿದೆ.
ಜೂನ್ 17 ರಿಂದ 26ರ ತನಕ ಮುಂಗಾರು ಅಧಿವೇಶನ ನಡೆಯಲಿದೆ. ಜೂನ್ 19ರಂದು ಲೋಕಸಭೆಗೆ ನೂತನ ಸ್ಪೀಕರ್ ಆಯ್ಕೆ ನಡೆಯಲಿದೆ. ಜೂನ್ 17 ರಿಂದ 19ರ ತನಕ ಹಂಗಾಮಿ ಸ್ಪೀಕರ್ ನೇತೃತ್ವದಲ್ಲಿ 16ನೇ ಲೋಕಸಭೆಗೆ ಆಯ್ಕೆಯಾದ ನೂತನ ಸದಸ್ಯರ ಪ್ರಮಾಣ ವಚನ ನಡೆಯಲಿದೆ.

ರಾಷ್ಟ್ರಪತಿಗಳು ಉಭಯ ಸದನವನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಲೋಕಸಭಾ ಕಾರ್ಯ ಕಲಾಪ ಆರಂಭವಾಗಲಿದೆ. ಜೂನ್ 26ಕ್ಕೆ ಅಧಿವೇಶನ ಮುಕ್ತಾಯಗೊಳ್ಳಲಿದ್ದು, ಜುಲೈನಲ್ಲಿ ಬಜೆಟ್ ಅಧಿವೇಶನ ನಡೆಯುವ ಸಾಧ್ಯತೆ ಇದೆ.












Click it and Unblock the Notifications